ಅಭಿವೃದ್ದಿ ಮೆಚ್ಚಿ ಯುವಕರು ಬೆಂಬಲಿಸುತ್ತಿದ್ದಾರೆ: ಶಾಸಕ ಟಿ.ರಘುಮೂರ್ತಿ

 

ಚಿತ್ರದುರ್ಗ:ಚಳ್ಳಕೆರೆ ಕ್ಷೇತ್ರದ ಜನರು ಬುದ್ದಿವಂತ ಮತದಾರಾಗಿದ್ದು ಇಡೀ ಕ್ಷೇತ್ರದಲ್ಲಿ ಸಾವಿರಾರು ಯುವಕರು ಅಭಿವೃದ್ಧಿ ಮೆಚ್ಚಿ ಬೆಂಬಲಿಸುತ್ತಿರವುದು ಪಕ್ಷಕ್ಕೆ ಬಲ ತಂದಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

ಚಿತ್ರದುರ್ಗ ತಾಲೂಕಿನ ತುರುವನೂರು ಹೋಬಳಿಯ ಮುದ್ದಾಪುರ ಗ್ರಾಮದಲ್ಲಿ ಶಾಸಕರ ಸಮ್ಮುಖದಲ್ಲಿ ವಿವಿಧ ಹಳ್ಳಿಗಳ ನೂರಾರು ಯುವಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿದರು.

ದೇಶದಲ್ಲಿ ಬದಲಾವಣೆ ಮಾಡುವ ಶಕ್ತಿ ಯುವ ಸಮೂಹಕ್ಕೆ ಇದೆ. ಯುವಕರು ಚಳ್ಳಕೆರೆ ಕ್ಷೇತ್ರದಲ್ಲಿ ಶಿಕ್ಷಣಕ್ಕೆ ನೀಡುವ ಕೊಡುಗೆಯಿಂದ ಆಗಿರುವ ಅನುಕೂಲವನ್ನು ಪ್ರತಿ ಹಳ್ಳಿಯಲ್ಲಿ ನನಗೆ ತಿಳಿಸಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇಂಜಿನಿಯರಿಂಗ್ ಕಾಲೇಜು, ಜಿಟಿಟಿಸಿ ಕಾಲೇಜು, ತುರುವನೂರು ಕಾಲೇಜಿ ಸ್ಥಳಾಂತರ ವಿಚಾರದಲ್ಲಿ ನಾನು ಮಾಡಿದ ಹೋರಟಕ್ಕೆ ಎಲ್ಲಾ ಯುವಕರು ಬೆಂಬಲಿಸಿದ್ದು ಜನರು ನೋಡಿದ್ದಾರೆ. ತುರುವನೂರು ಸರ್ಕಾರಿ ಕಾಲೇಜಿ ಉಳಿಸಿಕೊಂಡು ಅಲ್ಲಿಗೆ ಹೆಚ್ಚಿನ ಕೋರ್ಸ್ ಗಳನ್ನು ತರುವುದಕ್ಕೆ ನಾನು ಶ್ರಮಿಸಿದ್ದೇನೆ ಎಂದರು.

ಚುನಾವಣೆ ಬಂದಾಗ ರಾಜಕೀಯ ಪಕ್ಷಗಳು ಭರವಸೆ ನೀಡುವುದು ಸಹಜ. ಆದರೆ ಯುವಕರು ಅತಿ ಬುದ್ದಿವಂತರಾಗಿದ್ದು ಯಾರು ಏನು ಹೇಳಿದರು ಅಭಿವೃದ್ಧಿ ಪರ ಮತ ಚಲಾಯಿಸುತ್ತಾರೆ ಎಂಬ ನಂಬಿಕೆ ನನಗಿದೆ‌. ನಾನು ಯುವಕ ಸಮೂಹಕ್ಕೆ ಅಗತ್ಯ ಇರುವ ಎಲ್ಲಾವನ್ನು ಹಂತ ಹಂತವಾಗಿ ದೂರದೃಷ್ಟಿ ಆಲೋಚನೆ ಮಾಡುತ್ತ ಕೆಲಸ‌ ಕಾರ್ಯಗಳನ್ನು ಮಾಡಿದ್ದೇನೆ.

ಪ್ರತಿ ಹಳ್ಳಿಯಲ್ಲಿ ಪಕ್ಷಾತೀತವಾಗಿ ಯುವಕರು ನನ್ನನ್ನು ಬೆಂಬಲಿಸುತ್ತಿದ್ದಾರೆ.ಯಾವುದೇ ರಾಜಕೀಯ ಪಕ್ಷದ ಜೊತೆ ಗುರುತಿಸಿಕೊಳ್ಳದ ವಿದ್ಯಾವಂತ ಯುವಕರು ಸ್ವ ಇಚ್ಛೆಯಿಂದ ಅಣ್ಣ ನಿಮ್ಮ ಪರವಾಗಿ ನಾವು ಕೆಲಸ‌ಮಾಡುತ್ತೇವೆ ಎಂಬ ಅಭಯ ನೀಡಿ ಕ್ಷೇತ್ರದಾದ್ಯಂತ ನನ್ನ ಪರ ಕೆಲಸ ಮಾಡಿತ್ತಿದ್ದು ಅವರ ಕೆಲಸಕ್ಕೆ ನಾನು ಸದಾ ಋಣಿಯಾಗಿರುತ್ತೇನೆ.

ಚಳ್ಳಕೆರೆಯ ಅಭಿವೃದ್ಧಿ ಮೆಚ್ಚಿ ಕೇಲವು ಹಳ್ಳಿಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗುತ್ತಿದ್ದಾರೆ.ನನಗೆ ಕ್ಷೇತ್ರದ ಅಭಿವೃದ್ಧಿ ಮುಖ್ಯ ಜನಸೇವೆ ಬಂದಿದ್ದೇನೆ.ಜನರ ಮಧ್ಯೆ ಸದಾ ಇದ್ದು ಕೆಲಸ ಮಾಡುತ್ತೇನೆ ಅಷ್ಟೆ ನನ್ನ ಕೆಲಸ ಜನರ ಎಲ್ಲಾವನ್ನು ತಿರ್ಮಾನ ಮಾಡುತ್ತಾರೆ ಎಂದು ತಿಳಿಸಿದರು.

ತುರುವನೂರು ಹೋಬಳಿಯ ಮುದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುದ್ದಾಪುರ, ಮುದ್ದಾಪುರ ಹೊಸಹಟ್ಟಿ, ಮುದ್ದಾಪುರ ಮ್ಯಾಸರಹಟ್ಟಿ, ಸೂರೇನಹಳ್ಳಿ, ಗೊಲ್ಲರಹಟ್ಟಿ, ಸಿದ್ದವನದುರ್ಗ, ಚಿಕ್ಕಬಿಗೆರೆ, ಹಿರೇ ಕಬ್ಬಿಗೆರೆ, ಗೊಲ್ಲರಟ್ಟಿಗಳ ಯುವಕರು ಹಾಗೂ ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಆಧರಿಸಿ ಮತ್ತು ಶಾಸಕರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಮಪ್ಪ, ಮಾಜಿ ಜಿ.ಪಂ. ಸದಸ್ಯ ಬಾಬುರೆಡ್ಡಿ, ಗ್ರಾಮ ಪಂಚಾಯತ ಅಧ್ಯಕ್ಷ ಉಪಾಧ್ಯಕ್ಷರು, ಮತ್ತು ಸದಸ್ಯರುಗಳು, ಮುಖಂಡರುಗಳಾದ ತಿಮ್ಮರಾಜು, ರಾಜಪ್ಪ, ಮುಖಂಡರು, ಕಾರ್ಯಕರ್ತರು ಮತ್ತು ಯುವಕರು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours