ಇಕೋ ಕಾರಲ್ಲಿ ಸಿಕ್ಕ 38 ಲಕ್ಷ ಹಣ,ಸೀಜ್ ಮಾಡಿದ ಅಧಿಕಾರಿಗಳು, ಅದು ಯಾರ ಹಣ ಗೊತ್ತೆ ?

 

ನಾಯಕನಹಟ್ಟಿ ಕ್ರಾಸ್ ಚೆಕ್‌ಪೋಸ್ಟ್ ಬಳಿ ಅನುಮತಿ ಇಲ್ಲದೆ ಸಾಗಾಟ ಮಾಡುತ್ತಿದ್ದ ೩೮ ಲಕ್ಷ ಹಣ ಮುಟ್ಟುಗೋಲು : ಅಧಿಕಾರಿಗಳಿಂದ ತೀರ್ವತಪಾಸಣೆ.

ಚಳ್ಳಕೆರೆ-೨೧ ನಗರದ ನಾಯಕನಹಟ್ಟಿ ಕ್ರಾಸ್‌ನ ತಪಾಸಣಾ ಕೇಂದ್ರದಲ್ಲಿ ಗುರುವಾರ ಮಧ್ಯಾಹ್ನ ಬಳ್ಳಾರಿ ಕಡೆಯಿಂದ ಇಕೋ ಕಾರ್‌ನಲ್ಲಿ ೩೮ ಲಕ್ಷ ಹಣ ಸಾಗಾಣಿಕೆಯಾಗುತ್ತಿದ್ದು ತಪಾಸಣೆ ನಡೆಸಿದ ಸಂದರ್ಭದಲ್ಲಿ ಸೂಟ್‌ಕೇಸ್ ಹಾಗೂ ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ಹಣ ಇರುವುದು ಕಂಡುಬಂದಿದೆ. ಕೂಡಲೇ ಚುನಾವಣೆ ಪ್ಲೆöಯಿಂಗ್ ಸ್ಕಾಂಡ್ ಅಧಿಕಾರಿಗಳು ತಹಶೀಲ್ಧಾರ್ ಮತ್ತು ಚುನಾವಣಾ ಇಲಾಖೆಗೆ ಮಾಹಿತಿ ನೀಡಿರುತ್ತಾರೆ. ಪರಿಶೀಲನಾ ಸಂದರ್ಭದಲ್ಲಿ ಹಣ ಸಾಗಾಟ ಮಾಡಲು ಅನುಮತಿ ಪಡೆಯದ ಕಾರಣ ಹಣ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ವಾಹನ ತಪಾಸಣೆ ನಡೆಸಿದ ಸಂದರ್ಭದಲ್ಲಿ ಕಾರಿನಲ್ಲಿದ್ದ ಮೂವರು ವ್ಯಕ್ತಿಗಳು ಮಾಹಿತಿ ನೀಡಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಹಣವಾಗಿದೆ, ಮಹಿಳಾ ಸ್ತಿçಶಕ್ತಿ ಸಂಘಗಳಿಗೆ ಸಾಲ ನೀಡಿ ಕಂತುಗಳ ರೂಪದಲ್ಲಿ ಹಿಂಪಡೆದ ಹಣವಾಗಿದೆ. ಇದನ್ನು ಬ್ಯಾಂಕ್‌ಗೆ ಜಮಾ ಮಾಡಬೇಕಿದ್ದು, ಸದರಿ ಹಣವನ್ನು ಸೂಟ್‌ಕೇಸ್ ಮೂಲಕ ಕಚೇರಿಗೆ ತಂದು ಅಲ್ಲಿಂದ ಬ್ಯಾಂಕ್‌ಗೆ ಜಮಾ ಮಾಡುವುದಾಗಿ ತಿಳಿಸಿದ್ದಾರೆ.
ತಹಶೀಲ್ದಾರ್ ರೇಹಾನ್ ಪಾಷ ಮತ್ತು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿ ಕುಮಾರಸ್ವಾಮಿ ಹಣ ಕಚೇರಿಗೆ ಸೇರಬೇಕಿದ್ದಾದರೂ ಈ ಹಣವನ್ನು ಸಾಗಾಟ ಮಾಡಲು ಯಾವುದೇ ಅನುಮತಿ ಪಡೆದಿಲ್ಲ. ಅನುಮತಿ ಇಲ್ಲದೆ ಹಣ ಸಾಗಾಟ ಮಾಡುವಂತಿಲ್ಲ. ಆದ್ದರಿಂದ ಸದರಿ ಹಣವನ್ನು ಮುಟ್ಟುಗೋಲು ಹಾಕಿಕೊಂಡು ಇಲ್ಲಿನ ಉಪಖಜಾನೆಯಲ್ಲಿ ಇಡಲಾಗುವುದು. ಸೂಕ್ತ ದಾಖಲಾತಿಗಳನ್ನು ನೀಡಿದ ನಂತರ ಹಣ ವಾಪಾಸ್ ಪಡೆಯಬಹುದಾಗಿದೆ ಎಂದರು.

ಇದನ್ನೂ ಓದಿ: ಟಿಕೆಟ್ ಫೈಟ್ ನಲ್ಲಿ ಗೆದ್ದ ಮಾಜಿ ಸಂಸದ ಚಂದ್ರಪ್ಪ ಚಿತ್ರದುರ್ಗ ಅಭ್ಯರ್ಥಿ

ಡಿವೈಎಸ್ಟಿ ಟಿ.ಬಿ.ರಾಜಣ್ಣ, ಠಾಣಾ ಇನ್ಸ್ಪೆಕ್ಟರ್ ಕೆ.ಕುಮಾರ್, ಪಿಎಸ್‌ಐ ಕೆ.ಸತೀಶ್‌ನಾಯ್ಕ, ಪೌರಾಯುಕ್ತ ಜೀವನ್‌ಮಟ್ಟಿಮನೆ,ಕಂದಾಯಾಧಿಕಾರಿ ಲಿಂಗೇಗೌಡ, ಗ್ರಾಮ ಲೆಕ್ಕಾಧಿಕಾರಿ ಪ್ರಕಾಶ್, ಚುನಾವಣಾ ಶಾಖೆ ಓಬಳೇಶ್ ಮುಂತಾದವರು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours