ಎಂಪಿ ಎಂಎಲ್ಎ ಮಧ್ಯೆ ಗಲಾಟೆ , ಎಂಪಿಯನ್ನು ಹೊರ ದಬ್ಬಿದ ಎಸ್ಪಿ

 

ಕೋಲಾರ: ಸಂಸದ ಮುನಿಸ್ವಾಮಿ (MP Muniswamy) ಮತ್ತು ಬಂಗಾರಪೇಟೆ ಶಾಸಕ ಎಸ್.ಎನ್ ನಾರಾಯಣಸ್ವಾಮಿ (MLA SN Narayanaswamy) ಇಬ್ಬರು ವೇದಿಕೆ ಮೇಲೆ ಜಗಳ ಮಾಡಿಕೊಂಡಿದ್ದಾರೆ. ಇಬ್ಬರ ಜಗಳ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಕೂಡಲೇ ಮಧ್ಯ ಪ್ರವೇಶಿಸಿದ ಪೊಲೀಸರು ಇಬ್ಬರು ನಾಯಕರನ್ನು ವೇದಿಕೆಯಿಂದ ಕೆಳಗೆ ಕರೆದುಕೊಂಡು ಬಂದು ಸಮಾಧಾನ ಮಾಡಿದರು.

ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮದಲ್ಲಿ (Janata Darshana Program) ಈ ಘಟನೆ ನಡೆದಿದೆ. ಸಂಸದ ಎಸ್.ಮುನಿಸ್ವಾಮಿ ಮತ್ತು ಬಂಗಾರಪೇಟೆ ಶಾಸಕ (Bangarapet MLA) ಎಸ್.ನಾರಾಯಣಸ್ವಾಮಿ ನಡುವೆ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದಾರೆ. ಬೋ.. ಮಗನೇ, ಅಪ್ಪನಿಗೆ ಹುಟ್ಟಿದ್ರೆ ಸಾಬೀತು ಮಾಡು ಎಂದು ನಾರಾಯಣಸ್ವಾಮಿ ಕೂಗಾಟ ನಡೆಸಿದರು.

ಇಂದು ಕೋಲಾರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಜನತಾ ದರ್ಶನ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್, ಜಿಲ್ಲಾಧಿಕಾರಿ ಅಕ್ರಂ ಪಾಷಾ, ಎಸ್​​​ಪಿ ನಾರಾಯಣ್ ಹಾಗೂ ಸ್ಥಳೀಯ ಶಾಸಕರು ಭಾಗಿಯಾಗಿದ್ದರು.

ಇಬ್ಬರ ನಡುವೆ ವಾಕ್ಸಮರ

ಭೂಗಳ್ಳರನ್ನು ಪಕ್ಕದಲ್ಲಿ ಇಟ್ಟುಕೊಂಡು ಕಾರ್ಯಕ್ರಮ ಮಾಡುತ್ತಿದಿರಿ ಎಂದು ಸಂಸದ ಎಸ್.ಮುನಿಸ್ವಾಮಿ ನೇರವಾಗಿ ಬಂಗಾರಪೇಟೆಯ ಶಾಸಕರ ವಿರುದ್ಧ ವೇದಿಕೆ ಮೇಲೆಯೇ ಆರೋಪ ಮಾಡಿದರು. ಇದರಿಂದ ಕೆಂಡಾಮಂಡಲರಾದ ಶಾಸಕ ನಾರಾಯಣಸ್ವಾಮಿ, ಜನಪ್ರತಿನಿಧಿಗೆ ಮರ್ಯಾದೆ

ಕೊಟ್ಟು ಮಾತನಾಡಿ ಎಂದು ತಿರುಗೇಟು ನೀಡಿದರು.

ಕೊನೆಗೆ ಇಬ್ಬರ ಮಾತಿನ ವಾಕ್ಸಮರ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಕೂಡಲೇ ಮಧ್ಯ ಪ್ರವೇಶ ಮಾಡಿದ ಎಸ್​ಪಿ ನಾರಾಯಣ್, ಸಂಸದ ಮುನಿಸ್ವಾಮಿ ಅವರನ್ನು ಕಾರ್ಯಕ್ರಮದಿಂದ ಹೊರಗೆ ಕರೆದುಕೊಂಡು ಬಂದು ಸಮಾಧಾನಪಡಿಸಿದರು.

ಇತ್ತ ಸಚಿವ ಬೈರತಿ ಸುರೇಶ್ ಅವರು ಶಾಸಕರನ್ನು ಸಮಾಧಾನಗೊಳಿಸಿದರು. ಕೆಲ ಸಮಯದ ಬಳಿಕ ಮುನಿಸ್ವಾಮಿ ವೇದಿಕೆಗೆ ಆಗಮಿಸಿದರು.

ವಿಡಿಯೋ ವೈರಲ್ ಜನಪ್ರತಿನಿಧಿಗಳು ಅನ್ನೋದನ್ನು ನೋಡದೇ ಅಧಿಕಾರಿಗಳು ಮತ್ತು ಸಾರ್ವಜನಿಕರ ಮುಂದೆ ಕಿತ್ತಾಡಿಕೊಂಡ ನಾಯಕರ ವಿಡಿಯೋವನ್ನು ಜನರು ತಮ್ಮ ಮೊಬೈಲ್​ಗಳಲ್ಲಿ ಸೆರೆ ಹಿಡಿದುಕೊಂಡಿದ್ದಾರೆ.

[t4b-ticker]

You May Also Like

More From Author

+ There are no comments

Add yours