ಉದ್ಯೋಗ ವಾರ್ತೆ:ನವೆಂಬರ್ 04ರಂದು ನೇರ ಸಂದರ್ಶನ

 

ಚಿತ್ರದುರ್ಗ(ಕರ್ನಾಟಕ ವಾರ್ತೆ) ಅಕ್ಟೋಬರ್ 31:
ಚಿತ್ರದುರ್ಗ ನಗರದ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ನವೆಂಬರ್ 4ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ನೇರ ನೇಮಕಾತಿ ಸಂದರ್ಶನದ ಹಮ್ಮಿಕೊಳ್ಳಲಾಗಿದೆ.
ಸಂದರ್ಶನದಲ್ಲಿ ಕಲರ್ಸ್ ಟೆಕ್ನಾಲಜಿ ಯುಕ್ತ ಕಂಪನಿಯು ತಮ್ಮ ಸಂಸ್ಥೆಯಲ್ಲಿ ಖಾಲಿ ಇರುವ ಟೀಚರ್ಸ್, ಜಿಲ್ಲಾ ಪ್ರೋಗ್ರಾಮ್ ಪ್ಲಾನಿಂಗ್ ಆಫೀಸರ್ಸ್, ಡಿವಿಜನ್ ಪ್ರೋಗ್ರಾಮ್ ಪ್ಲಾನಿಂಗ್ ಆಫೀಸರ್ಸ್, ಟೆಲಿಕಾಲರ್ ಮತ್ತು ಕಂಪ್ಯೂಟರ್ ಆಪರೇಟರ್ ಹುದ್ದೆಗಳಿಗೆ ಅರ್ಹ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳನ್ನು ನೇರವಾಗಿ ಆಯ್ಕೆ ಮಾಡಿಕೊಳ್ಳಲಿದ್ದಾರೆ.
60 ಶಿಕ್ಷಕ ಹುದ್ದೆಗಳು ಖಾಲಿ ಇದ್ದು, ಬಿಎ, ಬಿಕಾಂ, ಬಿಸಿಎ, ಬಿಎಸ್ಸಿ, ಡಿಇಡಿ,ಬಿಇಡಿ, ಎಂಎ, ಎಂ.ಕಾಂ, ಎಂಎಸ್ಸಿ, ಎಂಸಿಎ ವಿದ್ಯಾರ್ಹತೆ  ಹೊಂದಿದ ಅಭ್ಯರ್ಥಿಗಳಿಗೆ 6,000 ದಿಂದ 16000 ವೇತನ ನಿಗದಿಪಡಿಸಲಾಗಿದೆ. ಜಿಲ್ಲಾ ಪ್ರೋಗ್ರಾಮಿಂಗ್ ಪ್ಲಾನಿಂಗ್ ಆಫೀಸರ್ ಹುದ್ದೆಗೆ ಎಂಎ, ಎಂಕಾಂ, ಎಂಎಸ್ಸಿ, ಎಂಸಿಎ, ಎಂಬಿಎ ವಿದ್ಯಾರ್ಹತೆ  ಹೊಂದಿದ ಅಭ್ಯರ್ಥಿಗೆ 1 ಹುದ್ದೆ. ಡಿವಿಜನ್ ಪ್ರೋಗ್ರಾಮಿಂಗ್ ಪ್ಲಾನಿಂಗ್ ಆಫೀಸರ್ ಹುದ್ದೆಗೆ ಬಿಎ, ಬಿಕಾಂ, ಬಿಸಿಎ, ಬಿಎಸ್ಸಿ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳಿಗೆ ಎರಡು ಹುದ್ದೆ ನಿಗದಿಪಡಿಸಿ 16 ಸಾವಿರದಿಂದ 30 ಸಾವಿರ ರೂಪಾಯಿಗಳ ವೇತನ ನೀಡಲಾಗುವುದು. ಡಿವಿಜನ್ ಪ್ರೋಗ್ರಾಮಿಂಗ್ ಪ್ಲಾನಿಂಗ್ ಆಫೀಸರ್ ಹುದ್ದೆಗೆ ಬಿಎ, ಬಿಕಾಂ. ಬಿಸಿಎ. ಎಂಸಿಎ, ಎಂಬಿಎ, ಎಂಎಸ್ಸಿ, ಎಂಎ  ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳಿಗೆ ಎರಡು ಹುದ್ದೆ ನಿಗದಿಪಡಿಸಿ 16 ಸಾವಿರದಿಂದ 30 ಸಾವಿರ ರೂಪಾಯಿಗಳ ವೇತನ ನೀಡಲಾಗುವುದು. ಟೆಲಿಕಾಲರ್ ಮತ್ತು ಕಂಪ್ಯೂಟರ್ ಆಪರೇಟರ್ ಹುದ್ದೆಗೆ ಪಿಯುಸಿ ಯಾವುದೇ ಪದವಿ ಹೊಂದಿದ ಅಭ್ಯರ್ಥಿಗಳಿಗೆ 6 ಹುದ್ದೆಗಳನ್ನು ನಿಗದಿಪಡಿಸಿ 6ರಿಂದ 10 ಸಾವಿರ ವೇತನ ನೀಡಲಾಗುವುದು.
ಬಯೋಡೇಟಾ, ವಿದ್ಯಾರ್ಹತೆಯ ಪ್ರಮಾಣ ಪತ್ರಗಳು, ಭಾವಚಿತ್ರಗಳನ್ನು ಸಂದರ್ಶನಕ್ಕೆ ತರಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಕಚೇರಿಯ ದೂರವಾಣಿ ಸಂಖ್ಯೆ 7022459064, 8310785143, 8105619020ಗೆ ಸಂಪರ್ಕಿಸಬೇಕೆಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ತಿಳಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours