ಮಧುಗಿರಿ|ಜಾತಿ ಲೆಕ್ಕಚಾರದಲ್ಲಿ ಹನುಮಂತೇಗೌಡಗೆ ಒಲಿದ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನ

 

ತುಮಕೂರು:ತುಮಕೂರು ಜಿಲ್ಲೆಯಲ್ಲಿನ ಮಧುಗಿರಿ  (madhugiri)ಶೈಕ್ಷಣಿಕ ಮತ್ತು ರಾಜಕೀಯ ಸಂಘಟನೆ ಜಿಲ್ಲೆಯಾಗಿ ಪರಿಗಣಿಸಿರುವ ರಾಜ್ಯ ಬಿಜೆಪಿ ಮಧುಗಿರಿ ಜಿಲ್ಲಾ ಘಟಕದ ಅಧ್ಯಕ್ಷರ ಅವಧಿ ಪೂರ್ಣಗೊಳ್ಳುವ ಮೊದಲೇ ಬದಲಾವಣೆ ಮಾಡಿದ್ದು ನೂತನ ಅಧ್ಯಕ್ಷರನ್ನಾಗಿ ಯುವ ಮುಖಂಡ ಸಂಘಟನ ಚತುರ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಮಾಜಿ ಯುವ ಮೊರ್ಚಾ ಜಿಲ್ಲಾಧ್ಯಕ್ಷ  ಬಿ.ಸಿ.ಹನುಮಂತೇಗೌಡ ಅವರನ್ನು ನೇಮಕ ಮಾಡುವ ಮೂಲಕ ಹಲವು ರಾಜಕೀಯ ಲೆಕ್ಕಚಾರ ಮಾಡಿದಂತಿದೆ.

ಮುಂಬರುವ ಲೋಕಸಭೆ ಚುನಾವಣೆಯನ್ನು ದೃಷ್ಟಿ ಹಾಯಿಸಿ  ಈ ಬದಲಾವಣೆ ಮಾಡಿದ್ದು, ಜಾತಿ ಸಮೀಕರಣದ ಆಧಾರದ ಮೇಲೆ ನೂತನ ಅಧ್ಯಕ್ಷರನ್ನು ನೇಮಿಸಲಾಗಿದೆ ಎಂದು  ಪಕ್ಷ ಹಾಗೂ ರಾಜಕೀಯ ವಲಯದಲ್ಲಿ ರಾಜಕೀಯ ಪಂಡಿತರು ವಿಶ್ಲೇಷಣೆ ಮಾಡಲಾರಂಭಿಸಿದ್ದಾರೆ.

ಹಿಂದುಳಿದ ಕುರುಬ ಸಮುದಾಯದ ಬಿ.ಕೆ.ಮಂಜುನಾಥ್ ಅಧ್ಯಕ್ಷರಾಗಿದ್ದು ಅವರ ಜಾಗಕ್ಕೆ ಕುಂಚಿಟಿಗ ಒಕ್ಕಲಿಗ ಸಮುದಾಯದ ಹನುಮಂತೇಗೌಡ ಅವರನ್ನು ತರಲಾಗಿದೆ. ತುಮಕೂರು ಸಂಘಟನಾತ್ಮಕ ಜಿಲ್ಲೆಯ ಅಧ್ಯಕ್ಷರಾಗಿರುವ ಲಿಂಗಾಯತ ಸಮುದಾಯದ ಎಚ್.ಎಸ್.ರವಿಶಂಕರ್ ಅವರನ್ನು ಉಳಿಸಿಕೊಂಡು, ಮಧುಗಿರಿ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಕುಂಚಿಟಿಗರ ಮತಗಳ ಮೇಲೆ ಕಣ್ಣಿಟ್ಟು ನೇಮಕ ಮಾಡಲಾಗಿದೆ. ಲಿಂಗಾಯತ ಹಾಗೂ ಒಕ್ಕಲಿಗರ ಮತಗಳ ಸಮೀಕರಣದೊಂದಿಗೆ ಲೋಕಸಭೆ ಚುನಾವಣೆ ಎದುರಿಸಲು ಬಿಜೆಪಿ ರಾಜ್ಯ ಘಟಕದ ನೂತನ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮೆಘಾ ಪ್ಲಾನ್ ಮಾಡಿ ರೆಡಿಯಾಗಿದ್ದಾರೆ.

ಮಧುಗಿರಿ ಮಣ್ಣಿನ ಮಗನಿಗೆ ಒಲಿದ ಅಧ್ಯಕ್ಷ ಸ್ಥಾನ 

ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕು ದೊಡ್ಡೇರಿ ಹೋಬಳಿ ಭೀಮನಕುಂಟೆ ಗ್ರಾಮದವರಾದ ಹನುಮಂತೇಗೌಡ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಧುಗಿರಿ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧೆಗೆ ಟಿಕೆಟ್ ಪೈಪೋಟಿ ನಡೆಸಿ ಸಂಘಟನೆ ಸಹ ಮಾಡಿದ್ದರು. ಆದರೆ ಕೊನೆ ಘಳಿಗೆಯಲ್ಲಿ  ಟಿಕೆಟ್ ಕೈ ತಪ್ಪಿತು. ಚಿತ್ರದುರ್ಗದಲ್ಲಿ ಶಿಕ್ಷಣ ಪಡೆದು, ಅಲ್ಲೇ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು ಚಿತ್ರದುರ್ಗ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷನಾಗಿ ಪಕ್ಷ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.  ಕಳೆದ ಚುನಾವಣೆ ಸಮಯದಲ್ಲಿ ಮಧುಗಿರಿ ಭಾಗದಲ್ಲಿ ಸಕ್ರಿಯವಾಗಿದ್ದರು. ಕೆಲವು ಸಾಮಾಜಿಕ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡಿದ್ದರು.

ವಿಧಾನಸಭೆಗೆ ಚುನಾವಣೆ ನಂತರ ಕ್ಷೇತ್ರದಲ್ಲಿ ಅಷ್ಟಾಗಿ ಕಾಣಿಸಿಕೊಂಡಿರಲಿಲ್ಲ. ವಿಜಯೇಂದ್ರ ಅವರಿಗೆ ಆಪ್ತರಾಗಿರುವುದರಿಂದ ನೇಮಕ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ಜಿಲ್ಲೆಯನ್ನು ಒಗ್ಗೂಡಿಸುವ ಪ್ರಯತ್ನ ವಿಫಲ

ಪಕ್ಷ ಸಂಘಟನೆ ದೃಷ್ಟಿಯಿಂದ ತುಮಕೂರು ಜಿಲ್ಲೆಯಿಂದ ಮಧುಗಿರಿ ಭಾಗವನ್ನು ಪ್ರತ್ಯೇಕಿಸಿ ಜಿಲ್ಲಾ ಘಟಕದ ಅಧ್ಯಕ್ಷರನ್ನು ನೇಮಕ ಮಾಡುವಂತೆ ಜಿಲ್ಲೆಯ ಪಕ್ಷದ ಪ್ರಮುಖರು ಹಿಂದೆ ಒತ್ತಾಯಿಸಿದ್ದರು. ಅದರಂತೆ ಮಧುಗಿರಿ ಜಿಲ್ಲೆಗೆ ಪ್ರತ್ಯೇಕವಾಗಿ ಅಧ್ಯಕ್ಷರನ್ನು ನೇಮಕ ಮಾಡಲಾಗಿತ್ತು. ಇತ್ತೀಚೆಗೆ ಕೆಲವರು ಎರಡು ಸಂಘಟನಾತ್ಮಕ ಜಿಲ್ಲೆಯನ್ನು ಒಗ್ಗೂಡಿ ಒಬ್ಬರನ್ನೇ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು ಎಂದು ಸಲಹೆ ನೀಡಿದ್ದರು. ಆದರೆ ಈ ಸಲಹೆಗೆ ಹೈಕಮಾಂಡ್ ಗಮನ ಸೊಪ್ಪು ಹಾಕದೇ ಮಧುಗಿರಿಗೆ ಅಧ್ಯಕ್ಷರ ನೇಮಕ ಮಾಡುವ ಮೂಲಕ ರಾಜಕೀಯವಾಗಿ ಪಕ್ಷ ಸಂಘಟಿಸಲು ಮುಂದಾಗಿದೆ.

ಇದನ್ನೂ ಓದಿ: ವಿಜಾಪುರ ಬಳಿ ಬಸ್ಸಿಗಾಗಿ ಕಾದು ಕುಳಿತಿದ್ದ ವಿದ್ಯಾರ್ಥಿನಿಗೆ ಲಾರಿ ಡಿಕ್ಕಿ|ಸ್ಥಳದಲೇ ವಿದ್ಯಾರ್ಥಿ ಸಾವು

ಹನುಮಂತೇಗೌಡ ಅವರ  ಜರ್ನಿ

ಹನುಮಂತೇಗೌಡ ಅವರು ಕಳೆದ 12 ವರ್ಷಗಳಿಂದ ನಿರಂತರವಾಗಿ ಎಬಿವಿಪಿ ಸಂಘಟನೆಯಲ್ಲಿ ತೊಡಗಿಕೊಂಡು  ರಾಜ್ಯ ಮಟ್ಟದಲ್ಲಿ ಎಬಿವಿಪಿಯ ರಾಜ್ಯ ಸಹ ಕಾರ್ಯದರ್ಶಿ, ಜಿಲ್ಲಾ ಪ್ರಮುಖ್ ಆಗಿ ಸೇವೆ ಸಲ್ಲಿಸಿ ಕಳೆದ  5 ವರ್ಷಗಳಿಂದ ನೇರವಾಗಿ ಬಿಜೆಪಿಯಲ್ಲಿ ಗುರುತಿಸಿಕೊಂಡು  ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ , ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕೆಲಸ ನಿರ್ವಹಿಸಿದ್ದರು.ತದನಂತರ ಮಧುಗಿರಿ ವಿಧಾನಸಭಾ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟು ಹನುಮಂತೇಗೌಡರು  ನೆಲೆ ಇಲ್ಲದ ಬಿಜೆಪಿ  ಪಕ್ಷಕ್ಕೆ ಸಂಘಟನೆ ಮೂಲಕ ಕಾರ್ಯಕರ್ತರಲ್ಲಿ ಹುರುಪು ಮೂಡಿಸಿ ಪಕ್ಷಕ್ಕೆ ಹೊಸ ಉತ್ಸಾಹ ತುಂಬಿದರು. ಸಾಮಾಜಿಕ, ಶೈಕ್ಷಣಿಕ ಕಾರ್ಯಕ್ರಮ ಮೂಲಕ ಅತಿ ಕಡಿಮೆ ಅವಧಿಯಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿದ  ಕೀರ್ತಿ ಹನುಮಂತೇಗೌಡರದು ಎಂದರೆ ತಪ್ಪಗಲಾರದು.
ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆ‌ ಸೇರಿದಂತೆ  ರಾಜ್ಯದಲ್ಲಿ ವಿದ್ಯಾರ್ಥಿದೆಸೆಯಲ್ಲಿ ನೂರಾರು ಹೋರಾಟ ಕಟ್ಟಿರುವ ಇವರು  ಬಿಇ. ಎಂಟೆಕ್ ಉನ್ನತ ಶಿಕ್ಷಣ ಪಡೆದು ಶಿಕ್ಷಣ ಪಡೆದಿದ್ದಾರೆ.
ಪಕ್ಷ ಸಂಘಟನೆಯಲ್ಲಿ ವಿಜಯೇಂದ್ರ ಅವರ ಜೊತೆ ನಿಕಟ ಸಂಪರ್ಕದ ಸಾಧಿಸಿರುವ  ಹನುಮಂತೇಗೌಡರು ಅವರ ಕೆಲಸಕ್ಕೆ ತಕ್ಕ ಫಲ ಎಂಬಂತೆ ಮಧುಗಿರಿ ಜಿಲ್ಲೆಯ ಜಿಲ್ಲಾಧ್ಯಕ್ಷ ಸ್ಥಾನ ಒಲಿದು ಬಂದಿದೆ. ಪಕ್ಷಕ್ಕೆ ದುಡಿದರೆ ಪಕ್ಷ ತನಗೆ ಕೇಳದೇ ಸ್ಥಾನಮಾನ‌ ಕೊಡುತ್ತದೆ ಎಂಬುದಕ್ಕೆ‌ಇದೊಂದು ನಿದರ್ಶನವಾಗಿದೆ.

[t4b-ticker]

You May Also Like

More From Author

+ There are no comments

Add yours