ಚಳ್ಳಕೆರೆಯ 9 ಗ್ರಾಮಗಳ ಶಾಲೆಯನ್ನು ದತ್ತು ಪಡೆದ ಕುವೈಟ್ ಕನ್ನಡ ಕ್ಷೇಮಾಭಿವೃದ್ಧಿ ಸಂಘ: ತಹಶೀಲ್ದಾರ್ ಎನ್.ರಘುಮೂರ್ತಿ

 

ಬೆಂಗಳೂರು:ಕುವೈಟ್ ಕನ್ನಡ ಕ್ಷೇಮಾಭಿವೃದ್ಧಿ ಸಂಘವು ಅತಿ ಹೆಚ್ಚು   ಹಿಂದುಳಿದ ಚಿತ್ರದುರ್ಗ ಜಿಲ್ಲೆಯ  ಚಳ್ಳಕೆರೆ ತಾಲೂಕಿನ 9 ಗ್ರಾಮಗಳ ಶಾಲೆಯನ್ನು  ದತ್ತು ತೆಗೆದುಕೊಂಡಿರುವುದು ಶ್ಲಾಘನೀಯ ಎಂದು ಸಚಿವ ಸುನೀಲ್ ಕುಮಾರ್ ಹೇಳಿದರು.

ಕುವೈತ್ ಕನ್ನಡ ಕ್ಷೇಮಾಭಿವೃದ್ಧಿ ಸಂಘದವರು ಚಳ್ಳಕೆರೆ ತಾಲೂಕಿನ 9 ಸರ್ಕಾರಿ ಪ್ರಾಥಮಿಕ ಪಾಠ ಶಾಲೆಗಳ ಮಕ್ಕಳಿಗೆ ವಿಜ್ಞಾನ ವಸ್ತು ಪ್ರದರ್ಶನ ಶೈಕ್ಷಣಿಕ ಪ್ರವಾಸ ಮತ್ತು ಕುವೈತ್ ಕನ್ನಡ ಕ್ಷೇಮಾಭಿವೃದ್ಧಿ ಸಂಘದ ಐದನೇ ವರ್ಷದ ಆಚರಣೆಯ ಸಂಬಂಧ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಿದ್ದಂತಹ ಸಮಾರಂಭದಲ್ಲಿ ಮಾತನಾಡಿ ಚಳ್ಳಕೆರೆ 9  ಗ್ರಾಮಗಳಿಗೆ ಸ್ಮಾರ್ಟ್ ಕ್ಲಾಸ್  ಶೌಚಾಲಯ  ಮತ್ತಿತರ  ಶೈಕ್ಷಣಿಕ ಚಟುವಟಿಕೆಗಳಿಗೆ ಸಂಬಂಧಿಸಿದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿರುವುದು ತುಂಬಾ ಅವಿಸ್ಮರಣೀಯ ಕಾರ್ಯವಾಗಿದೆ. ರಾಜ್ಯದ ಪ್ರತಿಯೊಂದು ಹಿಂದುಳಿದ ತಾಲೂಕುಗಳಲ್ಲಿ ಅನಿವಾಸಿ ಭಾರತೀಯರು ಇಂತಹ ಸತ್ಕಾರ್ಯಗಳನ್ನು ಮಾಡುವ ಮೂಲಕ ರಾಜ್ಯದಲ್ಲಿ ಶೈಕ್ಷಣಿಕ ನೆಲೆಗಟ್ಟನ್ನು ಭದ್ರಗೊಳಿಸುವಲ್ಲಿ ನೆರವಾಗಬೇಕೆಂದು ಸಚಿವರು ಹೇಳಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್ .ನಾಗಾಭರಣ ಮಾತನಾಡಿ ಗಡಿ ಭಾಗದ 19 ತಾಲ್ಲೂಕುಗಳಲ್ಲಿ 38 ಶಾಲೆಗಳನ್ನು ಕನ್ನಡ ಸಂಶೋಧನಾ ಕೇಂದ್ರಗಳಿಗೆ ಆಯ್ಕೆ ಮಾಡಲಾಗುವುದು ಈ ಶಾಲೆಗಳಲ್ಲಿ ಸಮಗ್ರವಾಗಿ ಕನ್ನಡ ಕಲಿಕೆಯ ಜಾಗೃತಿ ಸಂಶೋಧನೆ ಅಂತ ಕಾರ್ಯಗಳನ್ನು ಕೈಗೆತ್ತಿಕೊಳ್ಳುವುದು ಎಂದರು.

ಚಳ್ಳಕೆರೆ ತಾಸಿಲ್ದಾರ್ ರಘುಮೂರ್ತಿ ಮಾತನಾಡಿ ಪಂಪ ಮಹಾಕವಿಯ ಆದರ್ಶದ ಮಾತುಗಳಾದ ಚಾಗದ ಭೋಗದಕ್ಕರೆಯ ಗೇಯದ ಗೊತ್ತಿಲನಿಂಪು ಪುಗಲ್ಗರ ಮಾದ ಮಾನಿಸರೆ ಮಾನಿಸ ರಂತವರಾಗಿಯೂ ತೀರ್ದೊಪ್ದೆ ತೀರದೊಡಂ ಮರಿದುಂಬಿಯಾಗಿ ಮೇಣಕೋಗಿಲೆಯಾಗಿ ಪುಟ್ಟುವುದು ಆರ್ ಅಂಕುಶ ಮಿತ್ತೋಡಂ ನೆನೆಯುವುದೆನ್ನ ಮನಂ ಬನವಾಸಿ ದೇಶಮ್ ಎಂದು ಹೇಳಿರುವಂತಹ ಮಾತಿದೆ ಇದಕ್ಕನುಗುಣವಾಗಿ ಇಂತಹ ಮಹತ್ವ ಸಮಾಜಮುಖಿ ಕಾರ್ಯ  ಮತ್ತು ಸತ್ಕಾರ್ಯವನ್ನು ಈ ಸಂಘದವರು ಮಾಡಿದ್ದಾರೆ. ಬಸವಾದಿ ಶರಣರು ಹೇಳಿದ ಹಾಗೆ ತಮ್ಮ ಶ್ರಮದ ಉಳಿತಾಯದಿಂದ ಬಂದ ಸ್ವಲ್ಪ ಹಣವನ್ನು ಸಮಾಜದ ಉದ್ಧಾರಕ್ಕೆ ಬಳಸಿ ಸಾರ್ಥಕತೆಯನ್ನ ಮೆರೆಯಬೇಕೆಂದಿದ್ದಾರೆ ಅದರಂತೆ ಈ ಸಂಸ್ಥೆಯವರು ದಾರ್ಶನಿಕರ ಮಾತನ್ನು ಪಾಲಿಸಿದ್ದಾರೆ ಈ ಮೂಲಕ ಡಾಕ್ಟರ್ ಅಂಬೇಡ್ಕರ್ ಮತ್ತು ಗಾಂಧೀಜಿಯವರ ತತ್ವ ಮತ್ತು ಆದರ್ಶಗಳನ್ನು ಮೆರೆದಿದ್ದಾರೆ ಆದ್ದರಿಂದ ಬೆಳ್ಳಕೆರೆ ತಾಲೂಕಿನ ಜನತೆಯ ಪರವಾಗಿ ಈ ಸಂಘದವರನ್ನು ಆತ್ಮೀಯವಾಗಿ ಅಭಿನಂದಿಸುತ್ತೇನೆ ಎಂದು ತಿಳಿಸಿದರು.

ಚಳ್ಳಕೆರೆ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಸುರೇಶ್ ಮಾತನಾಡಿ ಈ ಒಂಬತ್ತು ಶಾಲೆಗಳ ಮಕ್ಕಳಿಗೆ ಉನ್ನತ ಶಿಕ್ಷಣದ ಕಲಿಕೆಯ ಸ್ಪರ್ಶವನ್ನು ಈ ಸಂಘದವರು ನೀಡಿದ್ದು ಮುಂದೆಯೂ ಕೂಡ ಅಗತ್ಯವಿರುವ ಮೂಲ ಸೌಲಭ್ಯ ಗಳನ್ನು ಆಯ್ದ ಶಾಲೆಗೆ ಒದಗಿಸಬೇಕೆಂದು ತಮ್ಮ ಸಲಹೆ ನೀಡಿದರು ಕುವೈತ್ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದಂತ ವಾಸಕಿ ಮಾತನಾಡಿ ಈ ಸಂಘದ ರಚನೆಯ ಪರಿಕಲ್ಪನೆ ಬಂದಿದ್ದು ಹಿಂದುಳಿದ ತಾಲೂಕದ ಚಳ್ಳಕೆರೆಯಿಂದ ನಮ್ಮ ಕಾರ್ಯಗಳನ್ನು ಈ ತಾಲೂಕಿನಿಂದಲೇ ಪ್ರಾರಂಭ ಮಾಡಿದ್ದೇವೆ ಉದಯ ಕೂಡ ಇನ್ನೂ ಹೆಚ್ಚು ಹೆಚ್ಚು ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಬಡವರು ಮತ್ತು ದೀನ ದಲಿತರ ಅಬ್ಯುದಯಕ್ಕಾಗಿ ಶ್ರಮಿಸುತ್ತೇವೆಂದು ಹೇಳಿದರು ಚಳ್ಳಕೆರೆ ತಾಲೂಕಿನ 9 ಸರ್ಕಾರಿ ಶಾಲೆಗಳ ಮುಖ್ಯೋಪಾಧ್ಯಾಯರುಗಳು ಕುವೈತ್ ಕನ್ನಡ ಕ್ಷೇಮಾಭಿವೃದ್ಧಿ ಸಂಘದ ವರನ್ನು ಸನ್ಮಾನಿಸಿ ಅನಂತ ಕೋಟಿ ಧನ್ಯವಾದಗಳನ್ನು ಅರ್ಪಿಸಿದರು.

ಈ ಸಮಾರಂಭದಲ್ಲಿ ಮಾಜಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುದ್ದುಕೃಷ್ಣ , ಕುವೈತ್ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವಾಸಕಿ ಮತ್ತು ಸಂಘದ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours