ಶಕ್ತಿ ದೇವತೆ ‌‌ ಬುಡಕಟ್ಟು ಸಂಸ್ಕ್ರತಿಯ ಆರಾಧ್ಯದೈವ ಗೌರಸಮುದ್ರ ಮಾರಮ್ಮ ಜಾತ್ರೆಗೆ ಕೋವಿಡ್ ಕರಿನೆರಳು ದರ್ಶನಕ್ಕೆ ಮಾತ್ರ ಅವಕಾಶ.

 

ವಿಶೇಷ ವರದಿ: ಚಳ್ಳಕೆರೆ ತಾಲೂಕಿನ ಗೌರಸಮುದ್ರ ಗ್ರಾಮದಲ್ಲಿನ ಗೌರಸಮುದ್ರ ಮಾರಮ್ಮ ಜಾತ್ರೆ ಎಂದರೆ ರಾಜ್ಯದ ದೊಡ್ಡ ಜಾತ್ರೆಗಳಲ್ಲಿ ಇದು ಸಹ ಒಂದು. ಮಧ್ಯ ಕರ್ನಾಟಕದ ಒಂದು ಐತಿಹಾಸಿಕ ಜಾತ್ರೆ ಸಹ ಆಗಿತ್ತು, ಗೌರಸಮುದ್ರ ಮಾರಮ್ಮ ಬುಡಕಟ್ಟು ಸಮಾಜದ ಆರಾಧ್ಯ ದೈವ, ಬುಡಕಟ್ಟು ಸಂಸ್ಕ್ರತಿಯ ಎತ್ತಿ ಹಿಡಿಯುವ ಜಾತ್ರೆಯಾಗಿದ್ದು ಪರಿಶಿಷ್ಟ ಜಾತಿ, ಪಂಗಡ ಜನರ ವಿಶೇಷ ಸಂಸ್ಕೃತಿಗಳನ್ನು ಬಿಂಬಿಸುವ ಮೂಲಕ ಗ್ರಾಮೀಣ ಭಾಷೆಯಲ್ಲಿ ‘ಗೌಸಂದ್ರ ಮಾರಮ್ಮ ಜಾತ್ರೆ’ ಎಂದೇ ಖ್ಯಾತಿಯಾಗಿದೆ.

ಜಿಲ್ಲೆಯಲ್ಲಿ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಜಾತ್ರೆಯ ನಂತರದ ಸ್ಥಾನ ಗೌರಸಮುದ್ರ ಮಾರಮ್ಮನ ಅತಿ ದೊಡ್ಡ ಜಾತ್ರೆಯಾಗಿದೆ. ಜನರು ತಮ್ಮ ಕಷ್ಟ ,ಕಾರ್ಪಣ್ಯಗಳ ದೈವಿ ಮುಂದೆ ಹರಕೆ ಕಟ್ಟಿಕೊಂಡರೆ ಖಂಡಿತ ನಡೆಸಿಕೊಡುತ್ತಾಳೆ ಎಂಬುದು ನಂಬಿಕೆ. ಮಾರಮ್ಮನ ಮೆರವಣಿಗೆ ಸಹ ನಡೆಯುತ್ತದೆ, ಮಾರಮ್ಮ ಮೂಲ ಸ್ಥಾನ ತುಂಬಲು ಬಳಿ ಪೂಜೆ ನಡೆಸುವ ಮೂಲಕ  ಜಾತ್ರೆ ಆರಂಭವಾಗುತ್ತದೆ. ಆಂಧ್ರದ ನೀಡುಗಲ್ಲು ಮೂಲದಿಂದ ಬಂದು ತುಂಬಲಲ್ಲಿ ನೆಲಸಿ ನಂತರ ಊರಿನ ಒಳಗೆ ಪಡೆದು ನಂತರ ದೇವಸ್ಥಾನ ಕಟ್ಟಿಸಿಕೊಂಡಿದ್ದಾಳೆ ದೇವಿ ಎಂದು ಇತಿಹಾಸ ತಿಳಿಸುತ್ತದೆ. 200 ಕಿಲೋ ಮೀಟರ್ ಸುತ್ತಲೂ ಸಹ ಶಕ್ತಿ ದೇವತೆ ಎಂದರೆ ಗೌರಸಮುದ್ರ ಮಾರಮ್ಮ ಆಗಿದ್ದಳೆ. ಸುಮಾರು ರಾಜ್ಯದ ಆಂಧ್ರ ಪ್ರದೇಶ, ತಮಿಳುನಾಡು ಮತ್ತು ರಾಜ್ಯ ಮೂಲೆ ಮೂಲೆಗಳಿಂದ ಬಂದು ಭಕ್ತರು ತಮ್ಮ ಇಷ್ಟಾರ್ಥ ಸಿದ್ದಿಗೆ ಮಾರಮ್ಮನ ಮೊರೆ ಹೋಗುತ್ತಾರೆ. ರಾಜ್ಯದಲ್ಲಿ ಎಲ್ಲಾ ಭಾಗಗಳಲ್ಲಿ ಮಾರಮ್ಮನ ಹಬ್ಬ ಆರಂಭವಾಗುವುದು ಗೌರಸಮುದ್ರ ಮಾರಮ್ಮ ಜಾತ್ರೆ ನಡೆದ ನಂತರ ಬೇರೆಡೆ ಮಾರಮ್ಮನ ಹಬ್ಬಗಳು ಪ್ರಾರಂಭವಾಗುತ್ತದೆ. ಪ್ರತಿ ಸೋಮವಾರ ಸಿಹಿ ಮಂಗಳವಾರ ನಾನ್ ವೆಜ್ ಮಾಡುತ್ತಾರೆ, ಅಥವಾ ಮಂಗಳವಾರ ಸಿಹಿ, ಬುಧವಾರ ನಾನ್ ವೆಜ್ ರೀತಿಯಲ್ಲಿ ಒಂದು ತಿಂಗಳ ಕಾಲ ಮಾರಮ್ಮನ ಜಾತ್ರೆ ಸಂಭ್ರಮ ಸಡಗರದಿಂದ ನಡೆಯುತ್ತದೆ.

3-4 ದಿನಗಳ ವಿವಿಧ ಕಾರ್ಯಗಳ ಮೂಲಕ ನಡೆಯುತ್ತ ಜಾತ್ರೆಗೆ ಭಕ್ತರು ಮಾರಮ್ಮನಿಗೆ ಬೇವಿನ ಸೀರೆ ಹುಟ್ಟು ಉಪವಾಸದಿಂದ ಭಕ್ತಿ ಸಪರ್ಪಿಸುತ್ತಾರೆ. ಮಧ್ಯಾಹ್ನದ ಸಮಯದಲ್ಲಿ ಸಿಡಿ ಉತ್ಸವ ಸಹ ನಡೆಯುತ್ತಿದ್ದು ಸಿಡಿಯಲ್ಲಿ ಭಾಗವಹಿಸುವ ಭಕ್ತರು 5 ಅಥವಾ 9 ದಿನಗಳ ಕಾಲ ಹಾಲು ,ಹಣ್ಣು ಹಂಪಲು ಮಾತ್ರ ಸೇವಿಸುತ್ತಾರೆ.ಕೇಲವರು ಉಪವಾಸ ಇದ್ದು ಸಿಡಿಯಲ್ಲಿ ಭಾಗವಹಿಸುವುದು ಪ್ರತೀತಿ ಎಂದು ತಿಳಿಯಬಹುದು‌. ಸಿಡಿ ಉತ್ಸವವನ್ನು ಕೋನಸಾಗರದ ನಾಯಕ ಜನಾಂಗದವರು ನಡೆಸಿಕೊಡುತ್ತಾರೆ. ಸಿಡಿಗಿಂತ ಮುಂಚಿತವಗಾಗಿ ಸಿಡಿ ಅಂಗವಾಗಿ ಭಾನುವಾರ ಮತ್ತು ಸೋಮವಾರ ಹುತ್ತಕ್ಕೆ ಮತ್ತು ಮೂಲ ಸನ್ನಿಧಿ ದೇವಿಗೆ ಅಭಿಷೇಕ ಮಾಡುತ್ತಾರೆ.

ಜಾತ್ರೆಯಲ್ಲಿ ಡೊಳ್ಳು ಕುಣಿತ, ಹುರಿಮೆ ಶಬ್ದ, ಟಮಟೆ, ಗೊರಪ್ಪನವರು ಸಹ ಭಾಗವಹಿಸಿರುತ್ತಾರೆ. ಈ ಭಾಗದ ಬುಡಕಟ್ಟು ಜನರು ಸಹ ಎಷ್ಟೆ ಕಷ್ಟ ಕಾಲದಲ್ಲಿ ಗೌರಸಮುದ್ರ ಮಾರಮ್ಮ ಜಾತ್ರೆ ಮಾತ್ರ ಜನರು ನಿಲ್ಲಿಸದೆ ಅದ್ದೂರಿಯಾಗಿ ಮಾಡಿಕೊಂಡು ತಮಗೆ ಬರಗಾಲವಿದ್ದರು ದೇವಿ ಕೈಬಿಟ್ಟಿಲ್ಲ ಎಂದು ಭಕ್ತರ ನಂಬಿಕೆ.ಎಲ್ಲಾರೂ ದೇವಿಗೆ ರಾಜ್ಯದ ಜನರಿಗೆ ರೋಗ ರುಜನಗಳು ಬರದಂತೆ ಮಳೆ ಬೆಳೆ ಸಮೃದ್ಧವಾಗಿ ಆಗಲಿ ಎಂದು ಸರ್ವ ಭಕ್ತರು ಪ್ರಾರ್ಥನೆ ಮಾಡುತ್ತಿದ್ದರು. ಎಲ್ಲಾ‌ ಭಾಗಗಳಲ್ಲಿ ಸೇರಿ ಒಂದು ತಿಂಗಳು ಜಾತ್ರೆ ಮುಗಿದ ನಂತರ ಕೊನೆಯಲ್ಲಿ ತುಂಬಲಿನಲ್ಲಿ ಮರಿಪರಿಷೆ ನಡೆಯುವ ಮೂಲಕ ಇಡೀ ಜಾತ್ರೆಗೆ ತೆರೆಬೀಳುತ್ತದೆ.

ಈ ಬಾರಿ ಜಾತ್ರೆಗೆ ದೇಶಕ್ಕೆ ಮತ್ತು ರಾಜ್ಯಕ್ಕೆ ಒಕ್ಕರಿಸಿರುವ ಮಹಮಾರಿ ಕೋವಿಡ್ ನಿಂದ ಅಂತರ ಕಾಯ್ದಕೊಳ್ಳಲು ಆಗಲ್ಲ, ಹೆಚ್ಚು ಜನರ ಮೇಲೆ ಕೋವಿಡ್ ಸೋಂಕು ತಗುಲುವ ದೃಷ್ಟಿಯಿಂದ ಜಿಲ್ಲಾಡಳಿತ ಜಾತ್ರೆಗೆ ಅವಕಾಶ ನೀಡದೆ ಜಾತ್ರೆ ರದ್ದು ಮಾಡಿದ್ದು. ಕೇವಲ ದೇವರ ದರ್ಶನಕ್ಕೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours