ದೇಶ ರಕ್ಷಣೆ, ದೇಶಾಭಿಮಾನ ಎಲ್ಲರಲ್ಲೂ ಮೂಡಬೇಕು: ಶಾಸಕ ಟಿ.ರಘುಮೂರ್ತಿ

 

ಚಳ್ಳಕೆರೆ-15 ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಮಹನೀಯರನ್ನು ಪ್ರತಿನಿತ್ಯವೂ ಸ್ಮರಿಸಬೇಕು. ದೇಶ ರಕ್ಷಣೆ, ದೇಶಾಭಿಮಾನ ಎಲ್ಲರಲ್ಲೂ ಮೂಡಬೇಕು ಎಂದು ಶಾಸಕ ಟಿ.ರಘುಮೂರ್ತಿ (Raghumurthy mla
ಹೇಳಿದರು.
 ನಗರದ ಬಿಸಿನೀರು ಮುದ್ದಪ್ಪ ಸರ್ಕಾರಿ ಪ್ರೌಢಶಾಲಾ ಬಯಲು ರಂಗಂದಿರದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಯೋಜಿಸಿದ್ದ76ನೇ ಸ್ವಾತಂತ್ರ್ಯೊತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸಂವಿಧಾನ ನಮ್ಮ ಎಲ್ಲಾ ರೀತಿಯ ಹಕ್ಕು ಕಲ್ಪಿಸಿದೆ. ಅದನ್ನು ಪ್ರತಿಯೊಬ್ಬರೂ ಉತ್ತಮ ರೀತಿಯಲ್ಲಿ ಸದ್ಭಳಕೆ ಮಾಡಿಕೊಳ್ಳಬೇಕು. ರಾಷ್ಟ್ರ ಪ್ರೇಮದ ಬಗ್ಗೆ ವಿದ್ಯಾರ್ಥಿಗಳಲ್ಲಿ ಬೆಳೆಸುವ ಕೆಲಸ ಎಲ್ಲರೂ ಮಾಡಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಳ್ಳಿಯಿಂದ ದಿಲ್ಲಿವರೆಗೆ ಸರ್ವರಿಗೂ ಸಮಪಾಲು, ಸಮಬಾಳು ಸಿಗುವಂತಾಗಬೇಕು, ಇಂದಿನ ಯುವ ಪೀಳಿಗೆ ಮಹಾತ್ಮ ಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್ ಲಗಂಗಾಧರ ತಿಲಕ್, ಭಗತ್ ಸಿಂಗ್, ಸಂಗೊಳಿರಾಯಣ ಸೇರಿದಂತೆ ಮಹಾನ್ ದೇಶ ಪ್ರೇಮಿಗಳ ಬಗ್ಗೆ ತಿಳಿಸಸಬೇಕು.
ನಮ್ಮ ಕಾಂಗ್ರೆಸ್ ಸರ್ಕಾರದಲ್ಲಿ ಸರ್ವರಿಗೂ ಸಮಪಾಲು, ಸಮಬಾಳು ಬೀಡಲು ಸಾಧ್ಯ‌‌. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಐದು ಗ್ಯಾರಂಟಿಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ. ಪ್ರತಿಯೊಬ್ಬರಿಗೂ ಗೃಹಜ್ಯೋತಿ, ಗೃಹಲಕ್ಷ್ಮಿ, ಶಕ್ತಿಯೋಜನೆ, ಯುವ ನಿಧಿ, ಅನ್ನಭಾಗ್ಯ ಯೋಜನೆಗಳನ್ನು ಪ್ರತಿಮನೆಗೂ ತಲುಪಿಸುವ ಮೂಲಕ ಸರ್ವಜನರಿಗೂ ಸಮಬಾಳು ನೀಡಿದ ಪಕ್ಷವಾಗಿದೆ‌. ನನ್ನಗೆ ಮತ‌ನೀಡಿ ಹ್ಯಾಟ್ರಿಕ್ ಸಾಧನೆ ಮಾಡಲು ಸಹಕರಿಸಿದ ಪ್ರತಿಯೊಬ್ಬರಿಗೂ ಅಭಿನಂದನೆ ಸಲ್ಲಿಸುವೆ. ಜನರು ನೀಡಿದ ಮತದಿಂದ ಇಂದು 11ನೇ ಸ್ವಾತಂತ್ರ್ಯ ದಿನಾಚರಣೆಯಲಿ ಭಾಗವಹಿಸಿದ್ದೇನೆ. ನಿಮ್ಮ ಋಣವನ್ನು ತೀರಿಸುವೆ ಎಂದರು. (challakere )
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ, ತಹಶೀಲ್ದಾರ್ ರೇಹಾನ್ ಪಾಷ ಮಾತನಾಡಿ, ರಾಷ್ಟ್ರೀಯ ಹಬ್ಬಗಳನ್ನು ಪ್ರತಿಯೊಬ್ಬರು ಮನೆಯ ಹಬ್ಬದಂತೆ ಆಚರಿಸಿ, ಸ್ವಾತಂತ್ರ್ಯ ಹೋರಾಟಕ್ಕಾಗಿ ಮಡಿದ ಪ್ರತಿಯೊಬ್ಬರನ್ನೂ ಪ್ರತಿನಿತ್ಯ ಸ್ಮರಿಸಬೇಕು, ಬಿಟ್ರಿಷರ ದಾಸ್ಯದಿಂದ ನಮಗೆ ಮುಕ್ತಿ ಕೊಡಿಸಲು ಸಾಲು, ಸಾಲು ಜೀವಗಳು ಕೊನೆಗೊಂಡಿವೆ ಅದರ ಫಲವಾಗಿ ಇಂದು ನಾವು ಉತ್ತಮ ಜೀವನ ನಡೆಸುತ್ತಿದ್ದೇವೆ ಎಂದರು.
ನಗರಸಭಾ ಸದಸ್ಯರಾದ ಟಿ.ಮಲ್ಲಿಕಾರ್ಜುನ, ಕವಿತಾಬೋರಯ್ಯ, ಟಿ.ಶಿವಕುಮಾರ್, ಓ.ಸುಜಾತ, ಸುಮಭರಮಣ್ಣ, ಎಸ್.ಜಯಣ್ಣ, ಜಿ.ಗೋವಿಂದ, ಜಯಲಕ್ಷ್ಮಿ, ಎಂ.ನಾಗವೇಣಿ, ಸುಮಕ್ಕ, ಡಿ.ನಿರ್ಮಲ, ಎಂ.ಸಾವಿತ್ರಮ್ಮ, ಎಚ್.ಸಿ.ವಿರೂಪಾಕ್ಷಿ, ಆರ್.ಮಂಜುಳಾ, ಚಳ್ಳಕೆರೆರಪ್ಪ, ಬಿ.ಟಿ.ರಮೇಶಗೌಡ, ಕೆ.ವೀರಭದ್ರಯ್ಯ, ಜೈತುಂಬಿ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.
[t4b-ticker]

You May Also Like

More From Author

+ There are no comments

Add yours