ಗ್ರಾಮೀಣ ಭಾಗದ ಸಮಗ್ರ ಅಭಿವೃದ್ದಿಗೆ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

ಚಿತ್ರದುರ್ಗ: ಚಕ್ ಡ್ಯಾಂ, ಮನೆಗಳು, ಶಾಲೆಗಳು, ಸಿ.ಸಿ.ರಸ್ತೆಗಳು ಸೇರಿ  ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿದ್ದೇನೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.
ತಾಲೂಕಿನ  ಐನಹಳ್ಳಿ, ಎಂ.ಕೆ.ಹಟ್ಟಿ ಮತ್ತು ಲಕ್ಷ್ಮಿಸಾಗರ , ಹಿರೇಗುಂಟನೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಿ.ಸಿ.ರಸ್ತೆ  ಮತ್ತು ದೇವಸ್ಥಾನದ ಅಭಿವೃದ್ಧಿ   ಕಾಮಗಾರಿಗಳಿಗೆ  ಚಾಲನೆ ನೀಡಿ  ಮಾತನಾಡಿದರು.
ನನ್ನ ಕ್ಷೇತ್ರದಲ್ಲಿ ಸಿ.ಸಿ.ರಸ್ತೆಗಳು, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ, ಭದ್ರ ಅನುದಾನ, ಲೋಕೋಪಯೋಗಿ ಅನುದಾನ ಸೇರಿ ಎಲ್ಲಾ ಕಡೆ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಗ್ರಾಮೀಣ ಭಾಗದ ಎಲ್ಲಾ ರಸ್ತೆಗಳು ಅಭಿವೃದ್ಧಿಗೆ ಹಣ ನೀಡಿದ್ದು ಬಹುತೇಕ ಪೂರ್ಣವಾಗುವ ಹಂತದಲ್ಲಿದೆ. ಇನ್ನು ಕೇಲವು ರಸ್ತೆಗಳು ಈ ತಿಂಗಳಲ್ಲಿ ಪೂರ್ಣವಾಗಲಿದೆ ಎಂದರು.
ಐನಹಳ್ಳಿ ಗ್ರಾಮ ವ್ಯಾಪ್ತಿಯ ವಡ್ಡನಹಳ್ಳಿ 70 ಲಕ್ಷ, ಬಿರವಾರ 25 ಲಕ್ಷ, ಮಾರಘಟ್ಟ 65 ಲಕ್ಷ, ಲಕ್ಷ್ಮಿಸಾಗರ ಗ್ರಾಮ ಪಂಚಾಯತಿ ವ್ಯಾಪ್ತಿಯ ವಿಜಾಪುರ 30, ಮಾಳೇನಹಳ್ಳಿ ಎನ್.ಬಳೀಗಟ್ಡೆ 15 ಲಕ್ಷ  ವೆಚ್ಚದ ಸಿ.ಸಿ.ರಸ್ತೆ ಕಾಮಗಾರಿಗೆ ಚಾಲನೆ ನೀಡಿದ್ದು ತಿಂಗಳ ಒಳಗಾಗಿ ಪೂರ್ಣಗೊಳಿಸಲು ಸೂಚಿಸಿದ್ದೇನೆ.. ಗುಣಮಟ್ಟದ ಕಾಮಗಾರಿ ಮಾಡಬೇಕು. ಜನರು ಸಹ ನಿಗಾ ವಹಿಸಿ ತಮ್ಮ ಗ್ರಾಮಗಳಲ್ಲಿ ಉತ್ತಮವಾಗಿ ಕೆಲಸ ಮಾಡಿಸಿಕೊಳ್ಳಿ ಎಂದರು.
ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಬಂದಿರುವ ಅನುದಾನದಲ್ಲಿ   ಆಂಜನೇಯ ದೇವಸ್ಥಾನ ಸಾದರಹಳ್ಳಿ 5 ಲಕ್ಷ, ಕಲ್ಲೇಶ್ವರ ದೇವಸ್ಥಾನ ಲಕ್ಷ್ಮಿಸಾಗರ 5ಲಕ್ಷ, ಆಲದ ಮರದ ಚೌಡೇಶ್ವರಿ ದೇವಸ್ಥಾನ 5 ಲಕ್ಷ, ಸಿದ್ದೇಶ್ವರ ಸ್ವಾಮಿ ದೇವಸ್ಥಾನ ವಿಜಾಪುರ 5 ಲಕ್ಷ ಹಣ ನೀಡಿದ್ದು ನನ್ನ ಕ್ಷೇತ್ರದಲ್ಲಿ 2 ಕೋಟಿ ವೆಚ್ಚದಲ್ಲಿ 40 ದೇವಸ್ಥಾನಗಳ ಅನುದಾನ ನೀಡಿದ್ದೇನೆ.
ಶಿಕ್ಷಣ ಕ್ಷೇತ್ರಕ್ಕಾಗಿ ಶಾಸಕರ ಅನುದಾ‌ನ,  ಡಿಎಂಎಫ್ ಅನುದಾನ ಮತ್ತು  ಇತರೆ ಅನುದಾನ ಬಳಸಿ 180 ರಿಂದ 190  ನೂತನ  ಶಾಲಾ ಕಟ್ಟಡಗಳನ್ನು  ನಿರ್ಮಾಣ ಮಾಡಲಾಗಿದೆ. ಅಂಗನವಾಡಿ ಕಟ್ಟಡಗಳು ಸಹ ನಿರ್ಮಾಣ ಮಾಡಿದ್ದು ಸಮಗ್ರ ಅಭಿವೃದ್ಧಿಗೆ ಕೆಲಸ ಮಾಡಿದ್ದೇನೆ. ಜನರು ಅಭಿವೃದ್ಧಿ ಕಾರ್ಯಗಳನ್ನು ನೋಡಿದ್ದಾರೆ.‌ ಜನರು ನಂಬಿಕೆಗೆ ತಕ್ಕಂತೆ ಜನರ ಋಣ ತೀರಿಸುವ ಕೆಲಸ ಮಾಡಿದ್ದೇನೆ. ಯಾವುದೇ ಪಕ್ಷದ ಬೇಧ ಮಾಡದೇ ಅಭಿವೃದ್ಧಿ ಮಾಡಲಾಗಿದೆ. ನನ್ನ  ಶಕ್ತಿ ಮೀರಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾರಘಟ್ಟ    ಗ್ರಾಮ ಪಂಚಾಯತಿ  ಅಧ್ಯಕ್ಷೆ ವೀಣಾ ದೇವರಾಜ್, ಸದಸ್ಯರಾದ  ಚಿಕ್ಕಜ್ಜ, ಗ್ರಾಮಸ್ಥರು  ಸೀನಪ್ಪ  ಶಿವಣ್ಣ  ಕುಬೇಂದ್ರಣ್ಣ  ಕುಮಾರ್  ತಿಪ್ಪೇಶ್  ಕಾಂತರಾಜ್ ಮಂಜುನಾಥ್ ಮಂಜುಳಾ  ತಿಪ್ಪೇಸ್ವಾಮಿ ಮತ್ತು ಗ್ರಾಮಸ್ಥರು ಇದ್ದರು.
[t4b-ticker]

You May Also Like

More From Author

+ There are no comments

Add yours