ಕಳೆದ ಮೂರು ಎಲೆಕ್ಷನ್ ರಾಮುಲು ಒಂದೇ ಕಡೆ ನಿಂತಿಲ್ಲ, ಈ ಬಾರಿಯೂ ಕ್ಷೇತ್ರ ಬಿಟ್ಟು ಹೋಗುವ ಯತ್ನ: ಪ್ರೀಯಾಂಕ್ ಖರ್ಗೆ ವಾಗ್ದಳಿ

 

ಚಿತ್ರದುರ್ಗ:ಕಾಂಗ್ರೆಸ್ ಮುಖಂಡ ರಾಹುಲ್ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆ ವೇಳೆ  ಮೊಳಕಾಲ್ಮೂರಿನ ಕೋನಸಾಗರ ಗ್ರಾಮದಲ್ಲಿ ಪ್ರೀಯಾಂಕ್ ಖರ್ಗೆ ಅವರು ರಾಹುಲ್ ಕಾಲಿಟ್ಟಕಡೆ ಕಾಂಗ್ರೆಸ್ ಮಟಾಶ್ ಎಂಬ ರಾಮುಲು ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ್ದು ಕಳೆದ ಮೂರು ಎಲೆಕ್ಷನ್ ರಾಮುಲು ಒಂದೇ ಕಡೆ ನಿಂತಿಲ್ಲ, ಈ ಬಾರಿಯೂ ಕ್ಷೇತ್ರ ಬಿಟ್ಟು ಹೋಗುವ ಯತ್ನ ನಡೆಸುತ್ತಿದ್ದಾರೆ.

ಕಳೆದ ಬಾರಿ ಬಿಜೆಪಿ ನಾಯಕರು ಎಲ್ಲಿ ಎಲೆಕ್ಷನ್ ಗೆದ್ದಿದ್ದಾರೆ.ಖರೀದಿ ಮಾಡಿ ಎಲ್ಲಿ ಗೆದ್ದಿದ್ದಾರೆ ಬಿಜೆಪಿ ನಾಯಕರು ಹೇಳಲಿ.ಅಮಿತ್ ಷಾ, ಮೋದಿ ದೆಹಲಿಯಲ್ಲಿ ಇದ್ದಾರೆ, ದೆಹಲಿ ಗೆಲ್ಲೋಕ್ಯಾಕ್ ಆಗಿಲ್ಲ. ಭ್ರಷ್ಟಾಚಾರ ಆಡಳಿತ, ಪೇ ಸಿಎಂ ಡೈವರ್ಟ್ ಮಾಡಲು ವೈಯಕ್ತಿಕ ಟೀಕೆ ಮಾಡುತ್ತಿದ್ದಾರೆ.ಅವರ ಅಡಳಿತದ ಮೇಲೆ ನಂಬಿಕೆ ಇದ್ದರೆ, ಪಾದಯಾತ್ರೆ ಮಾಡಲಿ.

 

ಜನ ಹೂ ಹಾಕುತ್ತಾರೋ, ಕಲ್ಲು ಹೊಡೆಯುತ್ತಾರೋ ನೋಡೋಣಾ.ಜನ ಸಂಕಲ್ಪ ಯಾತ್ರೆಯಲ್ಲ, ವಿಜಯೇಂದ್ರಗಾಗಿ ಯಾತ್ರೆ.ಯತ್ನಾಳ್ ಹೇಳುತ್ತಿದ್ದಾರೆ PSI ಹಗರಣದಲ್ಲಿ ಇದ್ದಾರೆ ಎಂದು ಹೇಳುತ್ತಾರೆ.ಅವರ ಆಡಳಿತಲ್ಲಿ ಏನು ಆಗುತ್ತಿದೆ ಎಂದು ಬಿಜೆಪಿ ಹೇಳಲ್ಲ. ಕನಕಗಿರಿ ಎಂಎಲ್ಎ, ವಿಜಯೇಂದ್ರ ಹೆಸರು ಕೇಳಿ ಬರುತ್ತಿದೆ.

ಮೊದಲು ಈ ಬಗ್ಗೆ ತನಿಖೆ ಮಾಡಲಿ.ಸಂವಿಧಾನದಲ್ಲಿ ಎಲ್ಲರೂ ಒಂದೇ,ಗೂಡ್ಸೆ ದೇಶ ಪ್ರೇಮಿ ಎಂದು ಹೇಳುತ್ತಾರೆ, ಅವರು ಯಾರ ದೂಳಿಗೆ ಸಮ ಮತ್ತೆ?

ನನ್ನ ವಯಸ್ಸು, ಯಡಿಯೂರಪ್ಪ ಅವರ ರಾಜಕೀಯ ಅವಧಿ ಒಂದೇ ಇದೆ.ಅವರ ಬಗ್ಗೆ ನಾನು ಹೆಚ್ಚು ಮಾತನಾಡಲ್ಲ.ಹಿಜಾಬ್ ವಿಚಾರ ಸುಪ್ರೀಂ ಕೋರ್ಟ್ ಅಂಗಳದಲ್ಲಿ ಇದೆ.ಸುಪ್ರೀಂ ಕೋರ್ಟ್ ತೀರ್ಪಿಗೆ , ಕಾನೂನಿಗೆ ತಲೆ ಬಾಗುತ್ತೇವೆ.

[t4b-ticker]

You May Also Like

More From Author

+ There are no comments

Add yours