ದೊಡ್ಡೇರಿ ಮಠದ ಕನ್ನೇಶ್ವರ ಆಶ್ರಮದಲ್ಲಿ ಸಂಭ್ರಮದ ರಥೋತ್ಸವ

 

ಚಳ್ಳಕೆರೆ-19 ತಾಲ್ಲೂಕಿನ ದೊಡ್ಡೇರಿ ಗ್ರಾಮದ ಶ್ರೀಕನ್ನೇಶ್ವರ ಆಶ್ರಮದಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ಎರಡು ದಿನಗಳ ಕಾಲ ನಡೆದ ಪೂಜಾ ಕಾರ್ಯಗಳು ಭಾನುವಾರ ಸ್ವಾಮಿಯ ಭವ್ಯ ರಥೋತ್ಸವದ ಮೂಲಕ ಸಾವಿರಾರು ಭಕ್ತರು ಸಂಪನ್ನರಾದರು.
ಶನಿವಾರ ರಾತ್ರಿ ಆಶ್ರಮದ ಶ್ರೀಮಲ್ಲಪ್ಪಸ್ವಾಮೀಜಿ ಪೂಜಾ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.‌ ರಾಜ್ಯದ ನಾನಾ ಕಡೆಯಿಂದ ಬಂದಿದ್ದ ಭಕ್ತರು ಇಡೀ ರಾತ್ರಿ ಶಿವನಾಮ‌ಸ್ಮರಣೆ ಮಾಡಿದರು. ಸ್ವಾಮೀಜಿಯವರ ಶಿವನೃತ್ಯವನ್ನು ಎಲ್ಲರೂ ಕಣ್ತುಂಬಿಕೊಂಡರು. ಭಾನುವಾರ ಹಲವಾರು ಕಲಾತಂಡಗಳೊಂದಿಗೆ ರಥೋತ್ಸವ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಲ್ಲಪ್ಪಸ್ವಾಮೀಜಿ, ಗ್ರಾಮೀಣ ಭಾಗದಲ್ಲಿ ನಡೆಯುವ ಆಚರಣೆ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಆಚರಣೆಗಳಾಗಿವೆ. ಶಿವರಾತ್ರಿ ಹಬ್ಬ ಶಿವನ ಆರಾಧನೆ ಮಾಡುವ ಒಂದು ಸುಧಿನ. ಪರಮಾತ್ಮನನ್ನು ಇಡೀ ರಾತ್ರಿ‌ ನೆನೆದರೆ ಎಲ್ಲಾ ಸಂಕಷ್ಟಗಳು ದೂರವಾಗಿ ನೆಮ್ಮದಿಯ ಜೀವನ‌ ಸಿಗಲಿದೆ. ಈ ನಿಟ್ಟಿನಲ್ಲಿ ಎಲ್ಲರಿಗೂ ಸದ್ಗತಿ ದೊರೆಯಬೇಕು ಎಂಬ ಉದ್ದೇಶದಿಂದ ವಿಶೇಷ ಪೂಜೆ ನಡೆಸಲಾಗಿದೆ ಎಂದರು.

ಶಾಸಕ ಟಿ.ರಘುಮೂರ್ತಿ ಮಾತನಾಡಿ, ನಾಡಿನೆಲ್ಲೆಡೆ ಇಂದು ಶಿವನಾಮ ಸ್ಮರಣೆ ನಡೆಯುತ್ತಿದೆ. ಶ್ರದ್ದಾಭಕ್ತಿಯಲ್ಲಿ ಭಕ್ತರು ಮಿಂದೆದ್ದಾರೆ. ನಾಡಿನ ಸಮಸ್ತ ಜನರು ಆರೋಗ್ಯ ನೀಡಲಿ. ದೇವರ ಕೃಪೆಯಿಂದ ಕ್ಷೇತ್ರದಲ್ಲಿ ಉತ್ತಮ ಮಳೆಯಿಂದ ನೀರಿನ ಸಮಸ್ಯೆ ಬಗೆಹರಿದಿದೆ. ಕೃಷಿ ಚಟುವಟಿಕೆಗಳಲ್ಲಿ ಉತ್ತಮ ಪ್ರೇರಣೆ ದೊರಕಿದೆ. ಅದಲ್ಲದೆ ಸಾವಿರಾರು ಭೂ ಪ್ರದೇಶ ನೀರುಣಿಸುವ ವೇದಾವತಿ ನದಿ ತುಂಬಿ ಹರಿಯುತ್ತಿದೆ. ಇದರಿಂದ ಜನರು, ಜಾನುವಾರುಗಳು ಉತ್ತಮ ಜೀವನ ನಡೆಸುವಂತಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ‌ ಪ್ರಧಾನ ಕಾರ್ಯದರ್ಶಿ ಬಾಳೆಮಂಡಿ ರಾಮದಾಸ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಎನ್.ಓಬಳೇಶ್, ರಂಗಸ್ವಾಮಿ, ನಿರ್ಗಮನ ತಹಶೀಲ್ದಾರ್ ಎನ್.ರಘುಮೂರ್ತಿ ಮುಂತಾದವರು ಇದ್ದರು.

[t4b-ticker]

You May Also Like

More From Author

+ There are no comments

Add yours