ಚಿತ್ರದುರ್ಗ ಜಿಲ್ಲೆಯ 14 ಸಾಧಕರಿಗೆ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

 

ಚಿತ್ರದುರ್ಗ(ಕರ್ನಾಟಕ ವಾರ್ತೆ).ಅ.31:
ವಿವಿಧ ರಂಗಗಳಲ್ಲಿ ಸಾಧನೆ ಮಾಡಿರುವ ಜಿಲ್ಲೆಯ 14 ಜನರನ್ನು ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಉವಿಭಾಗಾಧಿಕಾರಿ ಆರ್.ಚಂದ್ರಯ್ಯ ನೇತೃತ್ವದ ಆಯ್ಕೆ ಸಮಿತಿಯು ವಿಸ್ತøತವಾಗಿ ಚರ್ಚಿಸಿ ಒಟ್ಟು 14 ಜನರನ್ನು ಆಯ್ಕೆ ಮಾಡಿದೆ.  ಪ್ರಶಸ್ತಿಗೆ ಭಾಜನರಾದವರನ್ನು ನವೆಂಬರ್ 01 ರಂದು ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಜರಗುವ  ಕನ್ನಡ ರಾಜ್ಯೋತ್ಸವದಂದು ಜಿಲ್ಲಾಡಳಿತದಿಂದ ಸನ್ಮಾನಿಸಲಾಗುವುದು ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.
ಪ್ರಶಸ್ತಿಗೆ ಭಾಜನರಾದವರ ವಿವರ: 1) ಜವಳಿ ಶಾಂತಕುಮಾರ್, ಚಿತ್ರದುರ್ಗ (ಚಿತ್ರಕಲೆ). 2) ಕೆ.ಬಿ.ಕೃಷ್ಣಪ್ಪ, ನಿವೃತ್ತ ಆರೋಗ್ಯ ನಿರೀಕ್ಷಕ, ಚಿತ್ರದುರ್ಗ (ರಂಗಭೂಮಿ). 3)ಕೆ.ಮೀನಾಕ್ಷಿ ಭಟ್, ಚಿತ್ರದುರ್ಗ (ಸಂಗೀತ). 4) ಹೆಚ್.ನಿಂಗಪ್ಪ, ಹುಲ್ಲೂರು ಗ್ರಾಮ, ಚಿತ್ರದುರ್ಗ (ಜಾನಪದ ಕಲಾವಿದ). 5) ಡಾ.ಉಮೇಶ್ ಬಾಬು ಮಠದ್, ಚಿತ್ರದುರ್ಗ (ಸಾಹಿತ್ಯ). 6)ಬಿ.ಕೆ.ರಹಮತ್‍ವುಲ್ಲಾ, ಚಿತ್ರದುರ್ಗ (ಸಮಾಜ ಸೇವೆ). 7) ನರೇನಹಳ್ಳಿ ಅರುಣ ಕುಮಾರ್, ಚಿತ್ರದುರ್ಗ (ಪತ್ರಿಕೋದ್ಯಮ). 8) ಆಶ್ರಿತ್.ಕೆ.ಎ, ಹಿರಿಯೂರು (ಸಂಗೀತ-ಕೀ ಬೋರ್ಡ್ ಪ್ಲೇಯರ್). 9) ಅರುಂಧತಿ (ಮಂಗಳಮುಖಿ), ಕೊಳಹಾಳ್, ಭರಮಸಾಗರ ಹೋಬಳಿ ಚಿತ್ರದುರ್ಗ (ರಂಗಭೂಮಿ ಮತ್ತು ಸಮಾಜ ಸೇವೆ). 10) ಸುರೇಂದ್ರನಾಥ್.ಡಿ.ಆರ್, ಚಿತ್ರದುರ್ಗ (ಚಿತ್ರಕಲೆ). 11)ಹೆಚ್.ಆನಂದ ಕುಮಾರ್, ಚಿತ್ರದುರ್ಗ (ಲೇಖಕ). 12) ಡಾ.ತಿಮ್ಮಣ್ಣ, ಮೊಳಕಾಲ್ಮೂರು (ಶಿಕ್ಷಣ). 13) ಎಂ.ಬಿ.ಮುರಳಿ, ಮಲ್ಲಾಪುರ, ಚಿತ್ರದುರ್ಗ (ಯೋಗ). 14) ಜೆ.ತಿಪ್ಪೇಸ್ವಾಮಿ,ಕೊರ್ಲಕುಂಟೆ, ಚಳ್ಳಕೆರೆ (ಸಾಹಿತ್ಯ)  ಸೇರಿದಂತೆ ಒಟ್ಟು 14 ಮಂದಿ ಜಿಲ್ಲಾಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

[t4b-ticker]

You May Also Like

More From Author

+ There are no comments

Add yours