ಹಿರಿಯೂರು ಶಾಸಕರಿಂದ 1ರಿಂದ 9 ನೇ ತರಗತಿ ವಿದ್ಯಾರ್ಥಿಗಳಿಗೆ ಬೇಸಿಗೆ ದಿನದ ರಜೆ ಕೈಪಿಡಿ ಬಿಡುಗಡೆಗೊಳಿಸಿದ ಶಾಸಕಿ ಪೂರ್ಣಿಮಾ ಶ್ರೀನಿವಾಸ್.

 

 

 

 

ಹಿರಿಯೂರು: ತಾಲ್ಲೂಕಿನ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಆಯೋಜಿಸಿದ 1 ರಿಂದ 9 ನೇತರಗತಿ ವಿದ್ಯಾರ್ಥಿಗಳಿಗೆ ಬೇಸಿಗೆ ರಜಾ ದಿನಗಳಲ್ಲಿ ನಿರ್ವಹಿಸಬೇಕಾದ ಚಟುವಟಿಕೆಗಳ ಕೈಪಿಡಿಯನ್ನು (e-ಂಚರ) ಹಿರಿಯೂರು ತಾಲ್ಲೂಕಿನ ಶಾಸಕರಾದ ಪೂರ್ಣಿಮಾ ಶ್ರೀನಿವಾಸ್ ರವರು ಬಿಡುಗಡೆ ಮಾಡುವುದರೊಂದಿಗೆ ಅಂತರ್ಜಾಲಕ್ಕೆ ಲೋಕಾರ್ಪಣೆ ಮಾಡಿದರು. ಕರ್ನಾಟಕ ರಾಜ್ಯದಲ್ಲಿ ಪ್ರಥಮ ಬಾರಿಗೆ ಹಿರಿಯೂರು ತಾಲ್ಲೂಕಿನ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಬೇಸಿಗೆ ರಜಾ ಅವಧಿಯಲ್ಲಿ ವಿದ್ಯಾರ್ಥಿಗಳು ಆನ್ ಲೈನ್ ಮೂಲಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ತಯಾರಿಸಿದ e-ಂಚರ ಕಾರ್ಯಕ್ರಮ ಉತ್ತಮವಾಗಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಲು ಶಾಸಕರು ಉದ್ಘಾಟಿಸಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಸ್ ನಾಗಭೂಷಣ್,ಕ.ರಾ.ಸ.ನೌ.ಸಂಘದ ಅಧ್ಯಕ್ಷರಾದ ಶಿವಕುಮಾರ್ ಬಿ.ಆರ್.ಸಿ.ತಿಪ್ಪೇರುದ್ರಪ್ಪ, ಅಕ್ಷರದಾಸೋಹ ಸಹಾಯಕ ನಿರ್ದೇಶಕರಾದ ನಾಗರಾಜಾಚಾರಿ, ಪ್ರಾ.ಶಾ.ಶಿ.ಸಂಘದ ಹಿ.ಉಪಾಧ್ಯಕ್ಷರಾದ ಶಿವಾನಂದ, ಕ.ರಾ.ಸ.ನೌ ಸಂಘದ ಕಾರ್ಯದರ್ಶಿ ರಮೇಶ್, ಸಹಕಾರ್ಯದರ್ಶಿ ಬಿ.ಆರ್.ಪಿ.ಶ್ರೀನಿವಾಸ್,ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಕಾರ್ಯದರ್ಶಿ ಮಹೇಶ್ವರ ರೆಡ್ಡಿ,ಶಾಸಕರ ಆಪ್ತ ಸಹಾಯಕರಾದ ನಿರಂಜನ್, ಇ.ಸಿ.ಓ.ಗಳಾದ ಶಶಿಧರ್, ಗಿರೀಶ್, ಲೋಹಿತ್, ಹರೀಶ್, ಸಿ.ಆರ್.ಪಿ.ವೀರೇಶ.ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು….

 

 

[t4b-ticker]

You May Also Like

More From Author

+ There are no comments

Add yours