ಕೂನಬೇವು ಗ್ರಾ.ಪಂ.ನೂತನ ಅಧ್ಯಕ್ಷರಾಗಿ ಎಸ್.ಪಾಲಯ್ಯ ಅವಿರೋಧ ಆಯ್ಕೆ

 

ಚಿತ್ರದುರ್ಗ: ತಾಲೂಕಿನ ಕೂನಬೇವು ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಗ್ರಾಪಂ ಅಧ್ಯಕ್ಷರಾಗಿ ಎಸ್.ಪಾಲಯ್ಯ ಹುಣಸೇಕಟ್ಟೆ, ಉಪಾಧ್ಯಕ್ಷರಾಗಿ ಪವಿತ್ರ ಕೂನಬೇವು ಅವರುಗಳು ಅವಿರೋಧ ಆಯ್ಕೆಯಾಗಿದ್ದಾರೆ.

ಜೂನ್-9 ರಂದು ಶುಕ್ರವಾರ ನಡೆದ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಚುನಾವಣಾಧಿಕಾರಿಯಾಗಿ ಪರಮೇಶ್ವರಪ್ಪ, ಕೂನಬೇವು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲೋಕೇಶ್.ಬಿ, ಕಾರ್ಯದರ್ಶಿ ಪ್ರಶಾಂತ.ಟಿ.ಪಿ ಇವರ ನೇತೃತ್ವದಲ್ಲಿ ಚುನಾವಣೆ ನಡೆಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಬೋರಮ್ಮ, ನಾಗರಾಜ್, ಮಂಜಣ್ಣ, ಜ್ಯೋತಿ.ಆರ್, ಐಶ್ವರ್ಯ.ಜಿ, ತಿಪ್ಪೇಸ್ವಾಮಿ.ಜಿ, ರತ್ನಮ್ಮ, ಅರ್ಚನ.ಪಿ.ಜಿ, ಯಶೋದಮ್ಮ, ಪದ್ಮ.ಟಿ, ಕವಿತಮ್ಮ, ಎಸ್.ಬಿ.ಜಯಣ್ಣ, ಪ್ರಕಾಶ್, ಮಂಜಮ್ಮ.ಟಿ ಹಾಗೂ ಗ್ರಾಮಸ್ಥರು ಉಪಸ್ಥಿರಿದ್ದರು.

[t4b-ticker]

You May Also Like

More From Author

+ There are no comments

Add yours