ksrtc ಬಸ್ ಲಾರಿ ಮಧ್ಯೆ ಭೀಕರ ಅಪಘಾತ ನಾಲ್ವರು ಸಾವು,

 

ಹಿರಿಯೂರು:(Hiriyuru) ಚಿತ್ರದುರ್ಗದ ಚಳ್ಳಕೆರೆ ತಾಲೂಕು ಕೇಂದ್ರದಿಂದ ಹಿರಿಯೂರಿಗೆ ಸಾಗುವ, ಬೀದರ್ – ಶ್ರೀರಂಗಪಟ್ಟಣ ರಸ್ತೆಯಲ್ಲಿ (NH 14ರಲ್ಲಿ) Ksrtc ಬಸ್  ಹಾಗೂ ಲಾರಿಯೊಂದರ ನಡುವೆ ಭೀಕರ ಅಪಘಾತ ಸಂಭವಿಸಿದೆ. ಹಿರಿಯೂರು ತಾಲೂಕಿಗೆ ಸೇರಿದ ಗೊಲ್ಲಹಳ್ಳಿ ಬಳಿ ಈ ಅಪಘಾತ ಸಂಭವಿಸಿದ್ದು ನಾಲ್ವರು ಮೃತಪಟ್ಟಿದ್ದಾರೆ.(Four members death)

ಓದಿ: ಕಾರಿನ ವೇಗಕ್ಕೆ ಸಿಲುಕಿ 12 ಕುರಿಗಳು ಸಾವು

 

ಚಳ್ಳಕೆರೆಯಿಂದ ಹಿರಿಯೂರು ಕಡೆಗೆ ಬರುತಿದ್ದ ksrtc  ಬಸ್ ಗೆ ಹಿಂದೆ ಬಂದ ಲಾರಿ ಓವರ್ ಟೇಕ್ ಮಾಡುವಾಗ ಈ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಬಸ್ ನ ಮುಂದಿನ ಸೀಟುಗಳಲ್ಲಿ ಕುಳಿತಿದ್ದ ನಾಲ್ವರು ಮೃತಪಟ್ಟಿದ್ದಾರೆ. ಮೃತರಲ್ಲಿ ಇಬ್ಬರ ಗುರುತು ಪತ್ತೆಯಾಗಿದೆ. ಅವರನ್ನು ಬೆಂಗಳೂರು ಮೂಲದ ಪಾರ್ವತಮ್ಮ(45) , ಮರಾಯಚೂರಿನ ಮಸ್ಕಿ ಮೂಲದ ರಮೇಶ್(40)‌ ಎಂದು ಗುರುತಿಸಲಾಗಿದೆ. ಬಸ್ ನಲ್ಲಿದ್ದ ಆರಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು ಅವರೆಲ್ಲರನ್ನೂ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

ಓದಿ: ಕಾಂಗ್ರೆಸ್ ಸೇರುತ್ತೇನೆ ಎಂದ ಬಿಜೆಪಿ ಮಾಜಿ ಶಾಸಕ , ಬಿಜೆಪಿ ತೊರೆಯಲು ಸಿದ್ದವಾದ ಮಾಜಿ ಸಿಎಂ,

ಬೀದರ್ – ಶ್ರೀರಂಗಪಟ್ಟಣ ನಡುವಿನ ಹೆದ್ದಾರಿಯ ಅಗಲೀಕರಣ ಒಂದೆರಡು ವರ್ಷಗಳಿಂದ ನಡೆಯುತ್ತಿದೆ. ಚಳ್ಳಕೆರೆಯಿಂದ ಬಳ್ಳಾರಿಯ ಕಡೆಗೆ ಹೋಗುವ ಹೆದ್ದಾರಿಯ ಅಗಲೀಕರಣ ಪೂರ್ತಿಗೊಂಡಿದೆ. ಆದರೆ, ಚಳ್ಳಕೆರೆಯಿಂದ ಹಿರಿಯೂರು ಕಡೆಗೆ ಹೋಗುವ ಇದೇ ಹೆದ್ದಾರಿಯ ಅಗಲೀಕರಣ ಮಂದಗತಿಯಲ್ಲಿ ಸಾಗುತ್ತಿದೆ. ಅಲ್ಲಲ್ಲಿ, ಡಬಲ್ ರೋಡ್ ಆಗಿದ್ದು, ಇನ್ನೂ ಕೆಲವು ಕಡೆಗೆ ಸಿಂಗಲ್ ರಸ್ತೆಯೇ ಇದೆ. ಅಲ್ಲಿನ್ನೂ ಕಾಮಗಾರಿ ಮುಂದುವರಿದಿದೆ.

ಹೀಗೆ, ಸಿಂಗಲ್ ರಸ್ತೆಯಿರುವ ಕಡೆಗೆ ದ್ವಿಮುಖ ಸಂಚಾರ ಇರುತ್ತದೆ. ಚಳ್ಳಕೆರೆಯಿಂದ ಹಿರಿಯೂರು ಕಡೆಗೆ ಹೋಗುವ ಮಾರ್ಗದಲ್ಲಿ ಗೊಲ್ಲಹಳ್ಳಿ ಬಳಿ ಸಿಂಗಲ್ ರಸ್ತೆಯಿದೆ. ಅದೇ ರಸ್ತೆಯ ಮೂಲಕ ತೆರಳುತ್ತಿದ್ದ ಕೆಎಸ್ ಆರ್ ಟಿಸಿ ಬಸ್ಸು, ಲಾರಿ ನಡುವೆ ಈ ಅಪಘಾತ ಸಂಭವಿಸಿದೆ. ಢಿಕ್ಕಿಯ ರಭಸಕ್ಕೆ ಬಸ್ಸಿನ ಎಡಬದಿಯೂ ಸಂಪೂರ್ಣ ನಜ್ಜುಗೊಜ್ಜಾಗಿದ್ದು, ಅಲ್ಲಿ ಕುಳಿತಿದ್ದ ಪ್ರಯಾಣಿಕರು ಸಾವಿಗೀಡಾಗಿದ್ದಾರೆ.

ಅಪಘಾತವಾಗಿ 1 ಕಿಲೋಮೀಟರ್ ಸಾಗಿಬಂದ ಬಸ್ಸು!

ಅಪಘಾತದಲ್ಲಿ ಕೆಲವಾರು ವಿಚಿತ್ರಗಳು ಸಂಭವಿಸಿವೆ. ಲಾರಿಯವನು ಓವರ್ ಟೇಕ್ ಮಾಡುವಾಗ ಬಸ್ಸಿನ ಎಡಭಾಗಕ್ಕೆ ಗುದ್ದಿಕೊಂಡು ಹೋಗಿದ್ದಾನೆಂದು ಹೇಳಲಾಗಿದೆ. ಆದರೆ, ಮತ್ತೊಂದು ಅಂದಾಜಿನ ಪ್ರಕಾರ, ಬಸ್ಸಿನ ಚಾಲಕನೇ ಲಾರಿಯನ್ನು ಗುದ್ದಿಕೊಂಡು ಹೋಗಿರಬಹುದು ಎನ್ನಲಾಗಿದೆ. ಏಕೆಂದರೆ, ಅಪಘಾತ ನಡೆದ ತಕ್ಷಣವೇ ಬಸ್ಸು ಅಲ್ಲಿಯೇ ನಿಲ್ಲಬೇಕಿತ್ತು. ಆದರೆ, ಬಸ್ಸು ಅಲ್ಲಿಂದ ಸುಮಾರು 1 ಕಿ.ಮೀ.ವರೆಗೆ ಸಾಗಿಕೊಂಡು ಬಂದಿದೆ. ಇದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಲಾರಿಯವನೂ ನಾಪತ್ತೆ!

ಅಪಘಾತ ನಡೆದ ಸ್ಥಳದಲ್ಲಿ ಲಾರಿಯ ಚಾಲಕ ಕೂಡ ಲಾರಿಯೊಂದಿಗೆ ನಾಪತ್ತೆಯಾಗಿರುವುದು ಪ್ರಕರಣವನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ. ಈ ಕೋನದಿಂದ ಆಲೋಚಿಸಿದರೆ ಲಾರಿಯನದ್ದೇ ತಪ್ಪಿರಬಹುದು ಎಂದು ಅಂದಾಜಿಸಲಾಗುತ್ತಿದೆ. ಈಗಾಗಲೇ ಐಮಂಗಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಲಾರಿ ಹಾಗೂ ಅದರ ಚಾಲಕನ ಪತ್ತೆಗಾಗಿ ಬಲೆ ಬೀಸಿದ್ದಾರೆ. ಸೂಕ್ತ ತನಿಖೆಯ ನಂತರ ಅಪಘಾತ ಹೇಗಾಯಿತು ಎಂಬ ಕಾರಣ ಬಯಲಾಗಲಿದೆ.

[t4b-ticker]

You May Also Like

More From Author

+ There are no comments

Add yours