ಅಪ್ಪ ಆಟೋ ಡ್ರೈವರ್ ಮಗಳು ಜಡ್ಜ್ | ಅಪರೂಪದ ಸಾಧನೆಗೆ ಕೋಟೆನಾಡು ಸಾಕ್ಷಿ

 

ಚಿತ್ರದುರ್ಗ:  ರಾಜ್ಯದ ನೂತನ ಸಿವಿಲ್ ನ್ಯಾಯಾಧೀಶರಾಗಿ 33 ಯುವ ವಕೀಲರು ನೇಮಕವಾಗಿದ್ದಾರೆ. ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಯುವತಿ ಟಿ.ಸುಮಾ ಕೂಡಾ ಪರಿಶ್ರಮದಿಂದ ನ್ಯಾಯಾಧೀಶರಾಗುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.
2023 ನವೆಂಬರ್ ನಲ್ಲಿ ನಡೆದಿದ್ದ ಸ್ಪರ್ಧಾತ್ಮಕ ಪರೀಕ್ಷೆ, 2024 ಜನವರಿಯಲ್ಲಿ ನಡೆದಿದ್ದ ಮೌಖಿಕ ಪರೀಕ್ಷೆಯ ಅಂಕಗಳನ್ನು ಆಧರಿಸಿ 33 ಅಭ್ಯರ್ಥಿಗಳನ್ನು ಮೆರಿಟ್ ಆಧಾರದಲ್ಲಿ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆ ಮಾಡಲಾಗಿದೆ.
ಚಿತ್ರದುರ್ಗ ನಗರಕ್ಕೆ ಹೊಂದಿಕೊಂಡಿರುವ ಕೋಡೆನಹಟ್ಟಿಯ ತಿಪ್ಪೇಸ್ವಾಮಿ ಭಾಗ್ಯಮ್ಮ ದಂಪತಿಗಳ ಪುತ್ರಿ ಟಿ.ಸುಮಾ ಮೂರನೇ ಪ್ರಯತ್ನದಲ್ಲಿ ನ್ಯಾಯಾಧೀಶರಾಗಿ ಆಯ್ಕೆಯಾಗುವ ಮೂಲಕ ಸಾಧನೆ ಮಾಡಿದ್ದಾರೆ.
ಮಠದ ಕುರುಬರಹಟ್ಟಿಯ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ ಪೂರೈಸಿರುವ ಟಿ.ಸುಮಾ, ಎಸ್‍ಜೆಎಂ ಮಹಿಳಾ ಕಾಲೇಜಿನಲ್ಲಿ ಪದವಿ ಅಧ್ಯಯನ ಮಾಡಿದ್ದಾರೆ.
ಆನಂತರ ನಗರದ ಸರಸ್ವತಿ ಕಾನೂನು ಕಾಲೇಜಿನಲ್ಲಿ 2020-21ರಲ್ಲಿ ಕಾನೂನು ಪದವಿ ಪಡೆದುಕೊಂಡಿದ್ದಾರೆ.
ಕಾನೂನು ಪದವಿ ಪೂರೈಸಿದ ನಂತರ 2021ರಲ್ಲೇ ನ್ಯಾಯಾಧೀಶರ ಪರೀಕ್ಷೆ ಬರೆದಿದ್ದು, ಸಂದರ್ಶನದಲ್ಲಿ ಪ್ರಯತ್ನ ವಿಫಲವಾಗಿತ್ತು.2022 ರಲ್ಲಿ ಮರಳಿ ಯತ್ನ ಮಾಡಲು ಪರೀಕ್ಷೆ ಕಟ್ಟಿದ ವೇಳೆಯೇ ಅನಾರೋಗ್ಯ ಬಾಧಿಸಿದ ಕಾರಣಕ್ಕೆ ಮೇನ್ಸ್ ಪರೀಕ್ಷೆಗೆ ಹಾಜರಾಗಲಿಲ್ಲ. ಶಸ್ತ್ರಚಿಕಿತ್ಸೆಯ ನಂತರ 2023ರಲ್ಲಿ ಛಲ ಬಿಡದೇ ಮತ್ತೆ ಪರೀಕ್ಷೆ ಬರದಿದ್ದಾರೆ. ಮೂರನೇ ಪ್ರಯತ್ನದಲ್ಲಿ ನ್ಯಾಯಾಧೀಶರಾಗುವ ಮೂಲಕ ತಮ್ಮ ಗುರಿ ತಲುಪಿದ್ದಾರೆ.
ಬಾಕ್ಸ್
ಸುಮಾ ಕುಟುಂಬದ ಹಿನ್ನೆಲೆ:
ಸುಮಾ ಅವರ ತಂದೆ ಆಟೋ ಚಾಲಕರು, ತಾಯಿ ಗೃಹಿಣಿ, ಇವರಿಗೆ ಅಣ್ಣ, ಅಕ್ಕ ಹಾಗೂ ಓರ್ವ ತಮ್ಮ ಇದ್ದಾರೆ. ಎಲ್ಲರೂ ಎಸ್ಸೆಸ್ಸೆಲ್ಸಿ, ಐಟಿಐ ವರೆಗೆ ಓದಿ ವಿದ್ಯಾಭ್ಯಾಸ ಮೊಟಕುಗೊಳಿಸಿದ್ದಾರೆ. ಕುಟುಂಬದಲ್ಲಿ ಪದವಿ ಶಿಕ್ಷಣ ಪಡೆದಿರುವ ಏಕೈಕ ಯುವತಿ ಸುಮಾ
ಆನಂತರ ನಗರದ ಸರಸ್ವತಿ ಕಾನೂನು ಕಾಲೇಜಿನಲ್ಲಿ 2020-21ರಲ್ಲಿ ಕಾನೂನು ಪದವಿ ಪಡೆದುಕೊಂಡಿದ್ದಾರೆ.
ಕಾನೂನು ಪದವಿ ಪೂರೈಸಿದ ನಂತರ 2021ರಲ್ಲೇ ನ್ಯಾಯಾಧೀಶರ ಪರೀಕ್ಷೆ ಬರೆದಿದ್ದು, ಸಂದರ್ಶನದಲ್ಲಿ ಪ್ರಯತ್ನ ವಿಫಲವಾಗಿತ್ತು
2022 ರಲ್ಲಿ ಮರಳಿ ಯತ್ನ ಮಾಡಲು ಪರೀಕ್ಷೆ ಕಟ್ಟಿದ ವೇಳೆಯೇ ಅನಾರೋಗ್ಯ ಬಾಧಿಸಿದ ಕಾರಣಕ್ಕೆ ಮೇನ್ಸ್ ಪರೀಕ್ಷೆಗೆ ಹಾಜರಾಗಲಿಲ್ಲ. ಶಸ್ತ್ರಚಿಕಿತ್ಸೆಯ ನಂತರ 2023ರಲ್ಲಿ ಛಲ ಬಿಡದೇ ಮತ್ತೆ ಪರೀಕ್ಷೆ ಬರದಿದ್ದಾರೆ. ಮೂರನೇ ಪ್ರಯತ್ನದಲ್ಲಿ ನ್ಯಾಯಾಧೀಶರಾಗುವ ಮೂಲಕ ತಮ್ಮ ಗುರಿ ತಲುಪಿದ್ದಾರೆ.
ನ್ಯಾಯಾಧೀಶರಾಗಿ ಆಯ್ಕೆಯಾಗಿರುವ ಸುಮಾ ಅವರ ತಂದೆ, ಅಣ್ಣ ಹಾಗೂ ತಮ್ಮ ಮೂರು ಜನ ಆಟೋ ಚಾಲನೆ ಮಾಡುವ ಮೂಲಕ ಕುಟುಂಬದ ನಿರ್ವಹಣೆ ಮಾಡುತ್ತಿದ್ದಾರೆ.
ಬಾಕ್ಸ್
ಕಾನೂನು ಪದವಿ ಸೇರಿದಾಗಲೇ ಜಡ್ಜ್ ಆಗುವ ಕನಸು ಕಂಡಿದ್ದೆ:
ತುಂಬಾ ಶ್ರಮಪಟ್ಟು ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ಶಿಕ್ಷಣ ಮುಗಿಸಿ, ಸರಸ್ವತಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆಯಲು ಸೇರಿದಾಗಲೇ ನಾನು ನ್ಯಾಯಾಧೀಶೆ ಆಗಬೇಕು ಎಂಬ ಗುರಿಯನ್ನು ಸುಮಾ ಹಾಕಿಕೊಂಡಿದ್ದಾರೆ
ನ್ಯಾಯಾವಾದಿಗಳಾದ ಎಂ.ಸಿ.ಪಾಪಣ್ಣ ಅವರ ಮಾರ್ಗದರ್ಶನದಲ್ಲಿ ಮುಂದುವರೆದು, ಕಠಿಣ ಪರಿಶ್ರಮದಿಂದ ಅಧ್ಯಯನ ಮಾಡಿದ ಪರಿಣಾಮ ಅಂದು ಕಂಡಿದ್ದ ಕನಸು ಇಂದು ನನಸಾಗಿದೆ.
ಯಾರು ಕಠಿಣ ಪರಿಶ್ರಮದಿಂದ ಸಾಧನೆ ಮಾಡುತ್ತಾರೋ ಅವರಿಗೆ ಪ್ರತಿಫಲ ಸೇರುತ್ತದೆ. ಡಾಕ್ಟರ್ ಮಕ್ಕಳು ಡಾಕ್ಟರೇ ಆಗಬೇಕು, ಲಾಯರ್ ಮಕ್ಕಳು ಲಾಯರೇ ಆಗಬೇಕು ಎಂದೇನಿಲ್ಲ. ಶ್ರದ್ಧೆಯಿಂದ ಓದಿದರೆ ಯಾರು ಬೇಕಾದರೂ ಇಂತಹ ಸಾಧನೆ ಮಾಡಬಹುದು.
| ಟಿ.ಸುಮಾ, ನೂತನವಾಗಿ ಆಯ್ಕೆಯಾಗಿರುವ ಸಿವಿಲ್ ನ್ಯಾಯಾಧೀಶರು
[t4b-ticker]

You May Also Like

More From Author

+ There are no comments

Add yours