ಟಿಕೆಟ್ ಫೈಟ್ ನಲ್ಲಿ ಗೆದ್ದ ಮಾಜಿ ಸಂಸದ ಚಂದ್ರಪ್ಪ ಚಿತ್ರದುರ್ಗ ಅಭ್ಯರ್ಥಿ

 

ಚಿತ್ರದುರ್ಗ : (chitradurga) ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ  ಮಾಜಿ ಸಂಸದ  ಬಿ.ಎನ್. ಚಂದ್ರಪ್ಪ ಅವರಿಗೆ ಕಾಂಗ್ರೆಸ್ ಟಿಕೆಟ್  ನೀಡುವ ಮೂಲಕ‌ ಕೋಟೆ ನಾಡು ಚಿತ್ರದುರ್ಗಕ್ಕ ಪ್ರಬಲ ಅಭ್ಯರ್ಥಿ ಕಣಕ್ಕೆ  ಬಿಜೆಪಿ ಪಕ್ಷಕ್ಕೆ ಪ್ರಬಲ ಪೈಪೋಟಿ ನೀಡಲು ಸಜ್ಜಾಗಿದೆ.
ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಅವರಿಗೆ  ಕೇಂದ್ರದ ಮಾಜಿ ಸಚಿವೆ, ಡಿ.ಕೆ. ತಾರಾದೇವಿಯವರು ರಾಜಕೀಯ ಗುರುಗಳು. ಗುರುಗಳ ಮಾರ್ಗದರ್ಶನ ಮೂಲಕ ಪ್ರಥಮ ಬಾರಿಗೆ ಚಂದ್ರಪ್ಪ ಅವರು ಜಿಲ್ಲಾ ಪಂಚಾಯ್ತಿ ಸದಸ್ಯನಾಗಿ ಆಯ್ಕೆಯಾದರು.
ನಂತರ ಉಪಾಧ್ಯಕ್ಷರಾಗಿದ್ದ ಚಂದ್ರಪ್ಪನವರು ಬದಲಾದ ದಿನಗಳಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಸಂಘಟನಾತ್ಮಕ ಕೆಲಸ ನಿರ್ವಹಿಸಿದರು. ಕಾಂಗ್ರೆಸ್ ನಲ್ಲಿ ಬೆಳೆದ ಬಿ.ಎನ್. ಚಂದ್ರಪ್ಪ 1989 ರಲ್ಲಿ ಕೆಪಿಸಿಸಿಯಲ್ಲಿ ಜಂಟಿಕಾರ್ಯದರ್ಶಿಯಾಗಿ ಸ್ಥಾನ ಪಡೆದರು. ಆ ನಂತರ ಹಂತ ಹಂತವಾಗಿ ಹಲವಾರು ಹುದ್ದೆಯಲ್ಲಿ ಕಾರ್ಯ ನಿರ್ವಹಿಸುವ ಮೂಲಕ ಪಕ್ಷಕ್ಕೆ ಸೇವೆಯನ್ನ ಸಲ್ಲಿಸುತ್ತಾ ಮುನ್ನಡೆಯುತ್ತಿದ್ದಾರೆ.
ಲಿಡ್ಕರ್ ಅಧ್ಯಕ್ಷರಾಗಿಯೂ ಆಯ್ಕೆಯಾದ ಚಂದ್ರಪ್ಪನವರು ಸಾಮಾನ್ಯ ಕಾರ್ಯಕರ್ತನಂತೆ ಇದ್ದರು. ಆದರೆ 2008ರಲ್ಲಿ ವಿಧಾನಸಭೆಗೆ ಮೊದಲ ಬಾರಿಗೆ ಮೂಡಿಗೆರೆಯಿಂದ ಸ್ಪರ್ಧಿಸುವ ಅವಕಾಶ ದೊರೆಯಿತು.
ಅನಿರೀಕ್ಷಿತವಾಗಿ ಟಿಕೆಟ್
2008ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಚಂದ್ರಪ್ಪ ಅವರಿಗೆ ಅನಿರೀಕ್ಷಿತವಾಗಿ ಟಿಕೆಟ್ ಸಿಕ್ಕಿತು. ಬಯಸದೆ ಬಂದ ಭಾಗ್ಯವನ್ನು ಚಂದ್ರಪ್ಪನವರು ಸದುಪಯೋಗಪಡಿಸಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಿದರು. ಆದರೆ ಕೇವಲ ಐದಾರು ಸಾವಿರ ಮತಗಳಿಂದ ಸೋಲು ಅನುಭವಿಸಿದರು.
ಚಿತ್ರದುರ್ಗ ಲೋಕಸಭೆಗೆ ಎಂಟ್ರಿ ಕೊಟ್ಟ ಚಂದ್ರಪ್ಪ
ಚಿತ್ರದುರ್ಗ ಲೋಕಸಭಾ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾಗಿರುವುದರಿಂದ ಚಿತ್ರದುರ್ಗದಿಂದ 2014ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಚಂದ್ರಪ್ಪಗೆ ಟಿಕೆಟ್ ದೊರೆಯಿತು. ಚಿತ್ರದುರ್ಗ ಕಾಂಗ್ರೆಸ್ ಭದ್ರ ಕೋಟೆಯಾಗಿತ್ತು. ಇಲ್ಲಿ 2009ರಲ್ಲಿ ಬಿಜೆಪಿಯ ಜನಾರ್ದನ ಸ್ವಾಮಿ ಕಮಲ ಬಾವುಟ ಹಾರಿಸಿ, ಮರು ಆಯ್ಕೆಗೆ ಬಯಸಿದ್ದರು. ಆದರೆ ಚಿತ್ರದುರ್ಗಕ್ಕೆ ಎಂಟ್ರಿ ಕೊಟ್ಟ ಬಿ.ಎನ್.ಚಂದ್ರಪ್ಪಗೆ ಸುಮಾರು ಒಂದು ಲಕ್ಷಕ್ಕಿಂತ ಅಧಿಕ ಮತಗಳ ಲೀಡ್  ದೊರೆತು, ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾಗಿ ಚಿತ್ರದುರ್ಗವನ್ನು ಕಾಂಗ್ರೆಸ್ ವಶಕ್ಕೆ ಪಡೆದುಕೊಂಡರು.
 2019 ರ ಚುನಾವಣೆಯಲ್ಲಿ ಚಂದ್ರಪ್ಪಗೆ ಸೋಲು
2019 ರಲ್ಲಿ ಜರುಗಿದ ಚುನಾವಣೆಯಲ್ಲಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗಿಳಿದ ಚಂದ್ರಪ್ಪ ಅವರಿಗೆ  ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದ್ದ ಎ. ನಾರಾಯಣಸ್ವಾಮಿ ವಿರುದ್ದ ಸೋಲು ಅನುಭವಿಸಿದರು.
ಈ‌ ಬಾರಿ ಸಹ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಮತ್ತೊಮ್ಮೆ ಬಿ.ಎನ್.ಚಂದ್ರಪ್ಪ ಅಭ್ಯರ್ಥಿ ಆಗಿದ್ದು  ಬಿಜೆಪಿ ಅಭ್ಯರ್ಥಿ ಇನ್ನೂ ಫೈನಲ್ ಆಗಿಲ್ಲ‌ ಆದರು ಸಹ ಬಿಜೆಪಿಗೆ ಪ್ರಬಲ ಪೈಪೋಟಿ ನೀಡಲು ಬಿ.ಎನ್.ಚಂದ್ರಪ್ಪ ಅವರಿಗೆ ಕಾಂಗ್ರೆಸ್ ಮಣೆ ಹಾಕಿದ್ದು ಜಿಲ್ಲೆಯಲ್ಲಿ ಯಾವ ರೀತಿ ಕೈ ರಣತಂತ್ರ ಹೆಣೆಯುತ್ತದೆ ಎಂಬುದು ಕಾದು ನೋಡಬೇಕಿದೆ.
ಕೈ ಟಿಕೆಟ್ ಗೆ ಭಾರೀ ಪೈಪೋಟಿ
ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಈ ಬಾರಿ ಕೈ ಟಿಕೆಟ್ ಫೈಟ್ ಜೋರಾಗಿತ್ತು. ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, 2009 ರ ಪರಾಜಿತ ಅಭ್ಯರ್ಥಿ ಜೆ.ಜೆ.ಹಟ್ಟಿ ತಿಪ್ಪೇಸ್ವಾಮಿ, ಅಬಕಾರಿ ಸಚಿವ ತಿಮ್ಮಾಪುರ  ಪುತ್ರ ವಿನಯ ತಿಮ್ಮಾಪುರ ನಡುವೆ ಟಿಕೆಟ್ ಫೈಟ್ ಏರ್ಪಟ್ಟಿತ್ತು.ಆದರೆ ಕೆಪಿಸಿಸಿ ಕಾರ್ಯಾಧ್ಯಕ್ಷರು ಮತ್ತು ಮಾಜಿ ಸಂಸದ ಚಂದ್ರಪ್ಪ ಅವರ ಕ್ಷೇತ್ರದಲ್ಲಿನ ಹಿಡಿತ ಮತ್ತು ಶಾಸಕರ ಬೆಂಬಲದಿಂದ  ಕಾಂಗ್ರೆಸ್ ಪಕ್ಷದ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
[t4b-ticker]

You May Also Like

More From Author

+ There are no comments

Add yours