ದೇಹ ಮತ್ತು ಮನಸ್ಸು ಶುದ್ಧವಾಗಿದ್ದರೆ, ಇಡೀ ದೇಶವೇ ಸುಂದರ: ಸದ್ಗುರು ಪ್ರದೀಪ್

 

ಚಿತ್ರದುರ್ಗ:   ದೇಹ, ಮನಸ್ಸು ಮತ್ತು ಬದುಕುವ ಪರಿಸರ ಶುದ್ಧವಾಗಿದ್ದರೆ, ಆ ನಾಡು ಸುಭಿಕ್ಷವಾಗಿರುವುದು. ಅಲ್ಲದೇ ಸುಂದರವಾಗಿಕಾಣುವುದು ಎಂದು ಬಿಜೆಪಿ ಮುಖಂಡ ಹಾಗೂ ಯುವ ಉದ್ಯಮಿ ಸದ್ಗುರು ಪ್ರದೀಪ್ ತಿಳಿಸಿದರು.
ಪಟ್ಟಣದ ಅಶೋಕ ರಂಗಮಂದಿರದಲ್ಲಿ ಸೇವಾಪಾಕ್ಷಿಕಾ ಕಾರ್ಯಕ್ರಮದಡಿ ಬಿಜೆಪಿ ಹೊಸದುರ್ಗ ತಾಲ್ಲೂಕು ಮಂಡಲ ವತಿಯಿಂದ ನಡೆದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯಾವುದೇ ಒಂದು ದೇಶ ಸಂಪತ್ಭರಿತವಾಗಿ ಇರಬೇಕಾದರೆ, ಆ ದೇಶ ಆಂತರಿಕವಾಗಿ ಮತ್ತು ಬಾಹ್ಯವಾಗಿ ಸದೃಢವಾಗಿರಬೇಕು ಎಂದರು.
 ಹಸಿದ ಜೀವಗಳಿಗೆ ಅನ್ನ ನೀಡುವ ರೈತ, ದೇಶಕ್ಕಾಗಿ ಚಳಿಯಾಗಲಿ, ಮಳೆಯಾಗಲಿ, ಇರುಳು ಎನ್ನದೆ ಸೇವೆ ಮಾಡುವ ಸೈನಿಕ ಇವರ ನಿರಂತರ ಪರಿಶ್ರಮದ ಫಲವಾಗಿ ದೇಶ ಇಂದು ಸುಭಿಕ್ಷವಾಗಿದೆ. ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರು ಸ್ವಚ್ಛ ಭಾರತ್ ಯೋಜನೆ ಅಡಿ ಕೋಟ್ಯಾಂತರ ಕುಟುಂಬಗಳಿಗೆ ಶೌಚಾಲಯ, ಅನಿಲ ಯೋಜನೆ, ರೈತರಿಗಾಗಿ ಫಸಲ್ ಭೀಮಾ ಯೋಜನೆ, ಆರೋಗ್ಯ ಸುರಕ್ಷಾದಂತಹ ಕಾರ್ಯಕ್ರಮಗಳ ಮುಖಾಂತರ ದೇಶದ ಬಡವರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿದ್ದು, ಹೆಮ್ಮೆಯ ಸಂಗತಿ ಎಂದು ಸಂತಸ ವ್ಯಕ್ತಪಡಿಸಿದರು.
 ಪುರಸಭಾ ಸದಸ್ಯ ದಾಳಿಂಬೆ ಗಿರೀಶ್ ಮಾತನಾಡಿ, ಮೊದಲು ನಾವು ಸ್ವಚ್ಛವಾಗಿದ್ದು, ನಮ್ಮ ಮನೆಯ ಸುತ್ತಮುತ್ತಲಿನ ಪರಿಸರ ಸ್ವಚ್ಛಗೊಳಿಸುವ ಜೊತೆಗೆ ನಮ್ಮ ಊರಿನ ಸಾರ್ವಜನಿಕ ಸ್ಥಳಗಳಾದ, ದೇವಸ್ಥಾನ ಆಸ್ಪತ್ರೆ ಮತ್ತು ಮಾರುಕಟ್ಟೆಗಳಂತಹ ಜಾಗಗಳಲ್ಲಿ ಸ್ವಚ್ಛತೆಯನ್ನ ಕಾಪಾಡಬೇಕಾದದ್ದು ಪ್ರಜೆಗಳಾದ ನಮ್ಮ ಕರ್ತವ್ಯ. ಪ್ರಧಾನಿಯವರ ಸ್ವಚ್ಛ ನಗರ ಯೋಜನೆ ಅಡಿಯಲ್ಲಿ 2 ಬಾರಿ ನಮ್ಮ ಪುರಸಭೆಗೆ ಗಾಂಧಿ ಪ್ರಶಸ್ತಿ ಲಭಿಸಿದ್ದು, ನಗರದ ಸಚ್ಚತೆಯನ್ನು ಕೇವಲ ಪುರಸಭೆ ಮಾಡಬೇಕು ಎಂದು ತಿಳಿದು ಕೊಳ್ಳುವ ಬದಲು, ಮೊದಲು ನಮ್ಮ ಪರಿಸರವನ್ನು ಶುಚಿಯಾಗಿಡುವುದು ನಮ್ಮ ಕರ್ತವ್ಯವಾಗಬೇಕು ಎಂದರು.
 ಮಂಡಲ ಅಧ್ಯಕ್ಷ ಗೂಳಿಹಟ್ಟಿ ಜಗದೀಶ್ ಮಾತನಾಡಿ, ಭಾರತದ ಪುರಾತನ ಹರಪ್ಪ, ಮಹೆಂಜೋದಾರೊ ನಾಗರಿಕತೆಯಲ್ಲಿ ನಗರ ಯೋಜನೆಯಲ್ಲಿ ಚರಂಡಿ ನಿರ್ಮಾಣಕ್ಕೆ ಮೊದಲ ಪ್ರಾಶಸ್ತ್ಯ ನೀಡಿದ್ದರು.ಜಿ 20 ಸಮ್ಮೇಳನವನ್ನು ಮಾಡುವುದರ ಮೂಲಕ  ಪ್ರಪಂಚದಲ್ಲಿ ಭಾರತವನ್ನು ಅಗ್ರಗಣ್ಯ ದೇಶವೆಂದು ಪರಿಚಯಿಸಿದರು. ದೇಶಕ್ಕಾಗಿ ತನ್ನ ಬದುಕಿನದ್ದಕ್ಕೂ  ದೇಶಕ್ಕಾಗಿ ತನ್ನನ್ನು ತೊಡಗಿಸಿಕೊಂಡ ಏಕೈಕ ಪ್ರಧಾನಿ ನಮ್ಮ ನರೇಂದ್ರ ಮೋದಿಯವರು. ಇವರ ಜನಪರ ಯೋಜನೆಗಳು ದೇಶದ ಸಾಮಾನ್ಯ ಜನರಿಗೆ ತಲುಪಿವೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಪುರಸಭಾ ಸದಸ್ಯ ನಾಗರಾಜ್, ರಾಮಚಂದ್ರಪ್ಪ, ಸಾಯಿ ಕಿಡ್ಸ್  ನವೀನ್, ದೇವರಾಜ್ ಮತ್ತು ಮಯೂರ್ ಶೆಟ್ಟಿ ಸೇರಿದಂತೆ ಇತರ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.
[t4b-ticker]

You May Also Like

More From Author

+ There are no comments

Add yours