ನಾಲ್ಕು ರಾಜ್ಯಗಳ ಚುನಾವಣೆ ಸಮೀಕ್ಷೆಗಳು ಬಹಿರಂಗ

 

ಈ  ವರ್ಷದ ಕೊನೆಯಲ್ಲಿ  ಚುನಾವಣೆ ಕಾವು ಏರಲಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ (congress )ಚುಕ್ಕಾಣಿ ಹಿಡಿಯುವ ಮೂಲಕ ಮುಂದಿನ ಇತರೆ ರಾಜ್ಯದ ಮೇಲೆ ಕಣ್ಣಿಟ್ಟಿದೆ. ಈ ವರ್ಷದಲ್ಲಿ  ನಾಲ್ಕು ರಾಜ್ಯಗಳಿಗೆ ವಿಧಾನಸಭೆ ಚುನಾವಣೆ ನಡೆಯಲಿದೆ. ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್‌ಗಡ ರಾಜ್ಯಗಳು ಚುನಾವಣೆ ಎದುರಿಸಲಿದೆ. 2024 ರಲ್ಲಿ ನಡೆಯಲಿರಿವ ಲೋಕಸಭೆ ಚುನಾವಣೆಯ ಮೇಲೆ ಈ ನಾಲ್ಕು ರಾಜ್ಯಗಳ ಫಲಿತಾಂಶ ಸಾಕಷ್ಟು ಪರಿಣಾಮ ಬೀರಲಿದ್ದು ಭಾರೀ ಮಹತ್ವ ಪಡೆದುಕೊಂಡಿದ್ದು ಎಲ್ಲಾರೂ ಸಹ ಈ ಚುನಾವಣೆ  ಸೆಮಿಫೈನಲ್‌ ರೀತಿ ಎಂಬ ದೃಷ್ಟಿಯಲ್ಲಿ  ವಿಧಾನಸಭೆ ಚುನಾವಣೆಗಳನ್ನು  ವ್ಯಾಖ್ಯಾನಿಸುತ್ತಿದ್ದಾರೆ.

ಇದನ್ನೂ ಓದಿ: ಕಾಂತಾರ ಸಿನಿಮಾ ವೇಷ ಹಾಕಿದ ತಾನ್ವಿಗೆ ಪ್ರಥಮ ಸ್ಥಾನ

ಎಲ್ಲಾ ಸಮೀಕ್ಷೆಗಳ  ವಿಶೇಷ ಎಂದರೆ ಬಹುತೇಕ ನಡೆಸಿರುವ  ಎಲ್ಲಾ   ಸಮೀಕ್ಷೆಗಳು  ಸಹ  ಕಾಂಗ್ರೆಸ್‌ ಪರವಾಗಿ ಇವೆ. ಇದು ಬಿಜೆಪಿಗೆ ನುಂಗಲಾರದ ತುತ್ತಾಗಿದೆ.

ಕರ್ನಾಟಕ ಚುನಾವಣೆಯೇ ಮುನ್ನುಡಿ

ದೇಶದಲ್ಲಿ   ಕರ್ನಾಟಕ ರಾಜ್ಯದ ಫಲಿತಾಂಶ  ಭಾರೀ ಸಂಚಲನ ಸೃಷ್ಟಿ ಮಾಡಿದೆ. ಕರ್ನಾಟಕದ ಫಲಿತಾಂಶಗಳು ಆಡಳಿತಾರೂಢ ಬಿಜೆಪಿಗೆ ಪೆಟ್ಟು  ನೀಡುವ ಮೂಲಕ ಕಾಂಗ್ರೆಸ್‌ಗೆ ಹೊಸ ಹುರುಪನ್ನು ತಂದಿದೆ. ಪ್ರಧಾನಿ ಮೋದಿ ಅವರ ಜನಪ್ರಿಯತೆಯನ್ನು ಬಳಸಿಕೊಳ್ಳಲು ಮುಂದಾಗಿದ್ದ ಬಿಜೆಪಿಗೆ ಕರ್ನಾಟಕದಲ್ಲಿ ದೊಡ್ಡ ಮಟ್ಟದ  ಹಿನ್ನೆಡೆಯಾಗಿದೆ. ಇನ್ನೊಂದು ವಿಚಾರ ಎಂದರೆ ಮೋದಿ ಬಂದು ರಾಜ್ಯ ಸುತ್ತಿದರೂ ಸಹ ಏನು ಪ್ರಯೋಜನವಾಗಿರಲಿಲ್ಲ.

ಇದನ್ನೂ ಓದಿ: ಬಿಗ್ ಬಾಸ್ ಶೋ ಗೆ ಸಂಭಾವ್ಯ 10 ಜನರ ಪಟ್ಟಿ 

ಆಡಳಿತ ವಿರೋಧಿ ಅಲೆ, ಭ್ರಷ್ಟಾಚಾರ ಆರೋಪಗಳು, ಬೆಲೆ ಏರಿಕೆ ಹಾಗೂ ಕಾಂಗ್ರೆಸ್‌ ನೀಡಿದ ಗ್ಯಾರಂಟಿಗಳು ಕರ್ನಾಟಕದಲ್ಲಿ ಬಿಜೆಪಿ ಸೋಲಿಗೆ ಕಾರಣವಾಗಿವೆ ಎಂದು ಹೇಳಲಾಗುತ್ತಿದೆ. ಇವೆಲ್ಲವೂ ಕಾರಣವಾಗಿದ್ದರೂ ಬಿಜೆಪಿಯೊಳಗಿನ ಆಂತರಿಕ ಕಲಹವೂ ಪಕ್ಷದ ಸೋಲಿಗೆ ಪ್ರಮುಖ ಕಾರಣವೆಂದು ಹೇಳಬಹುದು. ಒಟ್ಟಿನಲ್ಲಿ ಕರ್ನಾಟಕದಲ್ಲಿ ಬಿಜೆಪಿಗೆ ಹೀನಾಯ ಸೋಲಾಗಿರುವುದು ಹೊಸ ರಾಜಕೀಯ ಬೆಳವಣಿಗೆಗೆ  ನಾಂದಿಯಾಡಿತು.

 ತೆಲಂಗಾಣದಲ್ಲಿ ಆಡಳಿತ ವಿರೋಧಿ ಅಲೆ

ತೆಲಂಗಾಣದಲ್ಲಿ ಸತತ ಎರಡು ಬಾರಿ ಸರ್ಕಾರ ನಡೆಸಿರುವ    ಚಂದ್ರಶೇಖರ್ ರಾವ್‌ ಅವರ ಬಿಆರ್‌ಎಸ್‌ ಪಕ್ಷವು ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿದೆ. ಚುನಾವಣಾ ಪೂರ್ವ ಸಮೀಕ್ಷೆಗಳ ಪ್ರಕಾರ, ತೆಲಂಗಾಣದಲ್ಲಿ ಕಾಂಗ್ರೆಸ್‌ ಪರ ಅಲೆ ಇದೆ. ತೆಲಂಗಾಣ ಕಾಂಗ್ರೆಸ್‌ನ ರಾಜ್ಯ ಘಟಕದ ಅಧ್ಯಕ್ಷ ರೇವಂತ್‌ ರೆಡ್ಡಿ ಅವರ ಜನಪ್ರಿಯತೆ ದಿನೇದಿನೇ ಹೆಚ್ಚಾಗುತ್ತಿದೆ.

ಕರ್ನಾಟಕದಂತೆ ತೆಲಂಗಾಣದಲ್ಲೂ ಕಾಂಗ್ರೆಸ್‌ ಪಕ್ಷವು ಗ್ಯಾರಂಟಿಗಳನ್ನು ಘೋಷಿಸಿದೆ. ಕರ್ನಾಟಕದ ಫಲಿತಾಂಶಗಳು ತೆಲಂಗಾಣದ ಮೇಲೆ ಪರಿಣಾಮ ಉಂಟು ಮಾಡುವ ಸಾಧ್ಯತೆಗಳಿವೆ. ಚುನಾವಣೆಗೆ ಕೆಲ ತಿಂಗಳು ಬಾಕಿ ಇರುವಾಗಲೇ ಬಿಆರ್‌ಎಸ್‌ ಹಾಗೂ ಬಿಜೆಪಿ ನಾಯಕರು ‘ಕೈ’  ಸೇರ್ಪಡೆ ಆಗುತ್ತಿರುವುದು ಕಾಂಗ್ರೆಸ್‌ ಪಕ್ಷದ   ನೈತಿಕ ಸ್ಥೈರ್ಯವನ್ನು ಹೆಚ್ಚಿಸಿದೆ ಎಂದು ಹೇಳಬಹುದು.

ರಾಜಸ್ಥಾನದ ಬಿಜೆಪಿಯಲ್ಲಿ ಆಂತರಿಕ ಕಲಹ

ರಾಜಸ್ಥಾನದ ಬಿಜೆಪಿಯಲ್ಲಿ ಆಂತರಿಕ ಕಲಹ ಜೋರಾಗಿ ಸದ್ದು ಮಾಡುತ್ತಿದೆ. ಮಾಜಿ ಸಿಎಂ ವಸುಂದರಾ ರಾಜೇ ಹಾಗೂ ಕೇಂದ್ರ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ನಡುವೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ಪೈಪೋಟಿ ನಡೆದಿದೆ. ಇವರಿಬ್ಬರ ನಡುವಿನ ಅಸಮಾಧಾನ ಬಹಿರಂಗ ವೇದಿಕೆಗಳಲ್ಲೇ ವ್ಯಕ್ತವಾಗಿರುವುದು ಕೇಸರಿ ಪಾಳಯದಲ್ಲಿ ತಲ್ಲಣ ಸೃಷ್ಟಿಸಿದೆ.

ರಾಜಸ್ಥಾನದ ಆಡಳಿತರೂಢ ಕಾಂಗ್ರೆಸ್‌ ಪಕ್ಷವು ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆಗಳಿವೆ ಎಂದು ಬಹುತೇಕ ಸಮೀಕ್ಷೆಗಳು ಹೇಳಿವೆ. ಮುಖ್ಯಮಂತ್ರಿ ಅಶೋಕ್‌ ಗೆಹಲೋಟ್‌ ಹಾಗೂ ಸಚಿನ್ ಪೈಲಟ್‌ ನಡುವೆ ಭಿನ್ನಾಭಿಪ್ರಾಯಗಳಿದ್ದರೂ ಅದನ್ನು ಶಮನ ಮಾಡುವಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ಯಶಸ್ವಿಯಾಗಿದೆ. ಕರ್ನಾಟಕದಂತೆ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆಯನ್ನು ಎದುರಿಸಲು ಕಾಂಗ್ರೆಸ್‌ ಮುಂದಾಗಿದೆ. ಪ್ರಮುಖವಾಗಿ ಕಾಂಗ್ರೆಸ್‌ ಗ್ಯಾರಂಟಿಗಳು ಇಲ್ಲಿಯೂ ಪ್ರಭಾವ ಬೀರಬಹುದು ಎಂದು ಹೇಳಲಾಗುತ್ತಿದೆ.

ಮಧ್ಯಪ್ರದೇಶದಲ್ಲಿ ಚೌಹಾಣ್‌ಗಿಲ್ಲ ಕಿಮ್ಮತ್ತು

ಎರಡು ದಶಕಗಳ ಕಾಲ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿರುವ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರ ಜನಪ್ರಿಯತೆ ಕುಗ್ಗುತ್ತಿರುವುದು ಕಂಡುಬಂದಿದೆ. ಇಲ್ಲಿ ಬಿಜೆಪಿ ವಿರೋಧಿ ಅಲೆ ಇರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಶಿವರಾಜ್‌ ಸಿಂಗ್‌ ಚೌಹಾಣ್‌ರನ್ನು ಬಿಜೆಪಿ ಹೈಕಮಾಂಡ್‌ ಮುನ್ನೆಲೆಗೆ ತರದೇ ಪ್ರಧಾನಿ ಮೋದಿ ಮೂಲಕ ಪ್ರಚಾರ ಮಾಡುತ್ತಿದೆ. ಕರ್ನಾಟಕದಂತೆಯೇ ಇಲ್ಲಿಯೂ ಮೋದಿ ಹವಾ ಕೆಲಸ ಮಾಡಲ್ಲವೆಂದು ಸಮೀಕ್ಷೆಗಳು ಹೇಳಿವೆ. ಬಹುತೇಕ ಸಮೀಕ್ಷೆಗಳ ಪ್ರಕಾರ ಇಲ್ಲಿಯೂ ಕಾಂಗ್ರೆಸ್‌ ಗೆಲುವು ಸಾಧಿಸಲಿದೆ.

ಇನ್ನು ಕಮಲ್‌ ನಾಥ್‌ ನೇತೃತ್ವದ ಕಾಂಗ್ರೆಸ್‌ ಪಕ್ಷವು ಕರ್ನಾಟಕದಂತೆಯೇ ಇಲ್ಲಿಯೂ ಗ್ಯಾರಂಟಿಗಳನ್ನು ಘೋಷಿಸಿದೆ. ಹಲವು ಹಿಂದುಳಿದ ವರ್ಗಗಳ ಬಿಜೆಪಿ ನಾಯಕರು ಕಾಂಗ್ರೆಸ್‌ ಸೇರ್ಪಡೆಗೊಳ್ಳುತ್ತಿದ್ದಾರೆ. ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂದಿಯಾ ಬಳಗದಲ್ಲಿ ಗುರುತಿಸಿಕೊಂಡಿರುವ ನಾಯಕರು ಬಿಜೆಪಿ ತೊರೆದು ಕಾಂಗ್ರೆಸ್‌ಗೆ ವಾಪಸ್ಸಾಗುತ್ತಿದ್ದಾರೆ. ಇದು ಬಿಜೆಪಿಯನ್ನು ಚಿಂತೆಗೀಡು ಮಾಡಿದೆ.

ಛತ್ತೀಸ್‌ಗಢದಲ್ಲಿ ಒನ್‌-ಸೈಡೆಡ್‌ ಗೇಮ್‌

ಛತ್ತೀಸ್‌ಗಢದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬರಲಿವೆ ಎಂದು ಬಹುತೇಕ ಸಮೀಕ್ಷೆಗಳು ಹೇಳಿವೆ. ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಅವರ ಆಡಳಿತಕ್ಕೆ ಜನರು ಮನ್ನಣೆ ನೀಡಿದ್ದಾರೆಂದು ಸಮೀಕ್ಷೆಗಳಿಂದ ತಿಳಿದುಬಂದಿದೆ. ಈ ರಾಜ್ಯದಲ್ಲಿ ಮಹಿಳೆಯರು ಹಾಗೂ ರೈತರನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್‌ ಗ್ಯಾರಂಟಿಗಳನ್ನು ಘೋಷಣೆ ಮಾಡಿದೆ. ಬಿಜೆಪಿಗೆ ಪ್ರಭಾವಿ ಸ್ಥಳೀಯ ನಾಯಕರ ಕೊರತೆ ಇದೆ. ಇಲ್ಲಿಯೂ ಮೋದಿ ಅವರನ್ನೇ ಬಿಜೆಪಿ ನೆಚ್ಚಿಕೊಂಡಿದೆ. ಇದು ಕಾಂಗ್ರೆಸ್‌ಗೆ ಲಾಭ ತಂದುಕೊಡಲಿದೆ ಎಂದು ಹೇಳಲಾಗುತ್ತಿದೆ.

ನಾಲ್ಕು ರಾಜ್ಯಗಳ ಫಲಿತಾಂಶ: ಲೋಕಸಭಾ ಚುನಾವಣೆ ಮೇಲೆ ಪ್ರಭಾವ

ಲೋಕಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬಹುದು ಎಂದು ಹೇಳಲಾಗುತ್ತಿದೆ. ಆದರೆ, ಲೋಕಸಭೆ ಚುನಾವಣೆಗೂ ಮುನ್ನವೇ ಈ ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆಗಳು ನಡೆಯಲಿವೆ. ಸಮೀಕ್ಷೆಯಂತೆ ಈ ವಿಧಾನಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ಬಹುಮತ ದೊರೆತರೆ ದೇಶದಲ್ಲಿ ಹೊಸ ಅಲೆ ಸೃಷ್ಟಿ ಆಗುವ  ನಿರೀಕ್ಷೆ ಇದೆ. ಒಂದು ವೇಳೆ ಆ ರೀತಿಯಾದರೇ  ರಾಷ್ಟ್ರದ ರಾಜಕಾರಣದಲ್ಲಿ ಬಹು ದೊಡ್ಡ ಬದಲಾವಣೆ ಎಂಬ ಅಭಿಪ್ರಾಯಗಳನ್ನು  ರಾಜಕೀಯ ಪಂಡಿತರು ಲೆಕ್ಕಚಾರ ಹಾಕುತ್ತಿದ್ದು ಎಲ್ಲಾವೂ ನಾಲ್ಕು ಚುನಾವಣೆ ನಂತರ ಕ್ಲಿಯರ್ ಪಿಚ್ಚರ್ ದೊರೆಯಲಿದೆ‌.

[t4b-ticker]

You May Also Like

More From Author

+ There are no comments

Add yours