ಕಂದಾಯ ಇಲಾಖೆ ಅರ್ಜಿ ವಿಲೇವಾರಿಯಲ್ಲಿ ರಾಜ್ಯಕ್ಕೆ ಹಾಸನ ಜಿಲ್ಲೆ ನಂಬರ್ ಒನ್  

 

ಆಡಳಿತ ಯಂತ್ರಕ್ಕೆ ಹೊಸ ಆಯಾಮ ನೀಡಿದ ಡಿಸಿ ಸಿ.ಸತ್ಯಭಾಮ

 

ಹಾಸನ : ಸರ್ಕಾರಿ ಕೆಲಸ ದೇವರ ಕೆಲಸ, ಸಾವಿರಾರು ಬಡವರು ನಿತ್ಯ ಸರ್ಕಾರಿ ಇಲಾಖೆಗಳಿಗೆ ಅಲೆದಾಡುತ್ತಾರೆ. ಬಡವರ ಅಲೆದಾಟ ತಪ್ಪಿಸಲು ಅಧಿಕಾರಿಗಳು ಮನಸ್ಸು ಮಾಡಿದರೆ ಯಾವ ಕೆಲಸವು ಸಹ ನಿಲ್ಲುವುದಿಲ್ಲ. ಇಲಾಖೆಗಳಿಗೆ ಜನರು ಅಲೆದಾಡುವುದು ಬಹುತೇಕ ವಿರಳವಾಗುತ್ತದೆ.  ಸಮಸ್ಯೆಗಳನ್ನು ಹುಡುಕಿದರೆ ಪರಿಹಾರ ಸಿಗುತ್ತದೆ.ಅಂತಹ ಸಮಸ್ಯೆಗಳಿಗೆ ಇಡೀ ಇಲಾಖೆ ಎಲ್ಲಾ ಸಿಬ್ಬಂದಿ ವರ್ಗದವರ ಕಾರ್ಯ ಮುಖ್ಯವಾಗುತ್ತದೆ. ಎಲ್ಲಾ ಸಿಬ್ಬಂದಿಗಳನ್ನು ಜೊತೆಯಾಗಿ ಕೊಂಡೊಯ್ಯವ  ಕೆಲಸ ಸಾಮಾನ್ಯವಲ್ಲ , ಸಾಗರದಂತೆ ಇರುವ ಕಂದಾಯ ಇಲಾಖೆಯಲ್ಲಿನ  ಜನರ  ಸಮಸ್ಯೆಗಳನ್ನು ಮೆಟ್ಟಿನಿಂತು ಭೂಮಿ ಯೋಜನೆಯ ಅರ್ಜಿ ವಿಲೇವಾರಿ ಮಾಡುವ ಮೂಲಕ ರಾಜ್ಯಕ್ಕೆ  ಹಾಸನ ಜಿಲ್ಲೆ  ನಂಬರ್  ಓನ್ ಸ್ಥಾನ ಪಡೆಯುವಲ್ಲಿ  ಜಿಲ್ಲಾಧಿಕಾರಿ     (District Collector) ಸಿ.ಸತ್ಯಭಾಮ ಮತ್ತು ಅವರ  ತಂಡ ಕಾರ್ಯವೈಖರಿ ಕಾರಣ ಎಂದರೆ ತಪ್ಪಗಲಾರದು.  

 
 
ಎಲ್ಲಾ ಇಲಾಖೆಗಳಲ್ಲಿ ಸಮಸ್ಯೆಗಳು ಇರುತ್ತದೆ ಆದರೆ ಸಮಸ್ಯೆ ಬಗೆಹರಿಸುವ ಮನಸ್ಸು ಇಲಾಖೆ ಮುಖ್ಯಸ್ಥರಿಗೆ ಇರಬೇಕು. ಸಾರ್ವಜನಿಕರ ಸಮಸ್ಯೆಯನ್ನು ತನ್ನ ಸಮಸ್ಯೆ ಎಂಬಂತೆ ಕೆಲಸ ಮಾಡಿದರೆ ಎಲ್ಲಾ ಕೆಲಸಗಳು ಸರಾಗವಾಗಿ ಆಗುತ್ತವೆ ಎಂಬ ಇಚ್ಚೆಯನ್ನು ಹೊಂದಿರುವ ಸಿ. ಸತ್ಯಭಾಮ ಅವರು ಜುಲೈ 12 ಕ್ಕೆ 2023 ರಂದು  ಜಿಲ್ಲಾಧಿಕಾರಿಯಾಗಿ  ನೇಮಕಗೊಂಡರು. ಆ ಸಂದರ್ಭದಲ್ಲಿ  ಕಂದಾಯ ಇಲಾಖೆ ಭೂಮಿ ಯೋಜನೆತಡಿ   ಸಾವಿರಾರ ಅರ್ಜಿಗಳು  ವಿಲೇವಾರಿ ಆಗದೇ  ಹಾಸನ ಜಿಲ್ಲೆ 29 ನೇ ಸ್ಥಾನದಲ್ಲಿತ್ತು.  
 
ಕಂದಾಯ ಇಲಾಖೆಯ  ಭೂಮಿ ಯೋಜನೆಯಡಿ ಖಾತೆಗಳು, ರಿಜಿಸ್ಟರ್, ದಾನಪತ್ರ, ಕನವರ್ಷನ್ , ಇ- ಖಾತೆ ಸೇರಿ ಹತ್ತು ಹಲವು ಸಮಸ್ಯೆಗಳ ಒತ್ತು ಬರುವ ಅರ್ಜಿಗಳನ್ನು  ಸ್ವೀಕರಿಸಿ  ಅರ್ಜಿಗಳ ವಿಲೇವಾರಿಯ ಪ್ರಗತಿಯಲ್ಲಿ ರಾಜ್ಯದ ಇತರೆ ಜಿಲ್ಲೆಗಳನ್ನು ಹಿಂದಿಕ್ಕಿದೆ.

ಭೂಮಿ ಯೋಜನೆಯಡಿ  ಸಾರ್ವಜನಿಕರಿಂದ ಸ್ವೀಕರಿಸಿದ ಅರ್ಜಿಗಳನ್ನು ವಿಲೇವಾರಿ ಮಾಡುವುದರಲ್ಲಿ 29 ನೇ ಸ್ಥಾನದಲ್ಲಿದ್ದ ಹಾಸನ  ಜಿಲ್ಲೆಯನ್ನು ಪ್ರಥಮ ಸ್ಥಾನಕ್ಕೇರಿಸಲೇಬೇಕು ಎಂದು  ಜಿಲ್ಲಾಧಿಕಾರಿ  ಸಿ.ಸತ್ಯಾಭಾಮ ಕನಸಾಗಿತ್ತು. ಕನಸು ನನಸು ಮಾಡಲು ಸಾಕಷ್ಟು ಶ್ರಮವು ಬೇಕು. ಬರೀ ಕನಸು ಕಂಡರೆ ಸಾಲದು ಅದಕ್ಕೆ  ವಿಶೇಷವಾದ  ಕಾರ್ಯತಂತ್ರ  ರಚಿಸಿ ಸಭೆಗಳನ್ನು ಮಾಡಿ ಮೊದಲು ಸಮಸ್ಯೆ ಅರಿತುಕೊಂಡರು ನಂತರ ಮಾಡಿದ್ದು ಯಾರಿಗೆ ಯಾವ ಜವಬ್ದಾರಿ ವಹಿಸಿದರೇ ಯಶಸ್ವಿಯಾಗುತ್ತದೆ ಎಂದು ಮನವರಿಕೆ ಮಾಡಿಕೊಂಡು  ಸಿಬ್ಬಂದಿಗಳ ವಿಶ್ವಾಸ ಗಳಿಸುವ ಮೂಲಕ ಎಲ್ಲಾ ತಂತ್ರಗಳನ್ನು ಅನುಸರಿಸಿದ ಫಲಾವಾಗಿ  ಹಾಸನ  ಜಿಲ್ಲೆಗೆ ಪ್ರಥಮ ಸ್ಥಾನ ದೊರಕಿದೆ.

ಕಂದಾಯ ಇಲಾಖೆಗೆ ಬಿಸಿ ಮುಟ್ಟಿಸಿದ ಡಿಸಿ ಸತ್ಯಭಾಮ

ಜಿಲ್ಲಾಧಿಕಾರಿಗಳು  ಕಂದಾಯ ಇಲಾಖೆಯ ಕಾರ್ಯ ವೈಖರಿಯನ್ನು ಬದಲಾವಣೆ ಮಾಡಲೇಬೇಕು,ಜನರ ಅಲೆದಾಟ ತಪ್ಪಿಸಬೇಕು ಎಂಬ ಬಯಕೆಯಿಂದ ಕಂದಾಯ ಇಲಾಖೆಯ  ಕೆಲಸದ  ವೇಗವನ್ನು  ಹೆಚ್ಚಿಸಿದರು. ಪ್ರತಿ ದಿನ ಜಿಲ್ಲೆಯ ಪ್ರತಿ ತಾಲೂಕಿನ ಅರ್ಜಿ ಎಷ್ಟು ವಿಲೇವಾರಿ ಆಗಿದೆ ಎಂಬ ಮಾಹಿತಿಯನ್ನು ಡಿಸಿ ಪಡೆಯುತ್ತಿದ್ದರು‌. ತಾಲೂಕುಗಳ ತಹಸೀಲ್ದಾರ್‌ಗಳು, ಸರ್ವೆ ಇಲಾಖೆಯ ಮೇಲ್ವಿಚಾರಕರು, , ಭೂಮಿ, ನಾಡಕಚೇರಿಯ ಸಿಬ್ಬಂದಿಗಳ ಏನು ಕೆಲಸ ಮಾಡಿದ್ದಾರೆ ಎಂಬ ಮಾಹಿತಿ ಜೊತೆಗೆ ಚರ್ಚೆ ನಡೆಸಿ ಕೆಲಸ ಆಗದಿದ್ದರೆ ಚಾರ್ಜ್ ಮಾಡಿ ಮರುದಿನ ಕೆಲಸವನ್ನು ಮುಗಿಸುವ ಕೆಲಸ ಮಾಡಿದ್ದರಿಂದ ಯಶಸ್ಸು ಸಾಧ್ಯವಾಯಿತು ಎಂದರೆ ತಪ್ಪಾಗಲಾರದು.
ಹಾಸನ ಜಿಲ್ಲೆಯ ಜಿಲ್ಲಾಡಳಿತ ಭವನ ಮತ್ತು ಜಿಲ್ಲಾಧಿಕಾರಿ ಕಚೇರಿ

ಬಾಕ್ಸ್ : 

ಅರ್ಜಿ ವಿಲೇವಾರಿಗೆ ತೊಡಕಿದ್ದರೆ ಮಾಹಿತಿ ಪಡೆಯುತ್ತಿದ್ದ ಡಿಸಿ

ಪ್ರತಿ ಅರ್ಜಿಯನ್ನು ಪರಿಶೀಲನೆ ಮಾಡಬೇಕು. ಎಷ್ಟು ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಯಾವ ವಿಷಯಕ್ಕೆ ಸಂಬಂಧಿಸಿದ ಅರ್ಜಿಗಳು, ವಿಲೇವಾರಿ ಮಾಡಲು ಇರುವ ತಾಂತ್ರಿಕ ತೊಂದರೆಗಳು ಏನು, ಮತ್ತಿತರ ಅಂಶಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದ ಜಿಲ್ಲಾಧಿಕಾರಿಗಳು, ವಿಲೇವಾರಿಗೆ ಕಾಲ ನಿಗದಿ ಮಾಡಿ ಕೆಳಹಂತದ ಅಧಿಕಾರಿಗಳಿಗೆ ಅರ್ಜಿ ವಿಲೇವಾರಿಗೆ ಮಾರ್ಗದರ್ಶನ ನೀಡುತ್ತಿದ್ದರು.
ಜಿಲ್ಲಾಧಿಕಾರಿ ಸಿ‌.ಸತ್ಯಾಭಾಮ ಅವರ ಕಾರ್ಯವೈಖರಿ ಮತ್ತು ಬದ್ಧತೆ ಮತ್ತು ಕಂದಾಯ ಇಲಾಖೆಯ ಎಲ್ಲಾ  ಅಧಿಕಾರಿಗಳ ಮತ್ತು ಸಿಬ್ಬಂದ ವರ್ಗದ  ಒಗ್ಗಟ್ಟಿನ ಮಂತ್ರ ಹಾಗೂ   ಆಡಳಿತ ಯಂತ್ರಕ್ಕೆ ನೀಡಿದ ಚುರುಕುತನದಿಂದಾಗಿ ಕಂದಾಯ ಇಲಾಖೆಯ  ಅರ್ಜಿಗಳ ವಿಲೇವಾರಿಯ ಪ್ರಗತಿಯಲ್ಲಿ  ಹಾಸನ  ಜಿಲ್ಲೆಯನ್ನು ಪ್ರಥಮ ಸ್ಥಾನಕ್ಕೆ ತಂದು ನಿಲ್ಲಿಸಿದ್ದಾರೆ.

ಹೈಲೆಟ್ಸ್ 

* ಮೊದಲ ಬಾರಿ ರಾಜ್ಯಕ್ಕೆ  ಹಾಸನ ಜಿಲ್ಲೆ ಕಂದಾಯ ಇಲಾಖೆ ಅರ್ಜಿ ವಿಲೇವಾರಿಯಲ್ಲಿ ಪ್ರಥಮ ಸ್ಥಾನ

* ಜುಲೈ 2023 ರಂದು  29 ನೇ ಸ್ಥಾನದಲ್ಲಿದ್ದ ಹಾಸನ 

* ನೂತನ ಡಿಸಿ ಸತ್ಯಭಾಮ ಅವರ ಕಾರ್ಯತಂತ್ರದ ಫಲ ಪ್ರಥಮ ಸ್ಥಾನ

* ಡಿಸಿ ಕೋರ್ಟ್ ನಲ್ಲಿ ಕಳೆದ ತಿಂಗಳು 383 ಪ್ರಕರಣಗಳನ್ನು ಇತ್ಯರ್ಥ

* ನಿಗದಿತ ಸಮಯದಲ್ಲಿ ಅರ್ಜಿ ವಿಲೇವಾರಿ

* ಜನ ಅಲೆದಾಟ ತಪ್ಪಿಸಲು ಸಮಸ್ಯೆಗಳ ಪರಿಹಾರಕ್ಕೆ ಒತ್ತು. 

* ನೇರವಾಗಿ ಜನರ ಸಮಸ್ಯೆ ಆಲಿಸಿದ ಡಿಸಿ 

* ನಿತ್ಯ ಪ್ರತಿ ತಾಲೂಕಿನಿಂದ ಅರ್ಜಿ ವಿಲೇವಾರಿ ಮಾಹಿತಿ ಜೊತೆಗೆ ಸೂಕ್ತ ಮಾರ್ಗದರ್ಶನ

ಆಡಳಿತ ಯಂತ್ಹೊಸ ಕಾರ್ಯತಂತ್ರದ ಮೂಲಕ ಮತ್ತಷ್ಟು ವೇಗ: ಡಿಸಿ ಸಿ. ಸತ್ಯಭಾಮ  

ನಮಗೆ ದೇವರು ಬಡವರ ಸೇವೆ ಮಾಡಲು ಅತ್ಯಮೂಲ್ಯ  ಅವಕಾಶ ನೀಡಿದ್ದು ಅದನ್ನು ಸದುಪಯೋಗ ಮಾಡಿಕೊಂಡು ಜನರ ಕೆಲಸ ಕಾರ್ಯಗಳು ಮಾಡಬೇಕು ಎಂಬ ಬಯಕೆ ನನ್ನದು.   ಪ್ರತಿ ಸರ್ಕಾರಿ ಇಲಾಖೆಯಲ್ಲಿ ಸಮಸ್ಯೆಗಳು ಸಾಮಾನ್ಯ  ಆದರೆ ಸಮಸ್ಯೆಗಳನ್ನು  ಆಲಿಸಿ ಪರಿಹಾರ ಒದಗಿಸುವ ಕೆಲಸ  ನಾವು ಮಾಡಬೇಕು.ಆಗ ಮಾತ್ರ ನಮ್ಮ ಕೆಲಸಕ್ಕೆ ನ್ಯಾಯ ಒದಗಿಸಿದಂತೆ ಆಗುತ್ತದೆ.ಕಂದಾಯ ಇಲಾಖೆಯಲ್ಲಿ  ಪ್ರತಿ ನಿತ್ಯವು ಸಮಸ್ಯೆಗಳನ್ನು ಒತ್ತು ಜರನು ಬರುತ್ತಾರೆ. ಅದನ್ನು ಸಮರ್ಥವಾಗಿ ನಿರ್ವಹಿಸಿ ಪರಿಹಾರ ಒದಗಿಸಬೇಕು.ಜನರು ತಮ್ಮ ದುಡಿಮೆ ಬಿಟ್ಟು ಕಚೇರಿಗಳಿಗೆ ಬರುತ್ತಾರೆ. ಆ ಸಮಸ್ಯೆಗಳಿಗೆ  ಪರಿಹಾರ ಕೊಟ್ಟರೆ ಮತ್ತೊಮ್ಮೆ ಏಕೆ ಕಚೇರಿಗಳಿಗೆ ಬರುತ್ತಾರೆ ಅಲ್ವ. ನಮ್ಮ ಹಾಸನ ಜಿಲ್ಲೆಯ  ಕಂದಾಯ ಇಲಾಖೆಯಲ್ಲಿ  ಸಾವಿರಾರು ಅರ್ಜಿಗಳಿಗೆ ಪರಿಹಾರ ಒದಗಿಸಿದ್ದೇನೆ.ನಮ್ಮ ಎಲ್ಲಾ ಸಹೋದ್ಯೋಗಿಗಳ ಕ್ರಿಯಾಶೀಲ ಕಾರ್ಯ ವೈಖರಿಯಿಂದ ನಮ್ಮ ಜಿಲ್ಲೆ ಕಂದಾಯ ಇಲಾಖೆ ಅರ್ಜಿ ವಿಲೇವಾರಿಯಲ್ಲಿ  ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವುದು ನಮಗೆ ಸಂತೋಷ ತಂದಿದೆ. ಮುಂದಿನ ದಿನದಲ್ಲಿ ಪ್ರಥಮ ಸ್ಥಾನ ಉಳಿಸಿಕೊಂಡು ಅರ್ಜಿ ವಿಲೇವಾರಿ ಮಾಡಿಕೊಂಡು ಇನ್ನೂ ಹೆಚ್ಚಿನ ಕೆಲಸ ಮಾಡಬೇಕು ಎಂದು ಹೊಸ  ಯೋಜನೆ ರೂಪಿಸಲಾಗಿದೆ ಎನ್ನುತ್ತಾರೆ ಜಿಲ್ಲಾಧಿಕಾರಿ ಸಿ.ಸತ್ಯಭಾಮ..

[t4b-ticker]

You May Also Like

More From Author

+ There are no comments

Add yours