ಡ್ರೋನ್ ಆಧಾರಿತ ಮರು ಭೂಮಾಪನಾ ಕಾರ್ಯಕ್ಕೆ ಚಾಲನೆ

 

ಚಿತ್ರದುರ್ಗ (ಕರ್ನಾಟಕ ವಾರ್ತೆ) ಫೆಬ್ರವರಿ 08 :
ಜಿಲ್ಲೆಯ ಎಲ್ಲಾ ಆರು ತಾಲ್ಲೂಕುಗಳಲ್ಲಿ ಏಕ ಕಾಲದಲ್ಲಿ ಡ್ರೋನ್ ಆಧಾರಿತ ಮರು ಭೂಮಾಪನಾ ಕಾರ್ಯಕ್ಕೆ ಬುಧವಾರ ಚಾಲನೆ ನೀಡಲಾಯಿತು.
ಹಿರಿಯೂರು ತಾಲ್ಲೂಕಿನ ಪಿಟ್ಲಾಲಿ ಗ್ರಾಮದಲ್ಲಿ ಡ್ರೋನ್ ಆಧಾರಿತ ಮರು ಭೂಮಾಪನಾ ಕಾರ್ಯಕ್ಕೆ ಭೂ ದಾಖಲೆಗಳ ಉಪನಿರ್ದೇಶಕ ಬಿ.ರಾಮಾಂಜನೇಯ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯ ಸರ್ಕಾರವು ತಂತ್ರಜ್ಞಾನ ಆಧಾರಿತ ಡ್ರೋನ್ ಮೂಲಕ ಮರು ಭೂಮಾಪನಾ ಕಾರ್ಯವನ್ನು ಆರಂಭಿಸಿದ್ದು, ಇದರಲ್ಲಿ ಗ್ರಾಮೀಣ ವಸತಿ ಆಸ್ತಿ, ಕೃಷಿ ಭೂಮಿಯ ಹಕ್ಕುದಾಖಲೆ ಮತ್ತು ನಗರ ಆಸ್ತಿ ದಾಖಲೆಗಳನ್ನು ಸಿದ್ದಪಡಿಸುವ ಯೋಜನೆಯಾಗಿದೆ ಎಂದು ಹೇಳಿದರು.
ಡ್ರೋನ್ ಆಧಾರಿತ ಭೂಮಾಪನಾ ಕಾರ್ಯದಿಂದ ಬಹುದಿನಗಳಿಂದ ಬಾಕಿ ಉಳಿದಿರುವ ಭೂವ್ಯಾಜ್ಯಗಳಿಗೆ ಪರಿಹಾರ ಸಿಗಲಿದೆ. ಅಲ್ಲದೇ ಈಗ ಮರು ಭೂಮಾಪನವನ್ನು ಆಧುನಿತ ತಂತ್ರಜ್ಞಾನ ಅಳವಡಿಸಿ ದಾಖಲೆಗಳನ್ನು ತಯಾರಿಸುವುದರಿಂದ ಭವಿಷ್ಯದಲ್ಲಿ ಭೂವ್ಯಾಜ್ಯಗಳು ಕಡಿಮೆಯಾಗುತ್ತದೆ ಮತ್ತು ಎಲ್ಲಾ ಭೂಮಾಲೀಕರಿಗೆ ಸರ್ಕಾರದ ಯೋಜನೆಗಳು ತುರ್ತಾಗಿ ತಲುಪಲಿವೆ ಎಂದರು.
ಚಿತ್ರದುರ್ಗ ತಾಲ್ಲೂಕಿನಲ್ಲಿ 188 ಗ್ರಾಮಗಳು, ಹಿರಿಯೂರು ತಾಲ್ಲೂಕಿನಲ್ಲಿ 157, ಹೊಸದುರ್ಗ ತಾಲ್ಲೂಕಿನಲ್ಲಿ 225, ಮೊಳಕಾಲ್ಮೂರು ತಾಲ್ಲೂಕಿನಲ್ಲಿ 91, ಚಳ್ಳಕೆರೆ ತಾಲ್ಲೂಕಿನಲ್ಲಿ 191 ಮತ್ತು ಹೊಳಲ್ಕೆರೆ ತಾಲ್ಲೂಕಿನಲ್ಲಿ 201 ಗ್ರಾಮಗಳು ಸೇರಿದಂತೆ ಒಟ್ಟು 1053 ಗ್ರಾಮಗಳಲ್ಲಿ ಡ್ರೋನ್ ಆಧಾರಿತ ಮರು ಭೂಮಾಪನಾ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ಈ ಯೋಜನೆ ತುಂಬಾ ಮಹತ್ತರವಾದ ಯೋಜನೆಯಾಗಿರುವುದರಿಂದ ಈ ಯೋಜನೆಗೆ ಎಲ್ಲಾ ಸಾರ್ವಜನಿಕರು ಸಹ ಸಹಕರಿಸಬೇಕು ಎಂದು ಭೂ ದಾಖಲೆಗಳ ಉಪನಿರ್ದೇಶಕ ಬಿ.ರಾಮಾಂಜನೇಯ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹಿರಿಯೂರು ತಾಲ್ಲೂಕು ಭೂದಾಖಲೆಗಳ ಸಹಾಯಕ ನಿರ್ದೇಶಕ ವಿಆರ್‍ಎಂ ಏಕನಾಥ್, ಅಧೀಕ್ಷಕ ಬಿ.ಎಸ್.ಬಾಬು, ಡ್ರೋನ್ ತಂಡ ಹಾಗೂ ಪಿಟ್ಲಾಲಿ ಗ್ರಾಮಸ್ಥರು ಇದ್ದರು.
[t4b-ticker]

You May Also Like

More From Author

+ There are no comments

Add yours