ಚಳ್ಳಕೆರೆ: ಬೇಲಿಗೆ ಬೆಂಕಿ ಬಿದ್ದು ತಾಯಿ ಸೇರಿ ಇಬ್ಬರು ಮಕ್ಕಳು ಸಾವು

 

ಚಳ್ಳಕೆರೆ:challakere ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಮಲ್ಲಸಮುದ್ರ ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ ಬೇಲಿಗೆ ಬೆಂಕಿ ಬಿದ್ದು ಇಬ್ಬರು ಮಕ್ಕಳು, ತಾಯಿ ಸಜೀವ ದಹನವಾದ ಘಟನೆ ನಡೆದಿದೆ. ಇದು ಆತ್ಮಹತ್ಯೆಯಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಗ್ರಾಮದ ಲಾರಿಚಾಲಕ ತಿಪ್ಪೇಸ್ವಾಮಿ ಅವರ ಪತ್ನಿ ತಲಾರಿಮಾರಕ್ಕ (24), ಆಕೆಯ ಮಕ್ಕಳಾದ ಟಿ.ನಯನ್(4), ಹರ್ಷವರ್ಧನ್(2) ಸಾವಿಗೀಡಾದವರು.

ಇದನ್ನೂ ಓದಿ: ಅಪಘಾತ ಪರಿಹಾರ: ಅಸಂಘಟಿತ ಕಾರ್ಮಿಕರಿಂದ ಅರ್ಜಿ ಆಹ್ವಾನ

ಮನೆಯ ಪಕ್ಕದ ಕಣದ ಬೇಲಿಗೆ ಬೆಂಕಿ ಹೊತ್ತಿಕೊಂಡ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಆದರೆ, ಕೌಟುಂಬಿಕ ಸಮಸ್ಯೆ ಹಿನ್ನೆಲೆಯಲ್ಲಿ ಮಾರಕ್ಕನೇ ಕಣದ ಬೇಲಿಗೆ ಬೆಂಕಿ ಹಚ್ಚಿ ತನ್ನಿಬ್ಬರೂ ಮಕ್ಕಳನ್ನು ಬೆಂಕಿಗೆ ತಳ್ಳಿ ತಾನೂ ಬೆಂಕಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ತಳಕು ಪಿಎಸ್‌ಐ ಅಶ್ವಿನಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

[t4b-ticker]

You May Also Like

More From Author

+ There are no comments

Add yours