ಸೇವಾ ಮನೋಭಾವ ಬೆಳೆಸಿಕೊಂಡು ರೋಗಿಗಳ ಸೇವೆ ಮಾಡಿದರೆ ದೇವರು ಮೆಚ್ಚುತ್ತಾನೆ:ಕೆ.ಸಿ.ವೀರೇಂದ್ರ

 

ಚಿತ್ರದುರ್ಗ : ಸೇವಾ ಮನೋಭಾವನೆಯಿಂದ ರೋಗಿಗಳ ಹಾರೈಕೆ ಮಾಡಿದಾಗ ಮನಸ್ಸಿಗೆ ಸಮಾಧಾನ ಸಿಗುವುದರ ಜೊತೆಗೆ ದೇವರು ಮೆಚ್ಚುತ್ತಾನೆಂದು ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಹೇಳಿದರು.

ಚಳ್ಳಕೆರೆ ಟೋಲ್‍ಗೇಟ್‍ನಲ್ಲಿರುವ ದೇವರಾಜ ಅರಸ್ ಶಿಕ್ಷಣ ಸಂಸ್ಥೆಯಲ್ಲಿ ಸೋಮವಾರ ನಡೆದ ಎಸ್.ಎಲ್.ವಿ. ಸ್ಕೂಲ್ ಅಂಡ್ ನರ್ಸಿಂಗ್ ಕಾಲೇಜಿನ ಇಪ್ಪತ್ತೈದನೆ ವರ್ಷದ ಬೆಳ್ಳಿ ಮಹೋತ್ಸವ ಉದ್ಘಾಟಿಸಿ ಮಾತನಾಡಿದರು.
ಕಳೆದ 25 ವರ್ಷಗಳಿಂದ ದೇವರಾಜ್ ಅರಸ್ ಶಿಕ್ಷಣ ಸಂಸ್ಥೆ ಅನೇಕ ಏಳುಬೀಳುಗಳನ್ನು ಕಂಡಿದೆ. ಈಗ ಅದರ ಸಾರಥಿಯಾಗಿ ಯುವ ಉತ್ಸಾಹಿ ಸಂಸ್ಥೆಯ ಸಿ.ಇ.ಓ. ರಘುಚಂದನ್ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ರೋಗಿಗಳ ಜೊತೆಗೆ ವೈದ್ಯರಿಗಿಂತಲೂ ನರ್ಸ್‍ಗಳು ಹೆಚ್ಚಿನ ಸಮಯ ಕಳೆಯುತ್ತಾರೆ. ನರ್ಸಿಂಗ್ ವೃತ್ತ ಅತ್ಯಂತ ಪವಿತ್ರವಾದುದು. ಪ್ರಾಣ ಉಳಿಸುವುದರ ಜೊತೆ ಆತ್ಮವಿಶ್ವಾಸ ತುಂಬುವ ಅಮೂಲ್ಯವಾದ ಸೇವೆ. ಇಲ್ಲಿ ನರ್ಸಿಂಗ್ ಶಿಕ್ಷಣ ಪಡೆದವರು ದೇಶ-ವಿದೇಶಗಳಲ್ಲಿ ಕೆಲಸ ಮಾಡುತ್ತಿರುವುದು ಸಂತೋಷದ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಓದಿ: ಸಚಿವ ಸುಧಾಕರ್ ವಿರುದ್ದ FIR ದಾಖಲು ಏಕೆ ಗೊತ್ತೆ.

ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಹಾಗೂ ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಮಾತನಾಡಿ ಇಪ್ಪತ್ತೈದು ವರ್ಷಗಳಿಂದ ಎಸ್.ಎಲ್.ವಿ. ನರ್ಸಿಂಗ್ ಕಾಲೇಜಿನಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ತರಬೇತಿ ಪಡೆದು ಸ್ವಾವಲಂಭಿಯಾಗಿ ಬದುಕು ಕಟ್ಟಿಕೊಂಡಿದ್ದಾರೆ. ಪ್ರಪಂಚದ ಯಾವುದೇ ಮೂಲೆಗೆ ಹೋದರು ನಮ್ಮ ಸಂಸ್ಥೆಯಲ್ಲಿ ನರ್ಸಿಂಗ್ ಶಿಕ್ಷಣ ಪಡೆದವರು ಸಿಗುತ್ತಾರೆ. ವೈದ್ಯರಿಗಿಂತ ನಿಮ್ಮ ಸೇವೆ ಅಮೂಲ್ಯವಾದುದು. ಅದಕ್ಕಾಗಿ ನಿಮ್ಮ ಮೇಲೆ ತೋರುವ ಪ್ರೀತಿ, ವಿಶ್ವಾಸ ವೈದ್ಯರ ಮೇಲೆ ಇರುವುದಿಲ್ಲ. ಆರೋಗ್ಯ ಪೂರ್ಣ ಸಮಾಜಕ್ಕಾಗಿ ನಿಮ್ಮ ಪಾತ್ರ ದೊಡ್ಡದು. ಬೇರೆ ಯಾರಿಗೂ ಇಂತಹ ಅವಕಾಶ ಸಿಗುವುದಿಲ್ಲ. ಲಾಭದ ನಿರೀಕ್ಷೆಯಿಂದ ಸಂಸ್ಥೆ ಕಟ್ಟಿಲ್ಲ. ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆದು ಹೊರ ಹೋಗಿದ್ದಾರೆ. ಗುಣಮಟ್ಟದ ಸೇವೆ ನೀಡಿ ಜೀವನ ಸಾರ್ಥಕಪಡಿಸಿಕೊಳ್ಳಿ ಎಂದು ನರ್ಸಿಂಗ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಓದಿ:ksrtc ಬಸ್ ಲಾರಿ ಮಧ್ಯೆ ಭೀಕರ ಅಪಘಾತ ನಾಲ್ವರು ಸಾವು,

ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಸಿ.ಇ.ಓ. ಎಂ.ಸಿ.ರಘುಚಂದನ್ ಮಾತನಾಡುತ್ತ ಒಂದು ಕಾಲದಲ್ಲಿ ಚಿತ್ರದುರ್ಗದಲ್ಲಿ ದೊಡ್ಡ ಸಂಸ್ಥೆ ಯಾವುದು ಎಂದರೆ ಎಸ್.ಜೆ.ಎಂ.ವಿದ್ಯಾಪೀಠ ಎನ್ನುತ್ತಿದ್ದರು. ಈಗ ದೇವರಾಜ್ ಅರಸ್ ಶಿಕ್ಷಣ ಸಂಸ್ಥೆ ಕೂಡ ಎಸ್.ಜೆ.ಎಂ.ವಿದ್ಯಾಪೀಠದಂತೆ ದೊಡ್ಡ ಸಂಸ್ಥೆಯಾಗಿ ಬೆಳೆದಿರುವುದರ ಹಿಂದೆ ಅನೇಕರ ಪರಿಶ್ರಮ ನಿದ್ದೆಯಿಲ್ಲದ ಕನಸುಗಳಿವೆ. ಶಿಕ್ಷಕ ವೃಂದ ಹಾಗೂ ಸಿಬ್ಬಂದಿಗಳೆ ಸಂಸ್ಥೆ ಈ ಮಟ್ಟಕ್ಕೆ ಬೆಳೆಯಲು ಕಾರಣಕರ್ತರು ಎಂದು ಕೃತಜ್ಞತೆಗಳನ್ನು ಸಲ್ಲಿಸಿದರು.

ಓದಿ: ಕಾರಿನ ವೇಗಕ್ಕೆ ಸಿಲುಕಿ 12 ಕುರಿಗಳು ಸಾವು

ನಮ್ಮ ಸಂಸ್ಥೆಯಲ್ಲಿ ಐದು ಸಾವಿರ ಮಕ್ಕಳಿದ್ದಾರೆಂದರೆ ಅಡಿಪಾಯ, ನಂಬಿಕೆ, ವಿಶ್ವಾಸ, ಅತ್ಯುನ್ನತ ಶ್ರೇಣಿಯ ಫಲಿತಾಂಶವೇ ಮೂಲ ಕಾರಣ. ಪ್ರಸನ್ನ, ಕರಿಯಣ್ಣ, ಅನಂತರಾಜು, ಮಹಾತೇಂಶ ಇವರುಗಳ ಪರಿಶ್ರಮವನ್ನು ಸ್ಮರಿಸಿದ ಎಂ.ಸಿ.ರಘುಚಂದನ್ ಅದೆಷ್ಟು ಬಾರಿ ಕಡತಗಳನ್ನು ಹಿಡಿದು ಬೆಂಗಳೂರು, ದೆಹಲಿಗೆ ಓಡಾಡಿದ್ದಾರೆಂದರೆ ಹೇಳತೀರದು ಎಂದು ನೆನಪಿಸಿಕೊಂಡರು.
ನಮ್ಮ ಸಂಸ್ಥೆಯಲ್ಲಿ ನರ್ಸಿಂಗ್ ಶಿಕ್ಷಣ ಪಡೆದವರು ಲಂಡನ್, ಯು.ಎಸ್.ಎ. ಆಸ್ಟ್ರೇಲಿಯಾದಲ್ಲಿದ್ದಾರೆ. ನರ್ಸಿಂಗ್ ಕೆಲಸ ಎನ್ನುವುದು ಸೇವಾ ಮನೋಭಾವ, ಪುಣ್ಯ ಸಾರ್ಥಕವಾದುದು. ಕೇರ್ ಮತ್ತು ಸಿಂಪತಿಯಿಂದ ರೋಗಿಯನ್ನು ಆರೈಕೆ ಮಾಡಿದರೆ ಅರ್ಧ ಕಾಯಿಲೆ ವಾಸಿಯಾಗುತ್ತದೆ. ಇಪ್ಪತ್ತೈದು ವರ್ಷಗಳಿಂದ ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಏಳಿಗೆಗೆ ದುಡಿದ ಕಾಣದ ಕೈಗಳಿಗೆ ಋಣಿಯಾಗಿರುತ್ತೇನೆ. ಬಡವರು, ನಿರ್ಗತಿಕರಿಗೆ ಸುಲಭವಾಗಿ ಶಿಕ್ಷಣ ಸಿಗಲಿ ಎನ್ನುವ ಕಳಕಳಿಯಿಂದ ಸಂಸ್ಥೆ ಕಟ್ಟಲಾಗಿದೆ ಎಂದರು.
ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಶ್ರೀಮತಿ ಹೆಚ್.ಚಂದ್ರಕಲಾ, ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಯಶಸ್ವಿನಿ ಕಿರಣ್, ಪ್ರಾಚಾರ್ಯರಾದ ಡಾ.ಜಿ.ಇ.ಭೈರಸಿದ್ದಪ್ಪ ವೇದಿಕೆಯಲ್ಲಿದ್ದರು.
ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗದವರು, ನರ್ಸಿಂಗ್ ವಿದ್ಯಾರ್ಥಿಗಳು ಬೆಳ್ಳಿ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.

[t4b-ticker]

You May Also Like

More From Author

+ There are no comments

Add yours