ಗ್ರಾಮ ಲೆಕ್ಕಾಧಿಕಾರಿ ಸಾವಿಗೆ ಟ್ವಿಸ್ಟ್| ಕುಟುಂಬಸ್ಥರು ಮಾಡಿದ ಆರೋಪ ಏನು

 

ಚಿತ್ರದುರ್ಗ: ನೇಣು ಬಿಗಿದ ಸ್ಥಿತಿಯಲ್ಲಿ ಚಳ್ಳಕೆರೆ ತಾಲೂಕಿನ  ಗ್ರಾಮ ಲೆಕ್ಕಾಧಿಕಾರಿಯ ಶವ ನಗರದ ಹೊರವಲಯದ  ಉಪಾಧ್ಯ ಹೋಟೆಲ್ ಹಿಂಭಾಗದಲ್ಲಿ  ಶುಕ್ರವಾರ ಪತ್ತೆಯಾಗಿತ್ತು.

ನಗರದ ಕೆಳಗೋಟಿ ನಾಗರಾಜ್ (48) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಶವ ಕೊಳೆತ ಸ್ಥಿತಿಯಲ್ಲಿದ್ದು, ದೇಹದ ಅಂಗಾಂಗಳನ್ನು ಪ್ರಾಣಿಗಳು ಕಚ್ಚಿ ತಿಂದಿವೆ. ವಾರದ ಹಿಂದೆಯೇ ಮೃತಪಟ್ಟಿರುವ ಸಾಧ್ಯತೆ ಇದೆ ಎಂಬುಂತೆ ಶವದ ಸ್ಥಿತಿ ಇತ್ತು.

ಮೃತ ನಾಗರಾಜ್ ಅವರು ಚಳ್ಳಕೆರೆ ತಾಲ್ಲೂಕಿನ ಭರಮಸಾಗರ ಗ್ರಾಮ ಲೆಕ್ಕಾಧಿಕಾರಿಯಾಗಿದ್ದರು. ಚಳ್ಳಕೆರೆ ತಾಲ್ಲೂಕು ಕಚೇರಿಯಲ್ಲಿಯೂ ಕಾರ್ಯನಿರ್ವಹಿಸಿದ್ದರು.ನಾಗರಾಜ್  ನಾಪತ್ತೆಯಾಗಿರುವ ಕುರಿತು ಚಳ್ಳಕೆರೆ ಠಾಣೆಯಲ್ಲಿ ಜ.5ರಂದು ದೂರು ದಾಖಲಾಗಿತ್ತು.

ಇದೊಂದು ಆತ್ಮಹತ್ಯೆಯಂತೆ ಕಂಡುಬಂದಿದ್ದು, ಸ್ಥಳಕ್ಕೆ ಬಡಾವಣೆ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಮರವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು ಮೃತರನ್ನು ಚಳ್ಳಕೆರೆ ತಾಲೂಕಿನ  ಲೆಕ್ಕಾಧಿಕಾರಿ ನಾಗರಾಜ್ ಅಂತಾ ಗುರುತಿಸಲಾಗಿದೆ.

ಇದನ್ನೂ ಓದಿ: ಚಾಲಕನ ನಿಯಂತ್ರಣ ತಪ್ಪಿ ಗ್ಯಾಸ್ ಸಿಲಿಂಡರ್ ಲಾರಿ ಅಪಘಾತ

ಇನ್ನು ಶವದ ಮರಣೋತ್ತರ ಪರೀಕ್ಷೆ ಬಳಿಕ ನಾಗರಾಜ್ ಕುಟುಂಬಸ್ಥರಿಗೆ ಶವ ಹಸ್ತಾಂತರಿಸಲಾಗಿದೆ. ಮೇಲಾಧಿಕಾರಿಗಳ ಕಿರುಕುಳ ಆರೋಪಕ್ಕೆ ಸಾವಿಗೆ ಶರಣಾಗಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours