ಕೋಟೆ ನಾಡಿನ ಚಾಣಕ್ಯನಿಗೆ ಒಲಿಯುವುದೆ ಮಂತ್ರಿ ಗಿರಿ?

 

ಚಿತ್ರದುರ್ಗ:  ಕೋಟೆ ನಾಡು ಚಿತ್ರದುರ್ಗ ರಾಜಕಾರಣದಲ್ಲಿ ತಿಪ್ಪಾರೆಡ್ಡಿ ಎಂಬ ಹೆಸರು ಮಕ್ಕಳಿಂದ ಹಿಡಿದು ಮುಪ್ಪಿನ ಜನರಿಗೂ ಮನೆ ಮಾತಾಗಿದ್ದಾರೆ. ಕಳೆದ 40   ವರ್ಷಗಳಿಂದ ಚಿತ್ರದುರ್ಗ ರಾಜಕಾರಣದಲ್ಲಿ  ಸತತ ಹಿಡಿದ ಸಾಧಿಸಿಕೊಳ್ಳುತ್ತ ಬಂದಿರುವ ಶಾಸಕ ತಿಪ್ಪಾರೆಡ್ಡಿ ಒಮ್ಮೆ ಸೋಲನ್ನು ಅನುಭವಿಸಿ ಕೇವಲ ಒಂದು ವರ್ಷ ಮನೆಯಲ್ಲಿ ಇದ್ದ ಬಿಜೆಪಿ   ವಿಧಾನ ಪರಿಷತ್  ಸದಸ್ಯರಾಗಿ ಬಂದು ಜನರ ಕಷ್ಟಗಳನ್ನು ಆಲಿಸುತ್ತ ಮತ್ತೆ ತಿರುಗಿ ನೋಡದೆ ಗೆಲುವಿನ ನಗೆ ಬೀರುತ್ತ ಶಾಸಕರಾಗಿ ಸತತವಾಗಿ ಆಯ್ಕೆಯಾಗಿ ಬರುತ್ತಿದ್ದಾರೆ.  
ಜಿಲ್ಲೆಯ ಹಿರಿಯ ಶಾಸಕ: ರಾಜ್ಯ ಸರ್ಕಾರದ ಮಟ್ಟದಲ್ಲಿ ಸಹ ಹಿರಿಯ ಶಾಸಕರ ಪಟ್ಟಿಯಲ್ಲಿ ತಿಪ್ಪಾರೆಡ್ಡಿ ನಿಲ್ಲುತ್ತಾರೆ. ಆದರೆ ಬರದ ನಾಡು ಚಿತ್ರದುರ್ಗ ಜಿಲ್ಲೆಗೆ ಮತ್ತೊಂದು ಸ್ಥಳೀಯವಾಗಿ ಮಂತ್ರಿ ಭಾಗ್ಯ ದೊರೆತರೆ ಮತ್ತಷ್ಟು  ಅಭಿವೃದ್ಧಿ ಮಾಡಲು ಮತ್ತು ಜಿಲ್ಲೆಯ ಸಮಸ್ಯೆ ಬಗೆಹರಿಸಲು ಸಹಕಾರಿ ಎಂಬ ವಾದವನ್ನು ಯಡಿಯೂರಪ್ಪ ಮುಂದೆ ಮಂಡಿಸಿದ್ದಾರೆ. ಜಿಲ್ಲೆಯಲ್ಲಿ ಶಾಸಕರ ಗೆಲುವಿನಲ್ಲಿ ತಿಪ್ಪಾರೆಡ್ಡಿ ರಣತಂತ್ರ: ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಹಿರಿಯೂರು, ಹೊಸಸುರ್ಗ, ಹೊಳಲ್ಕೆರೆಯಲ್ಲಿ ಕೆಲವೊಂದು ತನ್ನದೆ ಆದ ಪಡೆ ಹೊಂದಿರುವ ತಿಪ್ಪಾರೆಡ್ಡಿ  ತನ್ನ ಕ್ಷೇತ್ರ ಒರತುಪಡಿಸಿ ಇತರೆಡೆ ಸಹ ಪ್ರಚಾರ ಮಾಡಿದ್ದರು. ಹಿರಿಯೂರಲ್ಲಿ ಕಮಲ ಅರಳಿಸುವಲ್ಲಿ ತಿಪ್ಪಾರೆಡ್ಡಿ ಅವರ ಕೊಡುಗೆ ಅಪಾರ ಎಂಬ ಮಾತು ರಾಜಕೀಯ ವಿಶ್ಲೇಷಣೆಯಾಗಿದೆ. 
ಸಚಿವಗಿರಿಗೆ ಪಟ್ಟು : ರಾಜಕೀಯ ಮೇಲಾಟದಲ್ಲಿ ಇತರೆ ಪಕ್ಷದಿಂದ ಬಂದು ಗೆಲುವು ಸಾಧಿಸಿ ಸರ್ಕಾರ ಭದ್ರಗೊಳಿಸಿದವರಿಗೆ ಸಚಿವ ಸ್ಥಾನ ನೀಡಿದ ನಂತರ ತಿಪ್ಪಾರೆಡ್ಡಿ ಸಚಿವ ಸ್ಥಾನ ದೊರೆಯುತ್ತದೆ ಎಂಬ ಆಶಾಭಾವನೆಯಲ್ಲಿ ತಿಪ್ಪಾರೆಡ್ಡಿ ಇದ್ದರು. ಆದ ಯಡಿಯೂರಪ್ಪ ಏಕಾಏಕಿ ನಿಗಮ ಮಂಡಳಿ ನೀಡಿದ್ದಕ್ಕೆ   ತಿಪ್ಪಾರೆಡ್ಡಿ  ಸಿಡಿಮಿಡಿಗೊಂಡರು. ಮತ್ತು  1998 ರಲ್ಲಿ ನಿಗಮ ಮಂಡಳಿ ಸ್ಥಾನ ಅಲಂಕರಿಸಿದ್ದು ನನಗೆ ಬೇಡ ಎಂದು ನೇರವಾಗಿ ಸರ್ಕಾರ ಮತ್ತು ಯಡಿಯೂರಪ್ಪ ವಿರುದ್ಧ ಕಿಡಿಕಾರಿದರು.  
   ಬಿಜೆಪಿ ಕಾರ್ಯಕರ್ತರು ಮತ್ತು ತಿಪ್ಪಾರೆಡ್ಡಿ ಮಾತ್ರ ಈ ಬಾರಿ  ನಮ್ಮ ಶಾಸಕ ತಿಪ್ಪಾರೆಡ್ಡಿ ಅವರಿಗೆ ಯಡಿಯೂರಪ್ಪ ಅವಕಾಶ ಮಾಡಿಕೊಡುತ್ತಾರೆ ಎಂಬ ಭಾವನೆಯಲ್ಲಿ ಇದ್ದಾರೆ ಬಿಜೆಪಿ ಮಟ್ಟಿಗೆ ತಿಪ್ಪಾರೆಡ್ಡಿ ಉತ್ತಮ ನಾಯಕರು ಮತ್ತು ಕೋಟೆ ನಾಡಲ್ಲಿ ಕಮಲದ ಸದ್ದಿಗೆ ತಿಪ್ಪಾರೆಡ್ಡಿ ಕೊಡುಗೆ ಅಪಾರ ಎನ್ನುತ್ತಾರೆ.  ಮೂಲಗಳ ಪ್ರಕಾರ     ಯಡಿಯೂರಪ್ಪ ಸಹ ತಿಪ್ಪಾರೆಡ್ಡಿ ಅವರ ಅವರ ಬಳಿ ಮಾತನಾಡಿದ್ದು  ಮುಖ್ಯಮಂತ್ರಿ ಹಿರಿಯ ಶಾಸಕ ತಿಪ್ಪಾರೆಡ್ಡಿ ಅವರನ್ನು ಯಾವ ರೀತಿ  ತಣ್ಣಗಾಗಿಸುತ್ತಾರೆ ಎಂಬುದನ್ನು ಮಾತ್ರ ಜಿಲ್ಲೆಯ ಜನತೆ ಕಾದು ನೋಡಬೇಕಾಗಿದೆ.

[t4b-ticker]

You May Also Like

More From Author

+ There are no comments

Add yours