ತೆನೆ ಇಳಿಸಿ ಕಮಲ ಹಿಡಿದು ಚಳ್ಳಕೆರೆ ಬಿಜೆಪಿಯಿಂದ ಸ್ವರ್ಧೆ ಮಾಡತ್ತಾರಾ ಈ ಅಭ್ಯರ್ಥಿ ?

 

ಚಳ್ಳಕೆರೆ: ಚಳ್ಳಕೆರೆಗೆ ಎರಡನೇ ಬಾಂಬೆ, ಎಣ್ಣೆ ನಗರಿ ಎಂದು  ಕರೆಯುತ್ತಾರೆ. ರಾಜಕೀಯವು ಸಹ ಅಷ್ಟೆ ವಿಶೇಷವಾಗಿದೆ.  ಹಾಲಿ ಕಾಂಗ್ರೆಸ್ ಶಾಸಕರಾಗಿ ಟಿ.ರಘುಮೂರ್ತಿ ಇದ್ದಾರೆ. ಕಳೆದ ಬಾರಿ ಬಿಜೆಪಿ ಅಭ್ಯರ್ಥಿ ಆಗಿದ್ದ ಮಾಜಿ ಸಚಿವ ತಿಪ್ಪೇಸ್ವಾಮಿ ಅವರ ಪುತ್ರ ಕೆ.ಟಿ.ಕುಮಾರಸ್ವಾಮಿ ಎರಡು ಬಾರಿ ಸೋಲು ಕಂಡಿದ್ದಾರೆ. ಸಕ್ರಿಯವಾಗಿ ಬಿಜೆಪಿಯಲ್ಲಿ ಚಳ್ಳಕೆರೆ ಭರವಸೆಯ ನಾಯಕನಾಗಿ ಹೊರಹೊಮ್ಮಿದ ಕುಮಾರಸ್ವಾಮಿ ಸದ್ಯ ಬಿಜೆಪಿ ಬಿಟ್ಟು ತನ್ನ ಮಾತೃ ಪಕ್ಷ ಜೆಡಿಎಸ್ ಪಕ್ಷ ಸೇರಿದ್ದರು. ಆದರೆ ಜೆಡಿಎಸ್ ಟಿಕೆಟ್ ಗೆ ಕಳೆದ ಬಾರಿ ಜೆಡಿಎಸ್ ಅಭ್ಯರ್ಥಿ ಆಗಿ 12 ಸಾವಿರ ಮತಗಳಿಂದ ಸೋಲು ಕಂಡಿದ್ದ  ರವಿಶ್ ಅವರು ಈ ಬಾರಿ ಸಹ ಟಿಕೆಟ್ ಪಕ್ಕ ಮಾಡಿಕೊಂಡ ಕಣದಲ್ಲಿ ಬಿರುಸಿದ ಕ್ಷೇತ್ರ ಸಂಚಾರ ಮಾಡುತ್ತಿದ್ದು ಜೆಡಿಎಸ್ ಸೇರಿದ್ದ  ಕೆ.ಟಿ.ಕುಮಾರಸ್ವಾಮಿ ಅವರಿಗೆ ಬಿಸಿ ತುಪ್ಪಾವಾಗಿ ಸದ್ಯ ಜೆಡಿಎಸ್ ನಿಂದ ದೂರ ಉಳಿದಿದ್ದು  ಪಕ್ಷೇತರ ಅಭ್ಯರ್ಥಿ ಎಂದು ಪ್ರಚಾರ ಆರಂಭಿಸಿದ್ದಾರೆ. ಎಲ್ಲಾ ಕಾರ್ಯಕ್ರಮಗಳಿಗೆ ಭಾಗವಹಿಸುತ್ತಿದ್ದಾರೆ‌. ಆದರೆ ಬಿಜೆಪಿಯಲ್ಲಿ ನಾನು ಚಳ್ಳಕೆರೆ ಅಭ್ಯರ್ಥಿ ಎಂದು ಹೇಳಿಕೊಳ್ಳುವಂತ ಸ್ಥಿತಿ ಇಲ್ಲ. ಬಲ್ಲ ಮೂಲಗಳ ಪ್ರಕಾರ ಮತ್ತೆ  ಕುಮಾರಸ್ವಾಮಿ ಬಿಜೆಪಿ ಸೇರಿ ಸ್ವರ್ಧೆ ಮಾಡಬಹುದು. ತಂದೆ ವರ್ಚಸು ಈ ಬಾರಿ ಕೆಲಸ ಮಾಡಬಹದು, ಅನುಕಂಪ ಕೆಲಸ ಮಾಡಬಹುದು ಎಂಬ ಮಾತು ರಾಜಕೀಯ ವಲತದಲ್ಲಿ ಕೇಳಿ ಬರುತ್ತಿದೆ. ಆದರೆ ಕುಮಾರಸ್ವಾಮಿ ಮಾತ್ರ ಪಕ್ಷೇತರ ಅಭ್ಯರ್ಥಿ ಎಂದ ಚಳ್ಳಕೆರೆ ಕ್ಷೇತ್ರದಲ್ಲಿ ಚುನಾವಣಾ ಕೆಲಸ ಆರಂಭಿಸಿದ್ದು ಎಲ್ಲಾದಕ್ಕೂ ಸಮಯ ಕಾಯುವ ಅವಶ್ಯಕತೆ ಇದೆ. ಚುನಾವಣಾ ವೇಳೆ ನಡೆಯುವ ಪಕ್ಷಾಂತರ ಪರ್ವದಲ್ಲಿ  ಕುಮಾರಸ್ವಾಮಿ ಬಿಜೆಪಿ‌ ಬಾಗಿಲು ಬಡಿಯುತ್ತಾರಾ ಅಥವಾ ಪಕ್ಷೇತರರಾಗಿ ಸ್ವರ್ಧೆ ಮಾಡುತ್ತಾರೆ ಎಂಬುದು ಎಲ್ಲಾ ಚಿತ್ತ ಹರಿಸುತ್ತಿದ್ದು ಡಿಸೆಂಬರ್ ನಂತರ ಪೂರ್ಣ ಚಿತ್ರಣ ಹೊರ ಬೀಳಲಿದೆ ಎಂಬ ಮಾತು ಚಳ್ಳಕೆರೆ ಪಡಸಾಲೆಯಲ್ಲಿ‌ ಕೇಳುತ್ತಿದ್ದು ಎಲ್ಲಾದಕ್ಕೂ ಕಾದು ನೋಡಬೇಕಿದೆ.

[t4b-ticker]

You May Also Like

More From Author

+ There are no comments

Add yours