ನಿಗಮದ ಸೌಲಭ್ಯ ಪಡೆಯಲು ಮಧ್ಯವರ್ತಿಗಳ ಅವಶ್ಯಕತೆ ಇಲ್ಲ : ಎಸ್ .ವಿ.ರಾಮಚಂದ್ರಪ್ಪ

 

ಚಿತ್ರದುರ್ಗ: ನಿಗಮದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸುವ ಕಾರ್ಯಕ್ಕೆ ನನ್ನ ಮೊದಲ ಆದ್ಯತೆ ಎಂದು ಕರ್ನಾಟಕ ಸರ್ಕಾರದ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ವಿ.ರಾಮ ಚಂದ್ರಪ್ಪ ತಿಳಿಸಿದರು

ನಗರದ ಎಪಿಎಂಪಿ ಆವರಣದಲ್ಲಿ ಬರುವ ಐಎಟಿ ಸಭಾಂಗಣದಲ್ಲಿ ಮಾರುತಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮತ್ತು ಸ್ನೇಹಿತರ ತಂಡದಿಂದ ಆಯೋಜಿಸಿದ್ದ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿ ವಾಲ್ಮೀಕಿ ಅಭಿವೃದ್ಧಿ ನಿಗಮ ಚಿಕ್ಕದು ಎಂದು ಕೊಂಡಿದ್ದೆ ಆದರೆ ಇದು ಬಹುದೊಡ್ಡ ವ್ಯಾಪ್ತಿ ಇದೆ. ರಾಜ್ಯದ ಉದ್ದಗಲಕ್ಕೂ ಜನಾಂಗದ ಅಭಿವೃದ್ಧಿಗೆ ಕೆಲಸ ಮಾಡಲು ಸದಾ ಸಿದ್ದ ಎಂದರು.

ಮುಖ್ಯ ಮಂತ್ರಿ ಯಡಿಯೂರಪ್ಪ ನವರು ನನ್ನನ್ನು ಸಾರಥಿಯಾಗಿ ಮಾಡಿದ್ದಾರೆ. ನೇರವಾಗಿ ಭೇಟಿ ಮಾಡಿ ಜನಾಂಗದ ಸಾಮಾನ್ಯರು ಸಹ ಬರಲು ಅವಕಾಶ ಮಾಡಿ ಕೊಡುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆ ಜಿಲ್ಲಾ ಸಮನ್ವ ಯಾಧಿಕಾರಿ ನಾಗಭೂಷಣ್, ಚಳ್ಳಕೆರೆ ಬಿಇಓ ಸುರೇಶ್, ಕೆಐಡಿಬಿ ರಂಗಸ್ವಾಮಿ, ಮಾತನಾಡಿದರು ನಗರ ಸಭಾ ಸದಸ್ಯರಾದ ವೆಂಕಟೇಶ್, ತಿಪ್ಪಮ್ಮ,ತಾ.ಪಂ.ಸದಸ್ಯರಾದ ಕರಿಯಣ್ಣ ಚಂದ್ರಕಲಾ, ಯಶೋದಮ್ಮ,ಎಸ್.ಎಲ್.ಡಿಬಿ ವ್ಯಾಸ್ಥಾಪಕರಾದ ಪಾಲಣ್ಣ, ನಿಂಗ್ವ ನಾಗತಿಹಳ್ಳಿ ತಿಪ್ಪೇಸ್ವಾಮಿ, ಲಕ್ಷೀಸಾಗರದ ರಾಜಣ್ಣ ಇದ್ದರು

[t4b-ticker]

You May Also Like

More From Author

+ There are no comments

Add yours