ಶ್ರೀ ಅಹೋಬಲ ಟಿವಿಎಸ್ ನಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ 

 

ಚಿತ್ರದುರ್ಗ: ನಗರದ ತುರುವನೂರು ರಸ್ತೆಯಲ್ಲಿರುವ ಶ್ರೀ ಅಹೋಬಲ ಟಿವಿಎಸ್ ಶೋ ರೂಂ ನಲ್ಲಿ 77 ನೇ ಸ್ವಾತಂತ್ರ್ಯ ದಿನಾಚರಣೆ ಧ್ವಜರೋಹಣವನ್ನು ವೇದಾಂತ ಆಸ್ಪತ್ರೆಯ ಡಾ.ತೇಜಸ್ವಿ ಅವರು ನೆರವೇರಿಸಿದರು.
ಈ‌ ಸಂದರ್ಭದಲ್ಲಿ ಮಾತನಾಡಿದ ಡಾ.ತೇಜಸ್ವಿ ಅವರು ಶಿಕ್ಷಣ ಮತ್ತು ಆರೋಗ್ಯ ಸುಧಾರಣೆಯ ಕಡೆ ಹೆಚ್ಚು ಆದ್ಯತೆ ನೀಡಿದರೇ ದೇಶ ಅಭಿವೃದ್ಧಿ ಕಡೆ ಹೆಜ್ಜೆ ಹಾಕಲು ಸಹಕಾರಿಯಾಗಿದೆ. ಸ್ವಾತಂತ್ರ್ಯ ದೊರಕಿ 77 ವರ್ಷಗಳು ಕಳೆದರು ಸಹ ಹಲವು ಕ್ಷೇತ್ರದಲ್ಲಿ ಇನ್ನು ಹೆಚ್ಚಿನ ಸುಧಾರಣೆ ಅವಶ್ಯಕತೆ ಇದೆ. ದೇಶದಲ್ಲಿ ಉದ್ಯೋಗ ಸೃಷ್ಟಿಸಲು ಹೆಚ್ಚು ಒತ್ತು ನೀಡುವ ಅವಶ್ಯಕತೆ ಇದೆ. ದೇಶ ಅಭಿವೃದ್ಧಿ ಕಡೆ ಹೆಜ್ಜೆ ಹಾಕುತ್ತಿದ್ದು ಮತ್ತಷ್ಟು ವೇಗ ನೀಡಬೇಕು ಎಂದು ತಿಳಿಸಿದರು.
ಉಪಾನ್ಯಸಕ ವಿಶ್ವನಾಥ್ ಮಾತನಾಡಿ ದೇಶದಲ್ಲಿ  ದ್ವೇಷ ಭಾವನೆಗಳು ಹೆಚ್ಚುತ್ತಿದ್ದು ನಾವೆಲ್ಲರೂ ಭಾವೈಕ್ಯತೆಯಿಂದ ಬದುಕ ನಡೆಸಬೇಕು. ಸ್ವಾತಂತ್ರ್ಯ ದಿನಾಚರಣೆ ಆಚರಣೆ ಅರ್ಥ ಬರಲು ನಮ್ಮಿಂದ ಬದಲಾವಣೆ ಆಗಬೇಕು‌. ದ್ವೇಷ ಅಸಹನೀಯ ಭಾವನೆ ತೊರೆದು ಎಲ್ಲಾರೂ ಕೂಡಿ ಬಾಳಬೇಕು ಎಂದರು.
ಶ್ರೀ ಅಹೋಬಲ ಟಿವಿಎಸ್ ಮಾಲೀಕ ಪಿ.ವಿ.ಅರುಣ್ ಮಾತನಾಡಿ ಭಾರತ ದೇಶ ಜಾತ್ಯತೀತ ರಾಷ್ಟ್ರವಾಗಿದೆ. ಆದರೆ ನಮ್ಮಲ್ಲಿ ದಿನದಿಂದ ದಿನಕ್ಕೆ ಜಾತಿ ಭಾವನೆ ಹೆಚ್ಚುತ್ತಿದೆ. ಜಾತಿ ಪದ್ದತಿ ನಿರ್ಮೂಲನೆಯಾಗಬೇಕು. ಸರ್ಕಾರಗಳು  ಬಡವರು ಮಧ್ಯಮ ವರ್ಗದ ಜನರನ್ನು ಸಬಲರಾಗಿಸುವ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಆರ್ಥಿಕವಾಗಿ ಬಲಿಷ್ಠಗೊಳಿಸುವ ಕಡೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗಮನ ಹರಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ  ಬ್ಯಾಂಕ್ ಕಾಲೋನಿ ಮೋಹನ್, ಎಸ್.ಪಿ.ಮಂಜುಳ,  ಜನರಲ್ ಮ್ಯಾನೇಜರ್ ವಿದ್ಯಾದರ್, ಸೇಲ್ಸ್ ಮ್ಯಾನೇಜರ್ ರವಿ, ಸಾಧಿಕ್, ಶ್ರೀನಿವಾಸ್ ಮತ್ತು ಟಿವಿಎಸ್ ಬಳಗ ಸಿಬ್ಬಂದಿಗಳು ಹಾಜರಿದ್ದರು.
[t4b-ticker]

You May Also Like

More From Author

+ There are no comments

Add yours