ಹಿರೇಗುಂಟನೂರು: ಗ್ರಾಮ ಪಂಚಾಯಿತಿ ಆರೋಗ್ಯ ಅಮೃತ ಅಭಿಯಾನ

 

ಚಿತ್ರದುರ್ಗ ಫೆ. 08 (ಕರ್ನಾಟಕ ವಾರ್ತೆ):
ಚಿತ್ರದುರ್ಗ ತಾಲ್ಲೂಕಿನ ಹಿರೇಗುಂಟನೂರು ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಬುಧವಾರ ಗ್ರಾಮ ಪಂಚಾಯತಿ ಆರೋಗ್ಯ ಅಮೃತ ಅಭಿಯಾನದಲ್ಲಿ ಗ್ರಾಮ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಶಾಲಾ ಶಿಕ್ಷಕರು ಗ್ರಾಮದ ಪಂಚಾಯ್ತಿ ಸದಸ್ಯರಿಗೆ ಸಮುದಾಯದ ಯೋಗಕ್ಷೇಮಕ್ಕಾಗಿ ಒಮ್ಮಖದ ಘೋಷಣೆಯೊಂದಿಗೆ ಸಾಮಥ್ರ್ಯ ಬಲವರ್ಧನೆ ಕಾರ್ಯಾಗಾರ ನಡೆಯಿತು.
ಚಿತ್ರದುರ್ಗ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಮಾತನಾಡಿ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆರೋಗ್ಯ ಮತ್ತು ಅಭಿವೃದ್ಧಿ ಕಾರ್ಯಕ್ರಮ ಯೋಜಿಸಲು ಇದು ಒಂದು ಉತ್ತಮ ಕಾರ್ಯಾಗಾರ ಎಂದರು.
ಸಹಾಯಕ ಮಹಿಳಾ ಮಕ್ಕಳ ಅಭಿವೃದ್ಧಿ ಅಧಿಕಾರಿ ದಾಸಪ್ಪ ಮತ್ತು ಮೇಲ್ವಿಚಾರಕರಾದ ಶಿವಲೀಲ ಬಾಲ್ಯ ವಿವಾಹ, ಅಪೌಷ್ಟಿಕತೆ ಮತ್ತು ಪೆÇೀಷಣ್ ಅಭಿಯಾನದ ಬಗ್ಗೆ ತರಬೇತಿ ನೀಡಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ವೈ.ಎನ್.ರೂಪ, ಬಿ.ವನಜಾಕ್ಷಿ, ನೀರು ನೈರ್ಮಲ್ಯ ಸಂಪನ್ಮೂಲಗಳ ವಿವಿಧ ಇಲಾಖೆಗಳ ದತ್ತಾಂಶ ಸಂಗ್ರಹಣೆ ಮತ್ತು ಒಗ್ಗೂಡಿಸುವಿಕೆ ಬಗ್ಗೆ ತರಬೇತಿ ನೀಡಿದರು.
ಕಾರ್ಯಾಗಾರದಲ್ಲಿ 12 ಹಳ್ಳಿಗಳ ಆಶಾ ಕಾರ್ಯ ಕರ್ತರು, ಅಂಗನವಾಡಿ ಕಾರ್ಯಕರ್ತರು ಶಾಲಾ ಶಿಕ್ಷಕರು, ಆರೋಗ್ಯ ಇಲಾಖೆ ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿಗಳು, ಸಮುದಾಯ ಆರೋಗ್ಯಾಧಿಕಾರಿಗಳು, ಆರೋಗ್ಯ ನಿರೀಕ್ಷಣಾಧಿಕಾರಿಗಳು, ಗ್ರಾಮ ಪಂಚಾಯಿತಿ ಸದಸ್ಯರು ಇದ್ದರು.

[t4b-ticker]

You May Also Like

More From Author

+ There are no comments

Add yours