ಭದ್ರಾ ಕಾಮಗಾರಿ ವಿಕ್ಷಣೆ ಮಾಡಿದ :ಶಾಸಕಿ ಪೂರ್ಣಿಮಾ ಶ್ರೀನಿವಾಸ್

 

ಹಿರಿಯೂರು: ಭದ್ರಾ ಮೇಲ್ದಂಡೆ ಯೋಜನೆಯಿಂದ ವಾಣಿವಿಲಾಸ ಸಾಗರಕ್ಕೆ ನೀರು ಹರಿಸುವ ಹಂತದಲ್ಲಿ ತೊಡಕಾಗಿರುವ ಕಾಮಗಾರಿಗಳ ಬಗ್ಗೆ ವೀಕ್ಷಣೆ ಮಾಡಲು ನಮ್ಮ ತಂಡ ಯೋಜನಾ ಪ್ರದೇಶದ ಅಜ್ಜಂಪುರ ಬಳಿಯ ತಿಮ್ಮಾಪುರ ಗ್ರಾಮದ ಬಳಿ ಹಳ್ಳದಲ್ಲಿ ಸಿಲ್ಟ್ ಮತ್ತು ಜಂಗಲ್ ತುಂಬಿ ನೀರು ಹರಿಯಲು ತೊಂದರೆಯಾಗಿ ಹಾಗು ಅಕ್ಕಪಕ್ಕದ ಊರುಗಳಿಗೆ ಪ್ರಯಾಣ ಮಾಡಲು ತೊಂದರೆಯಾಗಿತ್ತು….. ಸುಮಾರು 5 ಕಡೆ ಕಿರು ಸೇತುವೆಗಳನ್ನು ನಿರ್ಮಿಸಲು ಮುಂದಾಗಿ ಅವುಗಳಲ್ಲಿ 2 ಮುಕ್ತಾಯ ಹಂತದಲ್ಲಿದ್ದು,, ಇನ್ನು ಎರಡು ಅರ್ಧಂಬರ್ಧ ಕೆಲಸವಾಗಿದೆ …ಅವುಗಳನ್ನು 15 ದಿನಗಳಲ್ಲಿ ಮುಗಿಸಿ ಕೊಡುವುದಾಗಿ AEE ಇಂಜಿನಿಯರ್ ವಾಲೇಕರ್ ಮತ್ತು ಗುತ್ತಿಗೆದಾರ ಗೌಡರ್ ಶಾಸಕರಾದ ಪೂರ್ಣಿಮಾ ಶ್ರೀನಿವಾಸ್ ಅವರಿಗೆ ತಿಳಿಸಿದರು ನಂತರ ಗ್ರಾಮದಲ್ಲಿ ಗ್ರಾಮ ಸಭೆ ಗ್ರಾಮಸ್ಥರ ಅಭಿಪ್ರಾಯದಂತೆ ಹಳ್ಳಕ್ಕೆ ರಿವಿಟ್ ಮೆಂಟ್ ಕಟ್ಟಿ ಕೊಡಬೇಕು ..ಹಾಗೂ ಕಳೆದ ಬಾರಿ ನೀರು ನುಗ್ಗಿ ಬೆಳೆ ಹಾಳ್ ಆಗಿದ್ದಕ್ಕೆ ಬೆಳೆ ಪರಿಹಾರ ಕೊಡಬೇಕು ಎಂದು ಗ್ರಾಮದ ಮುಖಂಡರಾದ ಹಾಲ್ ಸಿದ್ದಪ್ಪ ಕೇಳಿದರು…. ಅಲ್ಲಿಂದ ಅಜ್ಜಂಪುರ ಬಳಿಯ ಹೆಬ್ಬೂರು ರೈಲ್ವೆ ಜಂಕ್ಷನ್ ಕಾಮಗಾರಿ ನೋಡಲಾಗಿ ಅಲ್ಲಿ ನೀರು ಪ್ರವೇಶಮಾಡುವ ದ್ವಾರದಲ್ಲಿ ಸಿಮೆಂಟ್ ರೇವೆಟ್ಮೆಂಟ್ ಕಟ್ಟಲು ಮುಂದಾಗಿದ್ದು ಮಳೆ ಬಂದಿದ್ದರಿಂದ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಇದು ಮುಗಿಯಲು ಕನಿಷ್ಠ 15 ದಿನ ಬೇಕು ಎಂದು ಸೂಪ್ ಟೆಂಟ್ ಇಂಜಿನಿಯರ್ ಲಮಾಣಿ ತಿಳಿಸಿದರು. ವೀಕ್ಷಣೆಯ ನೇತೃತ್ವದ ತಂಡದಲ್ಲಿ ಹೋರಾಟ ಸಮಿತಿ ಅಧ್ಯಕ್ಷರಾದ ಕಸವನಹಳ್ಳಿ ರಮೇಶ್ ಬಿಜೆಪಿ ಬಿಜೆಪಿ ರಾಜ್ಯ ಹಿಂದುಳಿದ ಮೋರ್ಚಾ ಉಪಾಧ್ಯಕ್ಷರಾದ ಡಿ.ಟಿ. ಶ್ರೀನಿವಾಸ್ ವಿಶ್ವಕರ್ಮ ಸಮಾಜದ ಅಧ್ಯಕ್ಷರಾದ ನಾರಾಯಣಾಚಾರ್ ,ಐಟಿ ಸೆಲ್ ರಘುರಾಮ್ ಆಪ್ತ ಸಹಾಯಕ ನಿರಂಜನ್ ಮೂರ್ತಿ , ಆಲೂರು ಅಜ್ಜಯ್ಯ, ರಾಮಚಂದ್ರ ಕಸವನಹಳ್ಳಿ, ಪಿಟ್ಲಾಲಿ ಶ್ರೀನಿವಾಸ್ , ಹೆಬ್ಬುರ್ ಬಳಿ ರೈತ ಮುಖಂಡರಾದ ಉಮೇಶ ಶೆಟ್ಟರು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours