ಕವಾಡಿಗರಹಟ್ಟಿ ಸರ್ಕಾರಿ ಶಾಲೆಯಲ್ಲಿ ಸುಣ್ಣ ಬಣ್ಣ ಬಳಿದು ಮಕ್ಕಳ ಪಠ್ಯಕ್ರಮಕ್ಕನುಣ ಚಿತ್ರಗಳು

 

ಚಿತ್ರದುರ್ಗ : ಕಲುಷಿತ ನೀರು ಸೇವನೆಯಿಂದ ಆರು ಮಂದಿಯನ್ನು ಬಲಿ ಪಡೆದು ರಾಜ್ಯಾದ್ಯಂತ ಸದ್ದು ಮಾಡಿದ್ದ ಕವಾಡಿಗರಹಟ್ಟಿಯಲ್ಲಿನ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಗೆ (school) ಸುಣ್ಣ ಬಣ್ಣ ಬಳಿದು ಮಕ್ಕಳ ಪಠ್ಯಕ್ರಮಕ್ಕನುಗುಣವಾಗಿ ವಿವಿಧ ಬಗೆಯ ಚಿತ್ರಗಳನ್ನು ಗೋಡೆ ಮೇಲೆ ಬಿಡಿಸಿ ಮಕ್ಕಳಲ್ಲಿ ಕಲಿಕೆಯ ಆಸಕ್ತಿಯನ್ನು ಹೆಚ್ಚಿಸಲಾಗಿದೆ.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ 1980 ರಿಂದ 1993 ರ ಅವಧಿಯಲ್ಲಿನ ಹಳೆ ಕಾರ್ಯಕರ್ತರುಗಳಾದ ಉದಯರವಿ, ಡಾ.ಕೆ.ರಾಜೀವಲೋಚನ, ಅರುಣ್‍ಕುಮಾರ್, ವೀರಣ್ಣ ಲ್ಯಾಗೋಟಿ, ಬಿ.ಸಿ.ಎಂ.ಪ್ರಭು, ಎಂ.ಎಲ್.ಸಿ.ರವಿಕುಮಾರ್, ಗ್ರಾಮೀಣಾಭಿವೃದ್ದಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ವಿಷ್ಣುಕಾಂತಚಟಪಲ್ಲಿ, ಪೂನಾದ ಹೋಟೆಲ್ ಉದ್ಯಮಿ ಲಕ್ಷ್ಮೀಶ, ನಿಜಗುಣದೇವ್ ಇವರುಗಳು ಸಮ್ಮಿಲನಗೊಂಡು ಕವಾಡಿಗರಹಟ್ಟಿಯಲ್ಲಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯನ್ನು ಆಯ್ಕೆ ಮಾಡಿಕೊಂಡ ಫಲವಾಗಿ ರಾಷ್ಟ್ರೀಯ ಕಲಾ ಮಂಚ್ ಮೈಸೂರಿನ ಚಿತ್ರಕಲಾವಿದ ಚಂದ್ರಶೇಖರ್ ಹಾಗೂ ಡ್ರಾಯಿಂಗ್ ವಿದ್ಯಾರ್ಥಿಗಳಾದ ಅನುಶ್ರಿ ಕೆ, ತೇಜಸ್ ಇವರುಗಳು ಕೈಜೋಡಿಸಿ ಶಾಲೆಯ ಗೋಡೆಯ ಮೇಲೆ ಅತ್ಯಾಕರ್ಷಕವಾದ ಚಿತ್ರಗಳನ್ನು ಬಿಡಿಸಿ ಮಕ್ಕಳ ಮನಸ್ಸನ್ನು ಕಲಿಕೆಯ ಕಡೆ ಆಕರ್ಷಿಸಿದ್ದಾರೆ..

ಇದನ್ನೂ ಓದಿ: ಕುಡಿಯಲು ಹಣ ನೀಡಿಲ್ಲವೆಂದು ಹೆತ್ತ ತಾಯಿಯನ್ನೇ ಕೊಲೆಗೈದ ಪಾಪಿ ಮಗ
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೋಮಶೇಖರ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ರವಿಶಂಕರ್‍ರೆಡ್ಡಿ ಇವರುಗಳು ಕವಾಡಿಗರಹಟ್ಟಿಯಲ್ಲಿನ ಶಾಲೆಗೆ ಭೇಟಿ ಚಿತ್ರಕಲಾವಿದರ ಕೈಚಳಕದಿಂದ ಗೋಡೆ ಮೇಲೆ ಅರಳಿರುವ ನಾನಾ ಬಗೆಯ ಚಿತ್ರಗಳನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಕ್ಕಳ ಪಠ್ಯಕ್ರಮಗಳಿಗೆ ಪೂರಕವಾಗಿ ವಿಜ್ಞಾನ ಮತ್ತು ಗಣಿತಕ್ಕೆ ಸಂಬಂಧಿಸಿದ ಚಿತ್ರಗಳು. ನಲಿಕಲಿ ಮಕ್ಕಳಿಗೆ ಅಕ್ಷರಾಭ್ಯಾಸ, ಹಣ್ಣು, ತರಕಾರಿಗಳು, 2,3, 4 ನೇ ತರಗತಿಯ ಮಕ್ಕಳಿಗೆ ಸಂಡೆ, ಮಂಡೆ, ವಿರುದ್ದಾರ್ಥಕ ಪದಗಳು, ತ್ರಿಭುಜ, ಸೌರ ಮಂಡಲ ರಾಕೆಟ್ ಚಂದ್ರಯಾನ-3, ಯೋಗಕ್ಕೆ ಸಂಬಂಧಿಸಿದಂತ ಆಸನಗಳ ಚಿತ್ರಗಳು ಪ್ರಮುಖ ಆಕರ್ಷಣೀಯವಾಗಿದೆ.
ಸರ್ಕಾರಿ ಶಾಲೆಯೆಂದರೆ ಮೂಗು ಮುರಿಯುವವರೆ ಹೆಚ್ಚಾಗಿರುವ ಇಂದಿನ ಕಾಲದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‍ನ ಹಳೆ ಕಾರ್ಯಕರ್ತರ ಸಮ್ಮಿಲನ ಹಾಗೂ ಮೈಸೂರಿನ ಚಿತ್ರಕಲಾವಿದ ಹಾಗೂ ಡ್ರಾಯಿಂಗ್ ವಿದ್ಯಾರ್ಥಿಗಳು ಸತತವಾಗಿ ಎರಡು ಮೂರು ದಿನಗಳ ಕಾಲ ಕವಾಡಿಗರಹಟ್ಟಿಯ ಶಾಲೆಯಲ್ಲಿ ವಿಶೇಷ ಆಸಕ್ತಿ ವಹಿಸಿ ಮಕ್ಕಳ ಶಿಕ್ಷಣಕ್ಕೆ ಪೂರಕ ವಾತಾವರಣ ಕಲ್ಪಿಸುವುದಕ್ಕಾಗಿ ಮನಮೋಹಕವಾಗಿರುವ ಚಿತ್ರಗಳನ್ನು ಬಿಡಿಸಿರುವ ಚಿತ್ರಕಲಾವಿದ ಮೈಸೂರಿನ ಚಂದ್ರಶೇಖರ್ ಸರ್ಕಾರಿ ಶಾಲೆಗಳ ಅಭಿವೃದ್ದಿಯ ಹೊಣೆಯನ್ನು ವಿವಿಧ ಸಂಘ ಸಂಸ್ಥೆಗಳವರಿಗೆ ವಹಿಸಿದರೆ ಮಕ್ಕಳ ಶಿಕ್ಷಣಕ್ಕೆ ಪೂರಕ ವಾತಾವರಣ ಸೃಷ್ಟಿಸಿದಂತಾಗುತ್ತದೆ ಎಂದು ಮನವಿ ಮಾಡಿದ್ದಾರೆ..


ಇನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹಳೆ ಕಾರ್ಯಕರ್ತರಾದ ಉದಯರವಿ ಸುಣ್ಣ ಬಣ್ಣವಿಲ್ಲದೆ ಮಂಕಾಗಿದ್ದ ಕವಾಡಿಗರಹಟ್ಟಿಯಲ್ಲಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಸ್ಥಿತಿಯನ್ನು ಕಂಡು ಏನಾದರೊಂದು ರೂಪ ಕೊಡಬೇಕೆಂಬ ಉದ್ದೇಶವಿಟ್ಟುಕೊಂಡು ಹಳೆ ವಿದ್ಯಾರ್ಥಿಗಳ ಸಮ್ಮಿಲನದೊಂದಿಗೆ ಗೋಡೆ ಮೇಲೆ ಬಣ್ಣ ಬಣ್ಣದ ಚಿತ್ತಾರಗಳನ್ನು ಬಿಡಿಸಿ ಸ್ವಚ್ಚಂದವಾದ ವಾತಾವರಣ ನಿರ್ಮಿಸಲಾಗಿದೆ. ಸರ್ಕಾರದಿಂದ ಯಾವುದೇ ಸಹಾಯವಿಲ್ಲದೆ ಇದಕ್ಕೆ ತಗಲುವ ವೆಚ್ಚವನ್ನು ನಾವುಗಳೆ ಭರಿಸಿದ್ದೇವೆಂದು ಎಂದು ತಮ್ಮ ಅನಿಸಿಕೆಯನ್ನು ಹೊರಹಾಕಿದರು.

[t4b-ticker]

You May Also Like

More From Author

+ There are no comments

Add yours