ಪ್ರತಿನಿತ್ಯ ಶ್ರೀಕೃಷ್ಣನನ್ನು ಆರಾಧಿಸಿ: ಶಾಸಕ ಟಿ.ರಘುಮೂರ್ತಿ.

 

ಚಳ್ಳಕೆರೆ: ಪ್ರಸ್ತುತ ವರ್ಷದ ಮುಂಗಾರು ಮಳೆ ವಿಫಲವಾಗಿದ್ದು, ಜನರು ಮಳೆ, ಬೆಳೆ ಇಲ್ಲದೆ ನೋವಿನಲಿದ್ದರೂ ಅವರಿಗೆ ಬದುಕಿನಲ್ಲಿ ಶಾಂತಿ, ನೆಮ್ಮದಿಯನ್ನು ನೀಡುವಂತೆ ಭಗವಾನ್ ಶ್ರೀಕೃಷ್ಣನಲ್ಲಿ ಪ್ರಾರ್ಥಿಸಿರುವುದಾಗಿ ಶಾಸಕ ಟಿ.ರಘುಮೂರ್ತಿ ತಿಳಿಸಿದರು.
ಅವರು, ಭಾನುವಾರ ಕಾಟಪ್ಪನಹಟ್ಟಿಯ ಎತ್ತಪ್ಪ-ಜುಂಜಪ್ಪ ದೇವಸ್ಥಾನದ ಆವರಣದಲ್ಲಿ ಯಾದವ ಸಮುದಾಯ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರಲ್ಲದೆ, ಸಮುದಾಯ ಹಮ್ಮಿಕೊಂಡಿದ್ದ ಬೃಹತ್ ಮೆರವಣಿಗೆಗೆ ಚಾಲನೆ ನೀಡಿದರು. ಯಾದವ ಸಮುದಾಯ ಹಲವಾರು ಸಮಸ್ಯೆಗಳ ನಡುವೆಯೂ ಸಹ ತಮ್ಮ ಆರಾಧ್ಯ ದೈವ ಶ್ರೀಕೃಷ್ಣನನ್ನು ಪ್ರತಿನಿತ್ಯ ಪೂಜಿಸುತ್ತಾ ಬಂದಿದೆ. ಭಗವಾನ್ ಶ್ರೀಕೃಷ್ಣ ಎಲ್ಲಾ ಸಮುದಾಯದ ದೇವರಾಗಿದ್ದಾನೆ. ಕೃಷ್ಣನನ್ನು ನೆನೆದರೆ ಸಂಕಷ್ಟಗಳು ಪರಿಹಾರವಾಗುತ್ತವೆ ಎಂಬುವುದು ಸುಳ್ಳಲ್ಲ. ಇಂದು ಈ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಮತ್ತೊಮ್ಮೆ ಶ್ರೀಕೃಷ್ಣನನ್ನು ನೆನಪಿಸುವ ಕಾರ್ಯವನ್ನು ಸಮುದಾಯದ ಮುಖಂಡರು ಮಾಡಿದ್ದು, ಎಲ್ಲರನ್ನೂ ಅಭಿನಂದಿಸುವೆ ಎಂದರು.
ಶ್ರೀಕೃಷ್ಣನ ಜಯಂತಿ ಬೃಹತ್ ಮೆರವಣಿಗೆ ಕಾಟಪ್ಪನಹಟ್ಟಿಯಿಂದ ಹೊರಟು, ಪಾವಗಡ ರಸ್ತೆ, ನೆಹರೂ ವೃತ್ತ, ಅಂಬೇಡ್ಕರ್ ವೃತ್ತ, ಬಳ್ಳಾರಿ ರಸ್ತೆಯ ಮೂಲಕ ಕಾಟಪ್ಪನಹಟ್ಟಿಗೆ ಶ್ರೀಕೃಷ್ಣ ಭಾವಚಿತ್ರದೊಂದಿಗೆ ಮೆರವಣಿಗೆ ಸಾಗಿತು. ದಾರಿಯುದ್ದಕ್ಕೂ ಡಿಜೆಗೆ ಯುವಕರು ಕುಣಿದು ಕುಪ್ಪಳಿಸಿದರು.
ಈ ಸಂದರ್ಭದಲ್ಲಿ ಯಾದವ ಸಮುದಾಯದ ತಾಲ್ಲೂಕು ಅಧ್ಯಕ್ಷ ಟಿ.ರವಿಕುಮಾರ್, ಹಿರಿಯ ಮುಖಂಡ ಬಿ.ವಿ.ಸಿರಿಯಣ್ಣ, ಕಾಡುಗೊಲ್ಲರ ಸಂಘದ ಅಧ್ಯಕ್ಷ ಬೂದಿಹಳ್ಳಿ ರಾಜು, ಗುತ್ತಿಗೆದಾರ ಬಂಜಿಗೆರೆ ಹನುಮಂತಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಶಿಧರ, ಈರಣ್ಣ, ಮಂಜುನಾಥ, ಹುಲಿಕುಂಟೆ ವೈ.ಕಾಂತರಾಜು, ಎಚ್.ಮಹಲಿಂಗಪ್ಪ, ರಂಗಸ್ವಾಮಿ, ವೀರೇಶ್, ದಾಸಯ್ಯರ ರಂಗಸ್ವಾಮಿ, ಕೆಂಪಮಂಜು, ಅಜ್ಜಣ್ಣ, ವೀರಭದ್ರಪ್ಪ, ಶ್ರೀಕಾಂತ್ ಮುಂತಾದವರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು

[t4b-ticker]

You May Also Like

More From Author

+ There are no comments

Add yours