ಮಳೆ ಬೆಳೆ ಸಂಪಾಗುತ್ತದೆ ಎಂದ ಮೈಲಾರ ಕಾರ್ಣಿಕ, ಧರ್ಮದರ್ಶಿ ಅಪಸ್ವರ

 

ವಿಜಯನಗರ ಫೆಬ್ರವರಿ 27: ‘ಮಳೆ ಬೆಳೆ ಎಲ್ಲಾ ಸಂಪಾಗುತ್ತದೆ. ರೈತರಿಗೆ ಈ ಬಾರಿ ಒಳ್ಳೆಯದಾಗುತ್ತದೆ’ ಇದು ಈ ವರ್ಷ ಭರವಸೆ ಹುಟ್ಟಿಸುವ ಮೈಲಾರ ಲಿಂಗೇಶ್ವರ ಕಾರ್ಣಿಕ. ಇದು ಬರಗಾಲದಿಂದ ತತ್ತರಿಸಿದ ಜನತೆಗೆ ನಿಟ್ಟುಸಿರು ಬಿಡುವಂತೆ ಮಾಡಿದೆ. ಆದರೆ ಈ ವರ್ಷದ ಮೈಲಾರಲಿಂಗೇಶ್ವರ ಕಾರ್ಣಿಕ ನುಡಿ ಸತ್ಯವಾಗುವುದಿಲ್ಲ ಎಂದು ದೇವಸ್ಥಾನದ ಧರ್ಮದರ್ಶಿ ಅಪಸ್ವರ ನುಡಿದಿದ್ದಾರೆ.

ಹೌದು… ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮೈಲಾರದಲ್ಲಿ ಈ ವರ್ಷದ ದೈವವಾಣಿಯನ್ನು ರಾಮಪ್ಪ ಗೋರವಯ್ಯ ನುಡಿದಿದ್ದಾರೆ. ಮೈಲಾರ ಲಿಂಗೇಶ್ವರ ಜಾತ್ರೆಯಲ್ಲಿ ನುಡಿಯುವ ಕಾರ್ಣಿಕವನ್ನು ರಾಜ್ಯದ ಮುನ್ನುಡಿ ಎಂದೇ ಭಾವಿಸಲಾಗುತ್ತದೆ. 2024ನೇ ಸಾಲಿನಲ್ಲಿ ನಡೆದ ಜಾತ್ರೆಯ ವೇಳೆ ಮೈಲಾರಲಿಂಗೆಶ್ವರ ದೇವರ ಗೊರವಯ್ಯ ‘ಸಂಪಾಯಿತಲೇ ಪರಾಕ್’ ಎಂಬ ಕಾರ್ಣಿಕವನ್ನು ನುಡಿದಿದ್ದಾರೆ.

ಮೈಲಾರದ ಡಂಗನಮರಡಿಯಲ್ಲಿ ಐತಿಹಾಸಿಕ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವವನ್ನು ಸೋಮವಾರ ಸಂಜೆ ನುಡೆಸಯಲಾಗಿದೆ. 18 ಎತ್ತರದ ಅಡಿ ಬಿಲ್ಲನ್ನೇರಿದ ಗೊರವಯ್ಯ ರಾಮಪ್ಪ ಸದ್ದಲೇ ಎಮದು ಹೇಳಿದೊಡನೇ ಎಲ್ಲರೂ ಶಾಂತವಾಗಿದ್ದರು. ಮರು ಕ್ಷಣವೇ ‘ಸಂಪಾಯಿತಲೇ ಪರಾಕ್’ ಎಂದು ಕಾರ್ಣಿಕವನ್ನು ನುಡಿದು ಅಲ್ಲಿಂದ ಬಿದ್ದಿದ್ದಾರೆ. ಈ ಕಾರ್ಣಿಕವನ್ನು ರಾಜ್ಯದ ಒಂದು ವರ್ಷದ ಭವಿಷ್ಯವಾಣಿ ಎಂದೇ ಕರೆಯಲಾಗುತ್ತದೆ. ಆದರೆ ಈ ಬಾರಿ ಮೈಲಾರಲಿಂಗೇಶ್ವರ ಕಾರ್ಣಿಕ ನುಡಿಯ ಬಗ್ಗೆ ಅಪಸ್ವರ ಕೇಳಿ ಬಂದಿದೆ.

ಇದನ್ನೂ ಓದಿ: ನಗರಸಭೆ ಸದಸ್ಯ ಡಿ.ಮಲ್ಲಿಕಾರ್ಜುನ್( ಪೋಲಿಸ್ ಮಲ್ಲಿ) ನಿಧನ

[t4b-ticker]

You May Also Like

More From Author

+ There are no comments

Add yours