ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ನಾನು ಬಿಜೆಪಿ ಆಕಾಂಕ್ಷಿ:ನಿವೃತ್ತ ಜಿಲ್ಲಾಧಿಕಾರಿ ಶ್ರೀರಂಗಯ್ಯ

 

ಚಿತ್ರದುರ್ಗ ಫೆ. ೨೮
ಚಿತ್ರದುರ್ಗ ಜಿಲ್ಲಾಧಿಕಾರಿಯಾಗಿ ಹಲವಾರು ಜನಪರವಾದ ಕೆಲಸವನ್ನು ಮಾಡಿದ್ದೇನೆ, ನನ್ನ ಅಭಿಮಾನಿಗಳು ಹಿತೈಷಿಗಳು ರಾಜಕೀಯಕ್ಕೆ ಬನ್ನಿ ಎಂಬ ಒತ್ತಾಯದ ಮೇರೆಗೆ ರಾಜಕೀಯಕ್ಕೆ ಬರುತ್ತಿದ್ದು ಈ ಬಾರಿ ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ  ಟಿಕೆಟ್ ಕೇಳಿದ್ದೇನೆ ಆದರೆ ಪಕ್ಷದ ವರಿಷ್ಠರು ಯಾವುದೇ ರೀತಿಯ ಭರವಸೆಯನ್ನು ನೀಡಿಲ್ಲ ಎಂದು ನಿವೃತ್ತ ಜಿಲ್ಲಾಧಿಕಾರಿ ಶ್ರೀರಂಗಯ್ಯ ತಿಳಿಸಿದ್ದಾರೆ.

ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ  ಮಾತನಾಡಿದ ಅವರು  ಚಿತ್ರದುರ್ಗ ಜಿಲ್ಲಾಧಿಕಾರಿಯಾಗಿ ೨೦೧೪ರಲ್ಲಿ ಕೆಲಸವನ್ನು ಮಾಡಿದ್ದೇನೆ, ಇಲ್ಲಿನ ಹಲವರು ಸಮಸ್ಯೆಗಳಿಗೆ ಪರಿಹಾರವನ್ನು ಕಂಡು ಹಿಡಿದಿದ್ದೇನೆ. ಇದಲ್ಲದೇ  ಹಲವಾರು ಸಾರ್ವಜನಿಕರ   ಸಮಸ್ಯಗಳಿಗೆ ಪರಿಹಾರ ನೀಡಿದ್ದೇನೆ.

ಚಿತ್ರದುರ್ಗ ಜಿಲ್ಲೆಯ ಆರು ತಾಲ್ಲೂಕುಗಳ ಪರಿಚಯವಿದೆ. ಇಲ್ಲಿನ ಜನತೆಯ ನಡುವೆ ಒಡನಾಟ ಇದೆ, ಜನಪ್ರತಿನಿಧಿಗಳೊಂದಿಗೆ ಉತ್ತಮವಾದ ಬಾಂಧವ್ಯವನ್ನು ಹೊಂದಿದ್ದೇನೆ, ೨೦೧೪ರಲ್ಲಿ ವಿವಿಧ ರೀತಿಯ ಚುನಾವಣೆಯನ್ನು ಮಾಡಿದ್ದೇನೆ. ಚಿತ್ರದುರ್ಗ ಲೋಕಸಭೆ ಕ್ಷೇತ್ರದ  ೮ ಕ್ಷೇತ್ರಗಳ ಪರಿಚಯವಿದ್ದು, ಇಲ್ಲಿನಾ ಆಗು ಹೋಗುಗಳನ್ನು ತಿಳಿದಿದ್ದೇನೆ. ಇದರಿಂದ ಈ ಬಾರಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲು ತೀರ್ಮಾನ ಮಾಡಿದ್ದೇನೆ ಎಂದರು.
ಬಿಜೆಪಿಯ ಹೈಕಮಾಂಡ್ ನ್ನು  ಹಲವಾರು ಬಾರಿ ಬೇಟಿಯಾಗಿದ್ದೇನೆ, ನನಗೆ ಟಿಕೆಟ್  ನೀಡುವಂತೆ ಮನವಿ ಮಾಡಿದ್ದೇನೆ. ಈಗ ಹಾಲಿ ಸಂಸದರು ನಾನು ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿದ್ದಾರೆ ಇದರಿಂದ ನಾನು ಕಣಕ್ಕೆ ಇಳಿದಿದ್ದೇನೆ, ಈ ಕ್ಷೇತ್ರದಲ್ಲಿ ಮಾದಿಗ ಎಡಗೈ ಸಮುದಾಯದವರ ಸುಮಾರು ೪ ರಿಂದ ೫ ಲಕ್ಷ ಮತದಾರರಿದ್ದಾರೆ. ಈಗಾಗಲೇ ಒಂದು ಬಾರಿ ಕ್ಷೇತ್ರದ ನಾಯಕರನ್ನು ಭೇಟಿ ಮಾಡಿದ್ದೇನೆ. ಇನ್ನು ಮತದಾರರನ್ನು ಬೇಟಿ ಮಾಡಿಲ್ಲ ಮುಂದಿನ ದಿನದಲ್ಲಿ ಅವರನ್ನು ಸಹಾ ಭೇಟಿ ಮಾಡುವುದರ ಮೂಲಕ ಜಿಲ್ಲಾಧಿಕಾರಿಯಾಗಿದ್ದಾಗ ನಾನು ಮಾಡಿದ ವಿವಿಧ ರೀತಿಯ ಕೆಲಸಗಳನ್ನು ಅವರಿಗೆ ತಿಳಿಸಿಕೊಡಲಾಗುವುದು ಎಂದು ಶ್ರೀರಂಗಯ್ಯ ತಿಳಿಸಿದರು.
ಬಿಜೆಪಿ ಪಕ್ಷದಲ್ಲಿ ನಾನು ಟೀಕೇಟ್ ಕೇಳಿದ್ದೇನೆ ಪಕ್ಷ ತೀರ್ಮಾನ ಮಾಡಿ ನನಗೆ ಟೀಕೇಟ್ ನೀಡಿದರೆ ಸ್ಪರ್ದೆ ಮಾಡುತ್ತೇನೆ, ಇಲ್ಲವಾದಲ್ಲಿ ಕಾರ್ಯಕರ್ತನಾಗಿ ಪಕ್ಷ ಯಾರಿಗೆ ಟಿಕೆಟ್  ನೀಡುತ್ತದ್ದೇಯೇ ಅವರ ಪರವಾಗಿ ಕೆಲಸವನ್ನು ಮಾಡುತ್ತೇನೆ,

ಇದನ್ನೂ ಓದಿ: ಅಪ್ಪ ಆಟೋ ಡ್ರೈವರ್ ಮಗಳು ಜಡ್ಜ್ | ಅಪರೂಪದ ಸಾಧನೆಗೆ ಕೋಟೆನಾಡು ಸಾಕ್ಷಿ

ನಾನು ಸಹಾ ಸ್ಥಳಿಯನಾಗಿದ್ದೇನೆ, ಹೊರಗಿನಿಂದ ಬಂದವನಲ್ಲ, ಗಡಿ ಪ್ರದೇಶದಲ್ಲಿ ನಮ್ಮ ಪರಿವಾರ ಇದೆ ಎಂದು ಸ್ಪಷ್ಟಪಡಿಸಿದರು.
ಗೋಷ್ಟಿಯಲ್ಲಿ ತಾಲ್ಲೂಕು ಪಂಚಾಯಿ ಮಾಜಿ ಸದಸ್ಯ ಮೋಹನ್, ಗ್ರಾಮ ಪಂಚಾಯಿತಿ ಸದಸ್ಯ ರಂಗಯ್ಯ ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours