ಬೆಂಕಿಯಿಂದ ಮನೆ ಕಳೆದುಕೊಂಡ ಕುಟುಂಬಕ್ಕೆ ಇಮ್ಮಡಿ ಶ್ರೀಗಳಿಂದ ಸಾಂತ್ವನ

 

ಹಿರಿಯೂರು: ಬೆಂಕಿಯಿಂದ ಮನೆ ಕಳೆದುಕೊಂಡ ಹಿರಿಯೂರು ತಾಲ್ಲೂಕು ಗೌನಹಳ್ಳಿ ಗ್ರಾಮದ ಕರಿಯಮ್ಮ ಅವರ ಕುಟುಂಬಕ್ಕೆ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹಾಗೂ ಸಚಿವ ಡಿ.ಸುಧಾಕರ್ ಸಾಂತ್ವಾನ ಹೇಳಿದರು.chitradurga news 

ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲ್ಲೂಕು, ಗೌನಹಳ್ಳಿ ಗ್ರಾಮದ ಕರಿಯಮ್ಮ ಅವರ ಕುಟುಂಬ ವಾಸಿಸುತ್ತಿದ್ದ ಗುಡಿಸಲು ಮನೆ ಶುಕ್ರವಾರದಂದು ಗ್ಯಾಸ್ ಸ್ಪೋಟದಿಂದ ಭಸ್ಮವಾಗಿತ್ತು, ಗುಡಿಸಲಿನಲ್ಲಿ ಇದ್ದ ಧವಸ, ಧಾನ್ಯ ಬಟ್ಟೆ ಸೇರಿದಂತೆ ಎಲ್ಲಾ ವಸ್ತುಗಳು ಸುಟ್ಟು ಕರಕಲಾಗಿದ್ದವು.Hiriyur NeWS

ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮತ್ತು ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್‌ರವರು ಶುಕ್ರವಾರ ಭೇಟಿ ನೀಡಿ ಸಾಂತ್ವಾನ ಹೇಳುವುದರ ಜೊತೆಗೆ ತಲಾ ರೂ.೧೦,೦೦೦/-ಗಳ ಮೊತ್ತವನ್ನು ನೀಡಿದರು. ಭೋವಿ ಗುರುಪೀಠದಿಂದ ಕುಟುಂಬಕ್ಕೆ ಅಕ್ಕಿ, ರಾಗಿ ಸೇರಿದಂತೆ ಆಹಾರ ಧಾನ್ಯಗಳು ತರಕಾರಿ ಮತ್ತು ಕಾಳುಗಳನ್ನು ಕುಟುಂಬಕ್ಕೆ ನೀಡಿದರು. D.Sudhakar

ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಗುಡಿಸಲು ಕಳೆದುಕೊಂಡ ಕುಟುಂಬಕ್ಕೆ ವಸತಿ ಕಲ್ಪಿಸಲು ಶ್ರೀಗಳು ಸಚಿವರಿಗೆ ತಿಳಿಸಿದರು. ಸಚಿವರು ಕುಟುಂಬಕ್ಕೆ ವಸತಿ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವುದಾಗಿ ಹೇಳಿದರು.
ಶ್ರೀ ಕುಟುಂಬಕ್ಕೆ ಮಕ್ಕಳ ಶಿಕ್ಷಣವನ್ನ ಶ್ರೀಮಠದಿಂದ ಉಚಿತ ಶಿಕ್ಷಣ ಕೊಡಿಸಲಾಗುವುದು, ಶ್ರೀಮಠದ ಶಾಲೆಗೆ ಮಕ್ಕಳನ್ನು ಸೇರಿಸಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಿರಿಯೂರು ತಾಲ್ಲೂಕು ಭೋವಿ ಸಮಾಜದ ಸೂರಗೊಂಡನಹಳ್ಳಿ ಕೃಷ್ಣಮೂರ್ತಿ ಭೋವಿ ನಿಗಮದ ಮಾಜಿ ಸದಸ್ಯರಾದ ಕಾಳಘಟ್ಟದ ಹನುಮಂತಪ್ಪ, ನಗರಸಭೆ ಮಾಜಿ ಸದಸ್ಯರಾದ ಇ.ಮಂಜುನಾಥ, ಗೌನಹಳ್ಳಿ ಗೋವಿಂದಪ್ಪ, ಮಾಜಿ ತಾ.ಪಂ. ಸದಸ್ಯರಾದ ಹೆಚ್.ಆಂಜನೇಯ, ಸುರೇಶ್‌ಬಾಬು, ಬಾಲರಾಜ್, ಮೂಡಲಗಿರಿಯಪ್ಪ, ಕೃಷ್ಣಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours