ಚಿತ್ರದುರ್ಗ : ಆ ಮಹಾನ್ ನಾಯಕನಿಗೆ ಎದರುವ ಪ್ರಶ್ನೆ ಇಲ್ಲ. ನಮ್ಮ ಜಿಲ್ಲೆಯ ಏಕೈಕ ಶಾಸಕ ಅವನು, ಯಡಿಯೂರಪ್ಪ ಗಿಂತ ದೊಡ್ಡ ನಾಯಕ ಅವನು, ನಿನ್ನೆ ನನ್ನ ವಿರುದ್ಧ ಮಾತಡಿದ್ದರಿಂದ ನಾನು ಸಹ ಇಂದಿನಿಂದ ಅವನಿಗೆ ಅವನು ಎಂದು ಮಾತಡುತ್ತೇನೆ ಎಂದು ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೊಳಲ್ಕೆರೆ ಶಾಸಕ ಚಂದ್ರಪ್ಪ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿದರು.
ನಿನ್ನೆ ಎಂ.ಜೆ.ಕಲ್ಯಾಣ ಮಂಟಪದಲ್ಲಿ ನಡೆದ ಲೋಕಸಭೆ ಆಕಾಂಕ್ಷಿ ರಘುಚಂದನ್ ಮತ್ತು ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಅವರು ಸ್ವಾಭಿಮಾನಿ ಕಾರ್ಯಕರ್ತರಸಭೆಯಲ್ಲಿ ಮಾಜಿ ಸಿಎಮ. ಯಡಿಯೂರಪ್ಪ ಮತ್ತು ಮಾಜಿ ಶಾಸಕ ತಿಪ್ಪಾರೆಡ್ಡಿ ಅವರ ಮೇಲೆ ವಾಲ್ದಾಳಿ ನಡೆಸಿದ್ದ ಪ್ರತಿಯಾಗಿ ಇಂದು ತಿಪ್ಪಾರೆಡ್ಡಿ ಅವರು ಸಹ ಚಿತ್ರದುರ್ಗ ನಗರದ ತಮ್ಮ ನಿವಾಸದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದರು.
ನಿನ್ನೆ ನಡೆಸಿದ ಸಭೆಯಲ್ಲಿ ಯಡಿಯೂರಪ್ಪ ಮತ್ತು ನಾನು ಅವನ ಮಗನಿಗೆ ಟಿಕೆಟ್ ತಪ್ಪಿಸಿದರು ಎಂದು ಆರೋಪಿಸಿದ್ದಾನೆ. ನಾನು ಏಕೆ ಅವನ ಮಗನಿಗೆ ಟಿಕೆಟ್ ತಪ್ಪಿಸಲಿ , ಅವನು ಟಿಕೆಟ್ ತಪ್ಪಿಸುವಷ್ಟು ದೊಡ್ಡ ಲೀಡರ್ ಅಲ್ಲ. ಪಕ್ಷ ಟಿಕೆಟ್ ಯಾರಿಗೆ ನೀಡುತ್ತದೆ ಅವರಿಗೆ ನಾವು ಕೆಲಸ ಮಾಡುತ್ತೇನೆ.ಅವನು ಏಕವಚನದಲ್ಲಿ ಮತನಾಡಿರುವುದು ಸರಿಯಲ್ಲ. ಯಡಿಯೂರಪ್ಪ ಅವರಂತಹ ನಾಯಕನಿಗೆ ಆ ರೀತಿ ಮಾತನಾಡಿದ್ದ ಅವನ ಸಂಸ್ಕ್ರತಿ ತೋರಿಸುತ್ತದೆ.
ನಾನು 1967 ರಿಂದ ಸಹ ಲೋಕಸಭೆ ಚುನಾವಣೆ ಉಸ್ತುವಾರಿಯಾಗಿ ಕೆಲಸ ಮಾಡುತ್ತಿದ್ದೇನೆ. ಯಾವ ಕ್ಷೇತ್ರದಲ್ಲಿ ಯಾವ ವಾತಾವರಣವಿದೆ ಎಂದು ನನಗೆ ಗೊತ್ತು ಅವನಿಗೆ ಏನು ಗೊತ್ತ್ರಿ , ಅವನು ಪ್ರತಿ ಚುನಾವಣೆಯಲ್ಲಿ ಪಕ್ಷ ವಿರೋಧಿ ನೀತಿ ಅನುಸರಿಸುತ್ತಾನೆ ಎಂದು ಕಿಡಿಕಾರಿದರು.
ಯಡಿಯೂರಪ್ಪ ಆಶೀರ್ವಾದಿಂದ ಅಂದು ಅವನು ಕೆಸ್ಆರ್ಟಿಸಿ ಅಧ್ಯಕ್ಷನಾದನು.ಮುಂದೆ ಪೋಲಿಸ್ ಜಿಪ್ ಇಟ್ಟಕೊಂಡು ಸಚಿವನ ರೀತಿ ತೀರ್ಗಾಡಿದ್ದು ಯಡಿಯೂರಪ್ಪ ಕೃಪೆಯಿಂದ ಎಂದು ಮರೆತಿದ್ದಾನೆ. ವಿಜಯೇಂದ್ರ ಕಾಲಿಗೆ ಬಿದ್ದು ಅಧ್ಯಕ್ಷನಾದ ಎಂದು ಕುಟುಕಿದರು.
ಇವನ ಮಗನಿಗೆ ಟಿಕೆಟ್ ನೀಡುತ್ತೇನೆ ಎಂದು ಪಕ್ಷದಲ್ಲಿ ಯಾವ ನಾಯಕನು ಮಾತು ಕೊಟ್ಟಿರಲಿಲ್ಲ.ಕೋರಿ ಕಮಿಟಿ ಸಭೆಯಲ್ಲಿ ನನ್ನ ಮಗ ಸುಮ್ಮನೆ ಅರ್ಜಿ ಹಾಕಿದ್ದಾನೆ ಎಂದು ತಿಳಿಸಿದ ಇವನು ಇಂದು ಮನಸ್ಸಿಗೆ ಬಂದಂತೆ ಆರೋಪ ಮಾಡುತ್ತಿರುವುದು ಸರಿಯಲ್ಲ. ಕಳೆದ ಬಾರಿ ನಾರಾಯಣಸ್ವಾಮಿ ಅವರನ್ನು ಕರೆ ತಂದು ಚಿತ್ರದುರ್ಗಕ್ಕೆ ಟಿಕೆಟ್ ಕೊಡಿಸಿದ್ದು ನಾನೇ ಎಂದು ಯಾವುದೇ ಮುಲಾಜಿಲ್ಲದೇ ಹೇಳುತ್ತೇನೆ.
ಇವನು ನನ್ನ ವಿಧಾನ ಪರಿಷತ್ ಸದಸ್ಯ ಮಾಡಿದ್ದು ನಾನು ಎಂದು ಹೇಳುತ್ತಾನೆ ಆದರೆ ಅವನ ಬೆಂಬಲದಿಂದ ನಾನು ಎಂಲ್ಸಿ ಆಗಿಲ್ಲ.ಇವನು ಬಿಜೆಪಿ ಪಕ್ಷದ ಯಾವ ಎಲೆಕ್ಷನ್ ನಲ್ಲಿ ಅಭ್ಯರ್ಥಿಗಳಿಗೆ ಎಲ್ಲೂ ಬೆಂಬಲ ನೀಡಲ್ಲ. ಎಲ್ಲಾ ಚುನಾವಣೆಯಲ್ಲಿ ಸೋಲಬೇಕು ಎಂಬುದು ಅವನ ದೊಡ್ಡ ಆಸೆಯಾಗಿದೆ.
ನನ್ನ ಎಲ್ಲಾ ಪಕ್ಷದ ಮುಖಂಡರು ,ಗ್ರಾಮ ಪಂಚಾಯತಿ ಸದಸ್ಯ ನನ್ನ ಬೆಂಬಲಕ್ಕೆ ನಿಂತು ಅತ್ಯಧಿಕ ಮತಗಳನ್ನು ನೀಡುವ ಮೂಲಕ ನನ್ನ ಎಂಎಲ್ಸಿ ಮಾಡಿದರು ಎಂದರು.
1979 ರಲ್ಲಿ ಮುನ್ಸಿಪಾಲ್ಟಿ ಯಲ್ಲಿ ಸೋತವನು ಇಂದು ನನ್ನ ಗೆಲ್ಲಸಿದೇ ಎಂದು ಹೇಳುತ್ತಾನೆ. ಯಾರದರೂ ನೆನಪು ಮಾಡುವ ಅವಶ್ಯಕತೆ ಇದೆ. ಇವನು ಈ ಬಾರಿ ವಿಧಾನ ಸಭಾ ಚುನಾವಣೆಯಲ್ಲಿ ದೊಡ್ಡ ವ್ಯಕ್ತಿ ಬಳಿ ಕಾಂಗ್ರೆಸ್ ಅಭ್ಯರ್ಥಿ ಕರೆದುಕೊಂಡು ಹೋಗಿ 4೦-50 ಲಕ್ಷ ದುಡ್ಡು ಕಳಿಸಿದ್ದರು ಆದರೆ ಅವರು ಒಪ್ಪಲಿಲ್ಲ ಎಂದು ಕುಟುಕಿದರು.
ಇವನು ನಾನು ಸತ್ತಾಗ 20 ಸಾವಿರ ಜನ ಸೇರುತ್ತಾರೆ, ಆದರೆ ನಾನು ಸತ್ತರೆ 4 ಜನ ಸೇರುತ್ತಾರೆ ಎಂದಿದ್ದಾನೆ.ಅದನ್ನು ಟ್ರಯಲ್ ನೋಡುವುದು ಹೇಗೆ ಎಂದು ವ್ಯಂಗ್ಯ ಮಾಡಿದರು.
ಹೊಳಲ್ಕೆರೆ ಮಂಡಲ ಅಧ್ಯಕ್ಷ ಸಿದ್ದೇಶ್ ಅವರನ್ನು ನನ್ನ ಬಳಿ ಸಂಧಾನಕ್ಕೆ ಕಳಿಸಿದ್ದರು.ಜೋಗಿಮಟ್ಟಿಯಲ್ಲಿ ಪಾರ್ಟಿ ಮಾಡುವ ಮೂಲಕ 30 ವರ್ಷದ ಸಿಟ್ಟನ್ನು ಕೊನೆಗಾಣಿಸೋಣ ಎಂದಿದ್ದು ಮಗನ ಟಿಕೆಟ್ ಗಾಗಿ ಎಂದು ಅಷ್ಟು ತಿಳಿಯಲ್ವ..
ನ್ಯಾಯಬೆಲೆ ಅಂಗಡಿ ನಡೆಸುತ್ತಿದ್ದ ಇವನು ನಾನು ರಾಜಕಾರಣಕ್ಕೆ ಬಂದಾಗ ನಿಕ್ಕರು ಹಾಕಿಕೊಂಡಿರಲಿಲ್ಲ. ಇವನಿಂದ ನಾನು ಕಲಿಯುವ ಅವಶ್ಯಕತೆ ಇಲ್ಲ. ಚುನಾವಣೆಯಲ್ಲಿ 3 ತಾರೀಖು ನಾಮಪತ್ರ ಸಲ್ಲಿಸುತ್ತೇನೆ ಎಂದಿದ್ದಾನೆ. 3 ಏಕೆ ಇಂದೇ ಮಾಡಲಿ ಇಲ್ಲಿ ಬ್ಲಾಕ್ ಮೇಲ್ ತಂತ್ರಕ್ಕೆ ಮಣಿಯುವವರು ಯಾರು ಇಲ್ಲ ಪಕ್ಷ ಎಲ್ಲವನ್ನೂ ಗಮನಿಸುತ್ತದೆ . ನಮ್ಮ ದು ಶಿಸ್ತಿನ ಪಕ್ಷವಾಗಿದ್ದು ವರಿಷ್ಠರು ಮುಂದಿನ ತಿರ್ಮಾನ ಮಾಡುತ್ತಾರೆ.ನಾನು ಅವನನ್ನು ಪಕ್ಷದಿಂದ ಹೊರಹಾಕಿ ಎಂದು ತಿಳಿಸಿ ದೊಡ್ಡವನಾಗಿ ಮಾಡಲ್ಲ. ಅವನು ಇದ್ದರೆ ಏನು ಬಿಟ್ಟರೆ ಏನು. ನನಗೇನು ಆಗಬೇಕು ಎಂದು ಏಕವಚನದಲ್ಲಿ ಮಾತು ಮುಗಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ದ್ಯಾಮಣ್ಣ, ನಗರಸಭೆ ಸದಸ್ಯ ಸುರೇಶ್ ಮತ್ತು ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಇದ್ದರು.
[t4b-ticker]
+ There are no comments
Add yours