ಕಾಂಗ್ರೆಸ್ ಪಕ್ಷದಿಂದ ಭೋವಿ ಸಮಾಜಕ್ಕೆ ಅನ್ಯಾಯ: ಮಾಜಿ ಸಚಿವ ವೆಂಕಟರಮಣಪ್ಪ ಅಸಮಾಧಾನ

 

ಚಿತ್ರದುರ್ಗ: (chitradurga) ಕಾಂಗ್ರೆಸ್ ಪಕ್ಷ ಭೋವಿ ಸಮಾಜವನ್ನು ಕಡೆಗಣಿಸಲಾಗಿದೆ. ಕಾಂಗ್ರೆಸ್ ಸಾಮಾಜಿಕ ನ್ಯಾಯ ನೀಡುತ್ತೇವೆ ಎಂದು ಹೇಳಿ ನಮ್ಮ ಸಮಾಜಕ್ಕೆ ರಾಜ್ಯದಲ್ಲಿ ಒಬ್ಬರಿಗೂ  ಲೋಕಸಭೆಯಲ್ಲಿ  ಪ್ರಾಧಾನ್ಯತೆ ನೀಡಲಿಲ್ಲ ಎಂದು ಮಾಜಿ ಸಚಿವ ವೆಂಕಟರಮಣಪ್ಪ ಅಸಮಾಧಾನ ಹೊರ ಹಾಕಿದರು.

ನಗರದ ಪತ್ರಿಕಾ ಭವನದಲ್ಲಿ   ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ ಕಾಂಗ್ರೆಸ್ ಪಕ್ಷ  ಭೋವಿ ಸಮಾಜವನ್ನು ಯಾವುದಕ್ಕೂ ಪರಿಗಣನೆ ಮಾಡುತ್ತಿಲ್ಲ. ಯಾವುದೇ ಸ್ಥಾನಮಾನ ನೀಡುತ್ತಿಲ್ಲ. ಕಾಂಗ್ರೆಸ್ ಪಕ್ಷದಿಂದ ನಮಗೆ ಅನ್ಯಾಯವಾಗುತ್ತಿದೆ. ಆದ್ದರಿಂದ ನಮ್ಮ ಸಮಾಜವನ್ನು ಒಗ್ಗೂಡಿಸಿ ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಸಭೆ ನಡೆಸುವ ಮೂಲಕ  ಒಂದು ನಿರ್ಣಯವನ್ನು ತೆಗೆದುಕೊಳ್ಳುತ್ತೇವೆ.

ಒಬ್ಬ ಎಂಎಲ್ಸಿ , ರಾಜ್ಯಸಭೆ, ಲೋಕಸಭೆ ಸೇರಿ ಯಾವುದಕ್ಕೂ ನಮ್ಮನ್ನು ಪರಿಗಣಿಸುತ್ತಿಲ್ಲ. ಬಲಗೈ, ಎಡಗೈ ಎಂದು ನಮ್ಮ ಸಮಾಜವನ್ನು  ಗಣನೆಗೆ ತೆಗೆದುಕೊಂಡಿಲ್ಲ. ಮುಂದಿನ ದಿನಗಳಲ್ಲಿ  ಯಾವ ರೀತಿಯಲ್ಲಿ ತಿರ್ಮಾನ ಮಾಡಬೇಕು  ಎಂದು ಸಭೆ ನಂತರ ಒಂದು ನಿರ್ಧಾರಕ್ಕೆ ಬರುತ್ತೇವೆ ಎಂದರು.

ಬಿಜೆಪಿ ಮತ್ತು ಜೆಡಿಎಸ್ ಸಮ್ಮಿಶ್ರದಲ್ಲಿ  ನಮಗೆ ಕೋಲಾರದಲ್ಲಿ ಟಿಕೆಟ್ ನೀಡಿದ್ದಾರೆ. 1983 ರಿಂದ ಭೋವಿ ಸಮಾಜಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ನೀಡುತ್ತಿಲ್ಲ. ನಿಗಮ ಮಂಡಳಿಗಳ ನೇಮಕದಲ್ಲಿ ನಮ್ಮ ಸಮಾಜಕ್ಕೆ ಅನ್ಯಾಯವಾಗಿದೆ. ಒಂದು ಸ್ಥಾನ ಸಹ ನೀಡಿಲ್ಲ. ವರಿಷ್ಠ ಹೇಳಿದರು ನಮಗೆ ನ್ಯಾಯ ಕೊಟ್ಟರೆ ಮಾತ್ರ ಕಾಂಗ್ರೆಸ್ ಬೆಂಬಲಿಸುತ್ತೇವೆ.

ಕೆಪಿಸಿಸಿ ಸದಸ್ಯ ರಾಮಪ್ಪ ಮಾತನಾಡಿ ಕಾಂಗ್ರೆಸ್ ಪಕ್ಷದಲ್ಲಿ ಸಾಮಾಜಿಕ ನ್ಯಾಯದಡಿ ಟಿಕೆಟ್ ನೀಡುವ ವಿಶ್ವಾಸವಿತ್ತು.ಆದರೆ ಸುರ್ಜೆವಾಲ್ , ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿ ಎಲ್ಲಾರೂ ನ್ಯಾಯ ಒದಗಿಸುವ ನಂಬಿಕೆ ಇತ್ತು. ಆದರೆ ಲೆಕ್ಕಚಾರದಲ್ಲಿ ನಮಗೆ ಟಿಕೆಟ್ ಕೈ ತಪ್ಪಿದೆ. ಆದರೆ ಈಗಲೂ ಅವಕಾಶವಿದ್ದು ಚಿತ್ರದುರ್ಗ ಲೋಕಸಭೆ ಕ್ಷೇತ್ರಕ್ಕೆ ಸಿ.ಫಾರಂ ನೀಡಿ ಎಂದು ಎಂದು ಆಗ್ರಹಿಸಿದರು.

ಇದನ್ನೂ ಓದಿ: ಇಂದಿನಿಂದ ಹೊಳಲ್ಕೆರೆ ಶಾಸಕನಿಗೆ ಅ‌ವನು ಎಂದೇ ಮಾತಾಡುವೆ: ಜಿ.ಹೆಚ್.ತಿಪ್ಪಾರೆಡ್ಡಿ ಕಿಡಿ

ಭೋವಿ ಸಮಾಜದ ಜಿಲ್ಲಾಧ್ಯಕ್ಷ  ತಿಪ್ಪೇಸ್ವಾಮಿ , ಕೆಪಿಸಿಸಿ ಸದಸ್ಯ  ರಾಮಪ್ಪ, ಮಾಜಿ ಜಿ. ಪಂ.ಸದಸ್ಯ ತಿಪ್ಪೇಸ್ವಾಮಿ  ಮುಖಂಡರಾದ  ಪ್ರಕಾಶ್ ,ಕುಮಾರ್ ಇದ್ದರು.

[t4b-ticker]

You May Also Like

More From Author

+ There are no comments

Add yours