ಸ್ಟ್ರಾಂಗ್ ರೂಮ್ ಹಾಗೂ ಚೆಕ್ ಪೋಸ್ಟ್‍ಗಳಿಗೆ ಜಿಲ್ಲಾಧಿಕಾರಿ ಭೇಟಿ

 

ಚಿತ್ರದುರ್ಗ(ಕರ್ನಾಟಕ ವಾರ್ತೆ).ಏ:17:
ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಅವರು ಹೊಳಲ್ಕೆರೆ ಹಾಗೂ ಹೊಸದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧೆಡೆ ಸ್ಥಾಪಿಸಲಾಗಿರುವ ಚೆಕ್‍ಪೋಸ್ಟ್ ಹಾಗೂ ಸ್ಟ್ರಾಂಗ್ ರೂಮ್‍ಗೆ ಸೋಮವಾರ ಭೇಟಿ ನೀಡಿದರು.
ಹೊಳಲ್ಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದುಮ್ಮಿ, ಹೊಸದುರ್ಗ ಕ್ಷೇತ್ರದ ಅಗಳಕೇರಿ ಹ್ಯಾಡ್ ಚೆಕ್ ಪೋಸ್ಟ್, ಹರಿಯನಹಳ್ಳಿ (ಬೆಲಗೂರು) ಚೆಕ್ ಪೋಸ್ಟ್‍ಗಳಿಗೆ ತೆರಳಿ ಸ್ಥಾನಿಕ ತಪಾಸಣೆ ತಂಡಗಳ ಕಾರ್ಯ ವೈಖರಿ ಪರಿಶೀಲನೆ ನಡೆಸಿದರು.
ಹೊಳಲ್ಕೆರೆ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಹೊಸದುರ್ಗ ನಗರದ ಶ್ರೀಮತಿ ತಾಯಮ್ಮ ಮತ್ತು ಎಡತೋರೆ ಸದ್ದಿವಾಲ್ ಲಿಂಗಯ್ಯ ಸರ್ಕಾರಿ ಪದವಿ ಪೂರ್ವ ಕಾಲೇಜುನಲ್ಲಿ ಸ್ಥಾಪಿಸಿರುವ ಸ್ಟ್ರಾಂಗ್ ರೂಮ್ ವ್ಯವಸ್ಥೆ ವೀಕ್ಷಿಸಿದರು. ನಂತರ ಕಡಿಮೆ ಮತದಾನ ದಾಖಲಾದ ಹೊಸದುರ್ಗ ಕ್ಷೇತ್ರದ ಕಬ್ಬಳ ಹಾಗೂ ಹೊಳಲ್ಕೆರೆ ಕ್ಷೇತ್ರದ ದುಮ್ಮಿಗೆ ಭೇಟಿ ನೀಡಿ 80 ವಯೋಮಾನ ದಾಟಿದ ಹಾಗೂ ಅಂಗವಿಕಲ ಮತದಾರರೊಂದಿಗೆ ಸಮಾಲೋಚನೆ ನಡೆಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರುಶುರಾಮ್, ಹೊಸದುರ್ಗ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಮಹೇಂದ್ರ ಕುಮಾರ್, ಸಹಾಯಕ ಚುನಾವಣಾಧಿಕಾರಿ ಪಟ್ಟರಾಜೇಗೌಡ, ಹೊಳಲ್ಕೆರೆ ಸಹಾಯಕ ಚುನಾವಣಾಧಿಕಾರಿ ಎನ್.ಜಿ.ನಾಗರಾಜ ಸೇರಿದಂತೆ ಇತರರು ಇದ್ದರು.

[t4b-ticker]

You May Also Like

More From Author

+ There are no comments

Add yours