ಉತ್ತಮ ಶಿಕ್ಷಣದಿಂದ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಾಧ್ಯ:ಟಿ.ರಘುಮೂರ್ತಿ

 

ಚಳ್ಳಕೆರೆ : ಇತ್ತೀಚಿನ ವರ್ಷಗಳಲ್ಲಿ ವಿದ್ಯಾಭ್ಯಾಸಕ್ಕಾಗಿ ಗ್ರಾಮೀಣ ಭಾಗದಿಂದ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಕಾಲೇಜಿಗೆ ಸೇರ್ಪಡೆಯಾಗುತ್ತಿದ್ದು, ಗುಣಮಟ್ಟದ ಸೇರ್ಫಡೆಯಾಗುವ ಮೂಲಕ ವಿದ್ಯಾರ್ಥಿಗಳ ಬದುಕನ್ನು ಹಸನುಗೊಳಿಸುವ ಕಾರ್ಯವನ್ನು ಉಪನ್ಯಾಸಕ ವರ್ಗ ಮಾಡಬೇಕಿದೆ ಎಂದು ಶಾಸಕ ಟಿ.ರಘುಮೂರ್ತಿ ಮನವಿ ಮಾಡಿದರು.

ಅವರು, ಶನಿವಾರ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಾಲೇಜು ಆಡಳಿತ ಮಂಡಳಿ ಹಮ್ಮಿಕೊಂಡಿದ್ದ ಕ್ರೀಡಾ, ಸಾಂಸ್ಕೃತಿಕ, ಎನ್‌ಎಸ್‌ಎಸ್, ರೋರ‍್ಸ್ ಹಾಗೂ ರೇಂರ‍್ಸ್ ಘಟಕಗಳ ಉದ್ಘಾಟನಾ ಸಮಾರಂಭವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಈ ಕಾಲೇಜಿಗೆ ಸರ್ಕಾರದ ಅನುದಾನದ ಮೂಲಕ ಸುಮಾರು ನಾಲ್ಕು ಕೋಟಿಗೂ ಹೆಚ್ಚು ಹಣ ನೀಡಿದ್ದು, ೧೦ಕ್ಕೂ ಹೆಚ್ಚು ಕೊಠಡಿಗಳು ನಿರ್ಮಾಣವಾಗಿವೆ. ಕಾಲೇಜು ಆಡಳಿತ ಮಂಡಳಿ ಆಡಿಟೋರಿಯಂ, ಆರ್‌ಒ ಪ್ಲಾಂಟ್ ಹಾಗೂ ಇನ್ನಿತರ ಬೇಡಿಕೆಯನ್ನು ಸಲ್ಲಿಸಿದ್ದಾರೆ. ನನ್ನ ಅನುದಾನದಲ್ಲಿ ಹಂತ, ಹಂತವಾಗಿ ಇವುಗಳನ್ನು ಈಡೇರಿಸಲು ಪ್ರಯತ್ನಿಸುತ್ತೇನೆ. ಪ್ರಸ್ತುತ ೨೦೨೩ರಲ್ಲಿ ಒಟ್ಟಾರೆ ಕಾಲೇಜು ಫಲಿತಾಂಶ ಶೇ.೬೩ರಾಗಿದ್ದು, ಕಳೆದ ವರ್ಷಕ್ಕಿಂತ ಹೆಚ್ಚಾಗಿದೆ. ಆದರೆ, ಈ ಫಲಿತಾಂಶ ಶೇ.೧೦೦ಕ್ಕೆ ಹೆಚ್ಚಿಸುವಲ್ಲಿ ಎಲ್ಲರೂ ಗಮನ ನೀಡಬೇಕು. ವಿದ್ಯಾರ್ಥಿಗಳು ಸಹ ಶಿಕ್ಷಣದಿಂದ ಮಾತ್ರ ತಮ್ಮ ಬದುಕು ಬಂಗಾರವಾಗಲಿದೆ ಎಂಬ ಸತ್ಯವನ್ನು ಅರಿಯಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ಪ್ರಾಂಶುಪಾಲ ಎಂ.ರವೀಶ್ ಮಾತನಾಡಿ, ಪ್ರಸ್ತುತ ವರ್ಷವೂ ಸಹ ಕಾಲೇಜಿನ ದಾಖಲಾತಿ ಹೆಚ್ಚಿದೆ. ಎಲ್ಲಾ ವಿಭಾಗಗಳಲ್ಲೂ ಗಣನೀಯವಾಗಿ ವಿದ್ಯಾರ್ಥಿಗಳ ಸಂಖ್ಯೆ ಏರಿಕೆಯಾಗಿದೆ. ಎಲ್ಲರ ಪರಿಶ್ರಮದಿಂದ ಈ ಬಾರಿಯ ಫಲಿತಾಂಶವನ್ನು ಉತ್ತಮ ಪಡಿಸಲಾಗಿದೆ. ವಿಶೇಷವಾಗಿ ಕಲಾ ವಿಭಾಗದಲ್ಲಿ ಶೇ.೭೬, ವಿಜ್ಞಾನದಲ್ಲಿ ಶೇ.೬೪, ವಾಣಿಜ್ಯದಲ್ಲಿ ೫೧ರಷ್ಟು ಫಲಿತಾಂಶ ಪಡೆಯುವ ಮೂಲಕ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ಪ್ರಸ್ತುತ ೨೦೨೪ರ ಫಲಿತಾಂಶ ಉತ್ತಮ ಪಡಿಸುವ ನಿಟ್ಟಿನಲ್ಲಿ ಕಾಲೇಜಿನ ಎಲ್ಲಾ ವಿಭಾಗದ ಉಪನ್ಯಾಸಕರು ಈಗಾಗಲೇ ಚರ್ಚೆ ನಡೆಸಿ ಕಾಯೋನ್ಮುಖರಾಗಿದ್ದಾರೆ. ಕಾಲೇಜಿನ ಫಲಿತಾಂಶ ಶೇ.೧೦೦ಕ್ಕೆ ಹೆಚ್ಚಿಸಬೇಕೆಂಬ ಸಂಕಲ್ಪ ನಮ್ಮದಾಗಿದೆ. ವಿದ್ಯಾರ್ಥಿಗಳು ಸಹ ಈ ನಿಟ್ಟಿನಲ್ಲಿ ಉಪನ್ಯಾಸಕರೊಂದಿಗೆ ಹೆಜ್ಜೆ ಹಾಕಬೇಕು. ಯಾವುದೇ ಹಂತದಲ್ಲೂ ಕಲಿಕೆ ವಿಚಾರದಲ್ಲಿ ನಿರ್ಲಕ್ಷೆö್ಯ ಬೇಡ ಎಂದರು.
ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯರಾದ ಸುಮಕ್ಕ, ಎಂ.ಜೆ.ರಾಘವೇಂದ್ರ, ದತ್ತಿನಿಧಿ ದಾನಿ ರುಕ್ಮಿಣಿ, ಕಾಲೇಜು ಅಭಿವೃದ್ದಿ ಸಮಿತಿ ಸದಸ್ಯರಾದ ಕೋಣಪ್ಪ, ಜ್ಯೋತಿಗುರುಸ್ವಾಮಿ, ರುದ್ರಮುನಿ, ಮೂಡಲಗಿರಿಯಪ್ಪ, ಗದ್ದಿಗೆ ತಿಪ್ಪೇಸ್ವಾಮಿ, ಟಿ.ಗಿರಿಯಪ್ಪ, ಉಪನ್ಯಾಸಕರಾದ ನಾಗರಾಜ ಬೆಳಗಟ್ಟ, ಶಾಂತಕುಮಾರಿ, ಪುಪ್ಪಲತಾ, ಲಲಿತಮ್ಮ, ಜಬಿವುಲ್ಲಾ, ಚಂದ್ರಶೇಖರ್, ಹಬೀಬುಲ್ಲಾ, ನಿವೃತ್ತ ಪ್ರಾಂಶುಪಾಲ ಎಸ್.ಲಕ್ಷ್ಮಣ ಮುಂತಾದವರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಮತ್ತು ಎನ್‌ಎಸ್‌ಎಸ್‌ನಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

[t4b-ticker]

You May Also Like

More From Author

+ There are no comments

Add yours