ಮಕ್ಕಳನ್ನು ಅಂಕಗಳಿಕೆಗೆ ಸೀಮಿತರಾಗಿಸದೆ, ಕ್ರೀಡಾ ಚಟುವಟಿಕೆಗೆ ಉತ್ತೇಜನ ನೀಡಬೇಕು: ಜಿ.ಹೆಚ್.ತಿಪ್ಪಾರೆಡ್ಡಿ

 

ಚಿತ್ರದುರ್ಗ(ಕರ್ನಾಟಕ ವಾರ್ತೆ) ಫೆ.20:
ಮಕ್ಕಳ ಗಮನವನ್ನು ಅಂಕ ಗಳಿಕೆ ಮಾಡಿಕೊಳ್ಳುವತ್ತ ಮಾತ್ರ ಕೇಂದ್ರೀಕರಿಸದೆ, ಕ್ರೀಡಾ ಚಟುವಟಿಕೆಗಳಿಗೂ ಹೆಚ್ಚಿನ ಪ್ರೋತ್ಸಾಹ ಉತ್ತೇಜನ ನೀಡಬೇಕು ಎಂದು ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜಿಲ್ಲಾ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಸಂಯುಕ್ತಾಶ್ರಯದಲ್ಲಿ ಸೋಮವಾರ ನಗರದ ವೀರ ವನಿತೆ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾ ಕೂಟ ಮತ್ತು ಸಾಂಸ್ಕøತಿಕ ಸ್ಪರ್ಧೆಗಳನ್ನು ಉದ್ಘಾಟಸಿ ಮಾತನಾಡಿದರು.
ವರ್ಷವಿಡೀ ಆರೋಗ್ಯದ ಕಾಳಜಿ ಸಹ ಮಾಡದೇ ಸರ್ಕಾರಿ ಕೆಲಸಗಳಲ್ಲಿ ನೌಕರರು ತೊಡಗಿಕೊಳ್ಳುತ್ತಾರೆ.  ಹಿಂದೆ ಕ್ರೀಡೆಯಲ್ಲಿ ಸಾಧನೆ ಮಾಡಿದ ಸರ್ಕಾರಿ ನೌಕರರಿಗೆ ಉತ್ತಮ ಪ್ರಾತಿನಿಧ್ಯ ನೀಡಲಾಗುತ್ತಿತ್ತು. ಸರ್ಕಾರಿ ನೌಕರರು ಕ್ರೀಡೆಯಲ್ಲಿ ಪಾಲ್ಗೊಂಡು ಸಾಧನೆ ಮಾಡಲು ಸೂಕ್ತ ಪೆÇ್ರೀತ್ಸಾಹ ನೀಡಬೇಕು. ಮಕ್ಕಳು ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಲು ಮಹತ್ವ ನೀಡಿ, ಕ್ರೀಡಾ ಚಟುವಟಿಕೆಗಳಿಗೆ ದೂರ ಇಡುತ್ತೇವೆ. ಮಕ್ಕಳ ಕ್ರೀಡಾ ಚಟುವಟಿಕೆಗಳಿಗೆ ಪೆÇೀಷಕರು ಪೆÇ್ರೀತ್ಸಾಹ ನೀಡಬೇಕು. ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಏಷಿಯನ್ , ಕಾಮನ್ ವೆಲ್ತ್ ಒಲಂಪಿಕ್ ಕ್ರೀಡಾ ಕೂಟಗಳಲ್ಲಿ ಭಾಗವಹಿಸುವ ಕ್ರೀಡಾ ಪಟುಗಳಿಗೆ ಪೆÇ್ರೀತ್ಸಾಹ ನೀಡುತ್ತಿದ್ದಾರೆ ಎಂದರು.
ಮನಸ್ಸು ಉಲ್ಲಾಸವಾಗಿರಬೇಕು ಎಂದರೆ ದಿನನಿತ್ಯ ಕ್ರೀಡಾ ಚಟುವಟಿಕೆಗಳಲ್ಲಿ ಭಾಗಿಯಾಗಬೇಕು. ನಗರದಲ್ಲಿ ಸಿ.ಎ. ಸೈಟ್ ಪಡೆದು ಸುಸಜ್ಜಿತ ಕಟ್ಟಡ ಕಟ್ಟಿ ನೌಕರರ ಮನೋಲ್ಲಾಸ ಹಾಗೂ ಮನೋರಂಜನೆ ಅವಕಾಶ ನೀಡಬೇಕು. ಸರ್ಕಾರಿ ನೌಕರರ ಕಟ್ಟಡ ನಿರ್ಮಾಣಕ್ಕೆ ಸೂಕ್ತ ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು.
ಯಾವುದೇ ಪಕ್ಷಗಳು ಅಧಿಕಾರ ಹಿಡಿದು ತಮ್ಮ ಪ್ರಣಾಳಿಕೆಯನ್ನು ಜಾರಿಗೆ ತಂದು ಜನರಿಗೆ ಮುಟ್ಟಿಸುವಲ್ಲಿ ನೌಕರರ ಪಾತ್ರ ಹೆಚ್ಚಿನದು. ಜಿ.ಎಸ್.ಟಿ ಸಂಗ್ರಹದಲ್ಲಿ ನಮ್ಮ ರಾಜ್ಯ ದೇಶಕ್ಕೆ ಎರಡನೇ ಸ್ಥಾನದಲ್ಲಿದೆ. ರಾಜ್ಯ ಅಭಿವೃದ್ಧಿ ಹೊಂದುವುದಕ್ಕೆ ಎಲ್ಲಾ ಕಾರಣ ಸರ್ಕಾರಿ ನೌಕರರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೌಕರರ ಪರವಾಗಿ ಹಾಗೂ ಒಳಿತಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.  ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಸಂಬಂಧ ಈಗಾಗಲೆ ವೇತನ ಆಯೋಗ ರಚನೆಯನ್ನೂ ಕೂಡ ಮಾಡಿದ್ದಾರೆ.  ಈ ಬಾರಿಯ ಬಜಟ್ ಮಂಡನೆ ನಂತರ ಸರ್ಕಾರಿ ನೌಕರರಲ್ಲಿ ಅಸಮಾದಾನ ಮಡುಗಟ್ಟಿದೆ. ವೇತನ ಆಯೋಗ ಜಾರಿ ಕುರಿತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಸಹ ಒಲವು ತೋರಿದ್ದಾರೆ. ಐದಾರು ಶಾಸಕರು ಸೇರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ವೇತನ ಆಯೋಗ ಜಾರಿ ಕುರಿತು ಪ್ರತ್ಯೇಕವಾಗಿ ಸಮಾಲೋಚನೆ ನಡೆಸುವುದಾಗಿ ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ  ಆಶ್ವಾಸನೆ ನೀಡಿದರು.
ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಮಾತನಾಡಿ, ಪ್ರತಿ ವರ್ಷ ನೌಕರರಿಗೆ ಕ್ರೀಡಾಕೂಟ ಆಯೋಜನೆ ಮಾಡಲಾಗುತ್ತದೆ. ಕಾಲೇಜಿನ ಓದುವ ಸಂದರ್ಭದಲ್ಲಿ ಕ್ರೀಡಾ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತೇವೆ. ಆದರೆ ಸರ್ಕಾರಿ ನೌಕರಿ ಸೇರಿದ ಮೇಲೆ ಇದರಿಂದ ದೂರವಾಗುತ್ತೇವೆ. ನೌಕರರು ಚೈತನ್ಯದಾಯಕವಾಗಿ ಬೆಳಿಗ್ಗಿನ ಕೆಲಸ ಆರಂಭಿಸಬೇಕು. ಇದರಿಂದ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗುತ್ತದೆ. ಶೇ.1 ರಷ್ಟು ಇರುವ ಸರ್ಕಾರಿ ನೌಕರರು ಶೇ.99 ರಷ್ಟು ಜನರ ಸಮಸ್ಯೆಗಳನ್ನು ಪರಿಹರಿಸಬೇಕು. ಎಲ್ಲಾ ಹಂತದ ಸರ್ಕಾರಿ ಕೆಲಸ ದೊಡ್ಡದು. ಇದರಲ್ಲಿ ಮೇಲು ಹಾಗೂ ಕೀಳು ಎಂಬುದಿಲ್ಲ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್. ದಿವಾಕರ್ ಮಾತನಾಡಿ, ಸರ್ಕಾರಿ ನೌಕರರು ಸದಾ ಕಾಲ ದುಡಿಯುತ್ತಾ ಜೀವನದ ಆನಂದ ಸವಿಯದೇ ಬದುಕುತ್ತಾರೆ. ಹೀಗೆ ಮಾಡದೇ ಪ್ರತಿನಿತ್ಯದ ಚಟುವಟಿಕೆಗಳನ್ನು ಆನಂದದಿಂದ ಅನುಭವಿಸಬೇಕು. ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದರು.
ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಮಾತನಾಡಿ, ವೇತನ ಆಯೋಗ ಜಾರಿ ಕುರಿತು ಸರ್ಕಾರದ ಮೇಲೇ ಒತ್ತಡ ತರುವ ನಿಟ್ಟಿನಲ್ಲಿ ಫೆ.21ರಂದು ನೌಕರರ ಸಂಘದ ರಾಜ್ಯದ 6000 ಸಾವಿರ ಚುನಾಯಿತ ಪ್ರತಿನಿಧಿಗಳ ಸಭೆ ನಡೆಸಲಾಗುವುದು. ಸಭೆಯಲ್ಲಿ ಸಂಧಾನ ಅಥವಾ ಹೋರಾಟದ ನಿರ್ಣಯ ಕೈಗೊಳ್ಳಲಾಗುವುದು.  ಸರ್ಕಾರಿ ನೌಕರರಿಗೆ ನಗದು ರಹಿತ ಆರೋಗ್ಯ ಸೇವೆ ಯೋಜನೆ ಜಾರಿಗೊಳಿಸಬೇಕಿದೆ. ವೇತನ ಆಯೋಗ ಜಾರಿ, ನೂತನ ಪಿಂಚಣಿ ವ್ಯವಸ್ಥೆ ಬದಲಿ ಹಳೆಯ ಪಿಂಚಣಿ ಜಾರಿಗೆ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದರು.
ಎರಡು ದಿನಗಳ ಕಾಲ ಕೆಲಸದ ಒತ್ತಡದಿಂದ ಹೊರಬಂದು ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಇತರೆ ಇಲಾಖೆ ನೌಕರರೊಂದಿಗೆ ಬೆರೆಯಲು ಕ್ರೀಡಾಕೂಟದಲ್ಲಿ ಅವಕಾಶವಿದೆ.  ನೌಕರರ ಸಂಘದಿಂದ ಜಿಲ್ಲೆಯ 200  ಸರ್ಕಾರಿ ನೌಕರರ ಮಕ್ಕಳಿಗೆ ಪೆÇ್ರೀತ್ಸಾಹ ಧನ ನೀಡಲಾಗುತ್ತಿದೆ. ಪ್ರತಿ ವರ್ಷ  ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಅತಿ ಹೆಚ್ಚು ಅಂಕಗಳಿಸಿದ  10 ಸಾವಿರ ಸರ್ಕಾರ ನೌಕರರ ಮಕ್ಕಳಿಗೆ ಸಂಘದಿಂದ ರೂ.1 ಕೋಟಿ ಪೆÇ್ರೀತ್ಸಾಹ ಧನವನ್ನುನೀಡಲಾಗುತ್ತದೆ. ಇದನ್ನು ರೂ.2 ಕೋಟಿಗೆ ಹೆಚ್ಚಿಸಲಾಗುವುದು ಕ್ರೀಡಾ ಕೂಟದಲ್ಲಿ ವಿಜೇತರಾದವರಿಗೆ ಸ್ಪೋಟ್ರ್ಸ್ ಕಿಟ್ ಬ್ಯಾಗ ನೀಡಲಾಗುತ್ತದೆ. ಮುಂದಿನ ತಿಂಗಳು ತುಮಕೂರಿನಲ್ಲಿ ರಾಜ್ಯಮಟ್ಟ ನೌಕರರ ಕ್ರೀಡಾಕೂಟ ಆಯೋಜಿಸಲಾಗುವುದು.  ಜಿಲ್ಲಾ ಮಟ್ಟದಲ್ಲಿ ವೈಯಕ್ತಿಕ ವಿಭಾಗದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದವರು, ಗುಂಪು ಆಟಗಳಲ್ಲಿ ಪ್ರಥಮ ಸ್ಥಾನ ಪಡೆದವರು ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆನ್ ಲೈನ್ ಮೂಲಕ ನೊಂದಣಿ ಮಾಡಿಕೊಳ್ಳಬೇಕು. ಇದರ ಲಿಂಕ್ ನೀಡಲಾಗುವುದು ಎಂದರು.
ವೃಂದಾ ಮತ್ತು ತಂಡದವರು ಕ್ರೀಡಾ ಜ್ಯೋತಿಯನ್ನು ಮೈದಾನಕ್ಕೆ ತಂದು ಗಣ್ಯರಿಗೆ ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ಜಿಲ್ಲೆಯ ಸರ್ಕಾರಿ ನೌಕರರ ಮಕ್ಕಳಿಗೆ ನಗದು ಪೆÇ್ರೀತ್ಸಾಹ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ನಗರ ಸಭೆ ಉಪಾಧ್ಯಕ್ಷೆ  ಶ್ರೀದೇವಿ ಚಕ್ರವರ್ತಿ,  ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಕೆ.ಆರ್ ಕೆ.ಆರ್.ಜಯಲಕ್ಷ್ಮಿಬಾಯಿ, ಚಿತ್ರದುರ್ಗ ಜಿಲ್ಲಾ ಸರ್ಕಾರಿ ನೌಕರರ ಸಂಘಧ ವಿಶೇμÁಧಿಕಾರಿ ಆರ್.ಮೋಹನ್ ಕುಮಾರ್, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಕೆ.ಟಿ ತಿಮ್ಮಾರೆಡ್ಡಿ, ಜಿಲ್ಲಾ ಖಜಾಂಚಿ ಬಿ.ವೀರೇಶ್, ಹೊಳಲ್ಕೆರೆ ತಾಲ್ಲೂಕು ಅಧ್ಯಕ್ಷ ಲೋಕೇಶ್, ಹೊಸದುರ್ಗ ತಾಲ್ಲೂಕು ಅಧ್ಯಕ್ಷ ಆರ್. ಲಕ್ಷ್ಮಯ್ಯ, ಮೊಳಕಾಲ್ಮೂರು ತಾಲ್ಲೂಕು ಅಧ್ಯಕ್ಷ ಎಸ್.ಈರಣ್ಣ, ಹಿರಿಯೂರು ತಾಲ್ಲೂಕು ಅಧ್ಯಕ್ಷ ಆರ್.ಶಿವಕುಮಾರ್, ಚಳ್ಳಕೆರೆ ತಾಲ್ಲೂಕು ಅಧ್ಯಕ್ಷ ಪಿ.ಎಲ್. ಲಿಂಗೇಗೌಡ  ಜಿಲ್ಲಾ ಶಾಖೆಯ ಎಲ್ಲಾ ನಿರ್ದೇಶಕರುಗಳು, ತಾಲ್ಲೂಕು ಶಾಖೆಗಳ ಎಲ್ಲಾ ಪದಾಧಿಕಾರಿಗಳು ಮತ್ತು ನಿರ್ದೇಶಕರುಗಳು, ಜಿಲ್ಲೆಯ ಎಲ್ಲಾ ವೃಂದ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು, ಜಿಲ್ಲೆಯ ಎಲ್ಲಾ ಸರ್ಕಾರಿ ನೌಕರರು ಇದ್ದರು.

[t4b-ticker]

You May Also Like

More From Author

+ There are no comments

Add yours