ಸ್ವಚ್ಚತೆ ಜೊತೆಯಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯವಾಗಿರಲಿ: ಶಾಸಕ ಟಿ.ರಘುಮೂರ್ತಿ.

 

ಚಳ್ಳಕೆರೆ: ಜನರು ಸಾಮಾಜಿಕ ಅಂತರ, ಮಾಸ್ಕ್ ಮತ್ತು ಸ್ವಚ್ಚತೆಯನ್ನು ಕಾಪಡಿ ಮನೆಯಲ್ಲಿ ಇರಿ ಎಂದು ಶಾಸಕ ಟಿ.ರಘುಮೂರ್ತಿ ಜನರಿಗೆ ಕಿವಿ ಮಾತು ಹೇಳಿದರು.

ಚಳ್ಳಕೆರೆ ತಾಲೂಕು ಬುಡ್ನಹಟ್ಟಿಯಲ್ಲಿ,ನಗರಂಗೆ, ದೊಡ್ಡೇರಿ, ದೇವರ ಮರಿಕುಂಟೆಯಲ್ಲಿ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಗಳೊಂದಿಗೆ ಕೋವಿಡ್ ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಾತನಾಡಿದರು.

ವ್ಯಾಪಕವಾಗಿ ಹರಡುತ್ತಿರುವ ಕೊರೋನಾ ಮಹಾಮಾರಿಯನ್ನು ನಿಯಂತ್ರಿಸುವ ಸಲುವಾಗಿ ಇಂದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಬುಡ್ನನಹಟ್ಟಿ ಗ್ರಾಮದಲ್ಲಿ ಇಂದು ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ ರಘುಮೂರ್ತಿ ಅವರ ನೇತೃತ್ವದಲ್ಲಿ ಇಂದು ಕೋವಿಡ್ ಪ್ರಗತಿ ಪರಿಶೀಲನೆ ಸಭೆ ನಡೆಸಲಾಯಿತು.

ಕೋವಿಡ್ ಪ್ರಗತಿ ಪರಿಶೀಲನೆ ಸಭೆಯಲ್ಲಿ ಚರ್ಚಿಸಲಾದ ಪ್ರಮುಖ ವಿಷಯಗಳು.

*ಗ್ರಾಮೀಣ ಭಾಗದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್ ಮಟ್ಟದಲ್ಲಿ, ಕೋವಿಡ್ ಟೆಸ್ಟ್ ಗಳು ಹೆಚ್ಚಿಸುವುದು.

*ಕೋವಿಡ್ ಸೋಂಕಿತರನ್ನು ಕೋವಿಡ್ ಸೆಂಟರ್ ಗೆ ವರ್ಗಹಿಸುವುದು, ಕೋವಿಡ್ ಸೋಂಕಿತರ ಪ್ರೈಮರಿಯಲ್ಲಿಸುವವರನ್ನು ರ್ಯಾಪಿಡ್ ಟೆಸ್ಟ್ ಗೆ ಒಳಪಡಿಸುವುದು.

*ಗ್ರಾಮೀಣ ಭಾಗದಲ್ಲಿ ಕೋವಿಡ್ ಬಗ್ಗೆ ಜಾಗೃತಿ ಮೂಡಿಸುವ ಮೂಲಕ, ಕೋವಿಡ್ ಲಸಿಕೆ ಹಾಕಿಸಲು ಒತ್ತು ನೀಡುವುದು. ಕೋವಿಡ್ ಲಸಿಕೆ ಪಡೆದವರಿಗೆ ಜ್ವರ ಹಾಗೂ ಸುಸ್ತು ಹಾಗೂ ಆರೋಗ್ಯದ ಬಗ್ಗೆ ಜನರಲ್ಲಿ ಭಯವಿದ್ದು, ಸ್ಥಳೀಯ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವುದು. ಹಾಗೂ ಲಸಿಕೆಗೆ ಒತ್ತು ನೀಡುವುದು.

*ಗ್ರಾಮಗಳಲ್ಲಿ ಸ್ವಚ್ಚತೆ ಬಗ್ಗೆ ಒತ್ತು ನೀಡುವುದು. ಗ್ರಾಮಗಳಲ್ಲಿ ಪ್ರತಿ ಗಲ್ಲಿಗಳಲ್ಲಿ ಸ್ಯಾನಿಟೈಸರ್ ಮಾಡಿಸುವುದು. ಚರಂಡಿ ಹಾಗೂ ಮೋರಿಗಳನ್ನು ಸ್ವಚ್ಛತೆ ಮಾಡಿಸುವುದು. ಗ್ರಾಮಗಳಲ್ಲಿನ ಜಿಲ್ಲೆಗಳನ್ನು ಸ್ಥಳಾಂತರಿಸುವುದು. ಗ್ರಾಮಗಳಲ್ಲಿ ಸುತ್ತ ಮುತ್ತ ಬೆಳೆದಿರುವು ಜಾಲಿ ಗಿಡಗಳು ಹಾಗೂ ಗಿಡಗೆಂಟೆಗಳನ್ನು ತೆರವು ಗೊಳಿಸಲು ಒತ್ತು ನೀಡುವುದು.

*ಗ್ರಾಮೀಣ ಭಾಗದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ದುರಸ್ತಿ ಮಾಡಿಸುವುದು, ಗ್ರಾಮಗಳಿಗೆ ಕುಡಿಯುವ ಅವಶ್ಯಕತೆ ಇದ್ದಲ್ಲಿ ನೂತನ ಬೋರ್ ವೇಲ್ ಪಾಯಿಂಟ್ ಮಾಡಿಸಿ ನೂತನ ಬೋರ್ ವೇಲ್ ಕೊರೆಸಿ ಕುಡಿಯುವ ನೀರನ್ನು ಒದಗಿಸುವು.

*ರೈತರ ಅನುಕೂಲಕ್ಕಾಗಿ ಹಾರ್ಟಿಕಲ್ಚರ್ ಹಾಗೂ ಅಗ್ರಿಕಲ್ಚರ್ ಅಧಿಕಾರಿಗಳ ಜಾಗೃತರಾಗಿ ಕಾರ್ಯನಿರ್ವಹಿಸುವುದು ಹಾಗೂ ರೈತರ ಬೆಳೆಗಳಿಗೆ ಬೆಂಬಲ ಬೆಲೆ ಒದಗಿಸುವುದು.

*ಗ್ರಾಮೀಣ ಭಾಗದಲ್ಲಿನ ವೃದ್ಧರು, ವಿಧವೆಯರು, ವಿಕಲಾಂಗರು ಸೇರಿದಂತೆ ವಿಶೇಷ ಜನರಿಗೆ ದೊರೆಯಬೇಕಾಗಿರುವ ವೇತನವನ್ನು ಶೀಘ್ರವಾಗಿ ಬಿಡುಗಡೆಗೊಳಿಸುವುದು. ಹೊಸದಾಗಿ ಸೇರ್ಪಡೆಗೊಳ್ಳಲಿರುವ ಪಾಲನುಭವಿಗಳನ್ನು ಅಯ್ಕೆ ಮಾಡುವುದು.

ಗ್ರಾಮೀಣ ಭಾಗದಲ್ಲಿ ಪಡಿತರ ವಿತರಣೆ ಒತ್ತು ನೀಡುವುದು, ಗ್ರಾಮೀಣ ಭಾಗದಲ್ಲಿ ಕೋವಿಡ್ ಹೆಚ್ಚುತ್ತಿರುವ ಕಾರಣ ಪಡಿತರಿಗೆ ತಂಬಿಬ್ ಕೆಳದೆ ಎಲ್ಲಿರಿಗೂ ಪಡಿತರ ಸಾಮಗ್ರಿಗಳನ್ನು ವಿತರಣೆ ಮಾಡುವುದು. ಹಾಗೂ ಪಡಿತರ ಸಾಮಾಗ್ರಿಗಳಲ್ಲಿ ಕ್ವಾಲಿಟಿ ಕಾಪಾಡುವುದು.

ಒಟ್ಟಾರೆಯಾಗಿ ಕೋವಿಡ್ ನಿಯಂತ್ರಿಸಲು ತಾಲೂಕು ಮಟ್ಟದ ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯನಿರ್ಹಹಿಸುವುದು ಹಾಗೂ ಕೋವಿಡ್ ನಿಯಂತ್ರಿಸಲು ಶ್ರಮಿಸುವಂತೆ ಎಚ್ಚರಿಕೆ ನೀಡಲಾಯಿತು.

ಈ ಸಭೆಯಲ್ಲಿ ಗ್ರಾಮ ಪಂಚಾಯತಿ ಸದಸ್ಯರು ಗ್ರಾಮಲೆಕ್ಕಾಧಿರಿಗಾಳು, ಗ್ರಾಮೀಣ ಅಭಿವೃದ್ಧಿ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಅಧಿಕಾರಿಗಳು, ಪೊಲೀಸ್ ಇಲಾಖೆ ಅಧಿಕಾರಿಗಳು ಸೇರಿದಂತೆ ತಾಲೂಕು ಮಟ್ಟದ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours