ಎರಡು ಮನಸ್ಸಿನಲ್ಲಿ ಪ್ರಚಾರ ಮಾಡತ್ತಿದ್ದಾರಾ ಜೆಡಿಎಸ್ ಅಭ್ಯರ್ಥಿ ರವೀಶ್, ಅನ್ಯ ಪಕ್ಷದ ಮುಖಂಡರ ಸೇರ್ಪಡೆಯಲ್ಲಿ ಅಭ್ಯರ್ಥಿಗೆ ನಿರಾಸಕ್ತಿನಾ?

 

ವಿಶೇಷ ವರದಿ

ಚಳ್ಳಕೆರೆ:ಜು: 9: ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದಲ್ಲಿ  ಜೆಡಿಎಸ್ ಅಭ್ಯರ್ಥಿ ರವೀಶ್ ಕುಮಾರ್ ಎರಡು  ಮನಸ್ಸಿನಲ್ಲಿ ಪ್ರಚಾರ ಮಾಡುವಂತೆ ಕಾಣುತ್ತಿದ್ದಾರೆ. ಎಲ್ಲೋ ಒಂದು ಕಡೆ ಚಳ್ಳಕೆರೆ ಕ್ಷೇತ್ರದಲ್ಲಿ ರವೀಶ್ ಅವರು ಕಳೆದ ಬಾರಿ ಇದ್ದಂತಜ ಹುಮ್ಮಸ್ಸು ಕಾಣುತ್ತಿಲ್ಲ.ಆದರೆ ಇತರೆ ಪಕ್ಷದ ಮುಖಂಡರು ಯುವಕರು ಇತರೆ ಮುಖಂಡರ ಸಮ್ಮುಖದಲ್ಲಿ  ಸೇರ್ಪಡೆ ಮಾಡುತ್ತಿದ್ದರು ಇಂತಹ ಪಕ್ಷದ ಸೇರ್ಪಡೆ ಕಾರ್ಯಕ್ರಮಗಳಿಗೆ ನಿಂತು ಜನರನ್ನು ಸೆಳೆಯುವ ಹೊತ್ತಿನಲ್ಲಿ ಬೆಂಗಳೂರು ಸೇರಿ ವಾರಕ್ಕೊಮ್ಮೆ ಒಂದೆರಡು  ದಿನ ಬಂದು ಕಾರ್ಯಕ್ರಮ ಮುಗಿಸಿಕೊಂಡು  ವಾಪಸ್ ಹೋದರೆ ಏನು ಸಂಘಟನೆ  ಆಗುವುದಿಲ್ಲ. ಹಾಲಿ ಶಾಸಕರಾದ ಶಾಸಕ ಟಿ.ರಘುಮೂರ್ತಿ  ಎರಡು ಬಾರಿ ಗೆಲುವು ಸಾಧಿಸಿ ಸಾವಿರಾರು ಸಹ ಕ್ಷೇತ್ರದ ಜನರ ಜೊತೆಯಲ್ಲಿ ಹೆಚ್ಚು ಬೀಡು ಬಿಟ್ಟಿದ್ದಾರೆ. ಆದರೆ ರವೀಶ್ ಇನ್ನು ಅಭ್ಯರ್ಥಿ ಆಗಿದ್ದಾರೆ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ ನಂತರ ಮೂರುವರೆ ವರ್ಷ ಅಲ್ಲೊಮ್ಮೆ ಇಲ್ಲೊಮ್ಮೆ ಕ್ಷೇತ್ರಕ್ಕೆ ಬಂದಿದ್ದು ಬಿಟ್ಟರೆ ತಳ ಮಟ್ಟದ ಸಂಘಟನೆ ಒತ್ತು ಕೊಟ್ಟಿಲ್ಲ. ಚಳ್ಳಕೆರೆಯಲ್ಲಿ ಮನೆ ಮಾಡಿ ಬಿಡುಬಿಟ್ಟರೆ ಚುನಾವಣೆ ಕಣ ಸ್ವಲ್ಪ ರಂಗು ಪಡೆಯಲಿದೆ. ಜನರು ಸಹ ಸದಾ ಕ್ಷೇತ್ರದಲ್ಲಿ ಇದ್ದರೆ ಒಳ್ಳೆಯದು ಎಂದು ಬಯಸುತ್ತಾರೆ.  ಕೇವಲ 10 ತಿಂಗಳು ಮಾತ್ರ ಚುನಾವಣೆ ಇದೆ.  ಮುಂದೆ ಯಾವ ರೀತಿ ಕ್ಷೇತ್ರದಲ್ಲಿ ಇರುತ್ತಾರೆ ಎಂಬ ಅನುಮಾನ ಜನರಲ್ಲಿ  ಮೂಡುವ ಮುಂಚೆ ಕ್ಷೇತ್ರದಲ್ಲಿ ರವೀಶ್ ಇದ್ದರೆ ಮಾತ್ರ ಹೋರಟ ಇಲ್ಲದಿದ್ದರೆ ಚುನಾವಣೆ ತುಂಬಾ ಕಷ್ಟವಾಗಲಿದೆ.ಕಳೆದ ಬಾರಿ ಇದ್ದ ಪರಿಸ್ಥಿತಿಗೆ ಈ ಬಾರಿ ಇರುವ ಕ್ಷೇತ್ರದ ಪರಿಸ್ಥಿತಿಗೆ ತುಂಬಾ ವ್ಯತ್ಯಾಸವಿದೆ ಎಂಬ ಮಾತು ಕ್ಷೇತ್ರದಲ್ಲಿ ಸದ್ದು ಮಾಡುತ್ತಿದೆ.

[t4b-ticker]

You May Also Like

More From Author

+ There are no comments

Add yours