ರಸ್ತೆ ಅಗಲೀಕರಣಕ್ಕೆ ಜನರು ಸಹಕಾರ ನೀಡಬೇಕು:ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

ಚಿತ್ರದುರ್ಗ:ಸೆ:13: ಎಲ್ಲಾ ಕಡೆಗಳಲ್ಲಿ ರಸ್ತೆ ಅಗಲೀಕರಣ ಮಾಡುತ್ತಿದ್ದು ಜನರು ಸಹಕಾರ ನೀಡಿದರೆ ಸುಂದರವಾದ ರಸ್ತೆಗಳು ನಿರ್ಮಾಣವಾಗುತ್ತವೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.

ನಗರದ   ಸ್ಟೇಡಿಯಂ ರಸ್ತೆಯಲ್ಲಿ ಅಪರ್ ಭದ್ರಾ ಅನುದಾನದಲ್ಲಿ  5.5 ಕೋಟಿ ವೆಚ್ಚದ ಸಿ.ಸಿ.ರಸ್ತೆ ಕಾಮಗಾರಿ  ಮತ್ತು ಲೋಕೋಪಯೋಗಿ ಇಲಾಖೆಯಿಂದ  4.5ಕೋಟಿ ಅನುದಾನದಲ್ಲಿ  ತಾಲೂಕಿನ ಕುರುಮರಡಿಕೆರೆ ಗ್ರಾಮದಲ್ಲಿ ಡಾಂಬರೀಕರಣ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ವೈಶಾಲಿಯಿಂದ  ಸ್ಟೇಡಿಯಂವರೆಗೆ ಎರಡು  ಬದಿಗಳಲ್ಲಿ ಸಾಧ್ಯವಾದಷ್ಟು  ಮರಗಳನ್ನು  ಉಳಿಸಿಕೊಂಡು ಸಿ.ಸಿ.ರಸ್ತೆ ಮಾಡಲು 5ಕೋಟಿ 50 ಲಕ್ಷ ವೆಚ್ಚದಲ್ಲಿ ಸಿ.ಸಿ.ರಸ್ತೆಯನ್ನು ಮಾಡಲು ಹಣ ನೀಡಿದ್ದೇನೆ. ಸಾರ್ವಜನಿಕರು ರಸ್ತೆ ಅಗಲೀಕರಣ ಸಂದರ್ಭದಲ್ಲಿ ಉತ್ತಮ ಸಹಕಾರ  ನೀಡಿದರೆ ನಿಮಗೆ ಅನುಕೂಲವಾಗುತ್ತದೆ. ಸಣ್ಣ ಪುಟ್ಟ ವ್ಯಾಪರಸ್ಥರಿಗೆ ತೊಂದರೆ ಆದರು ರಸ್ತೆ ಕಾಮಗಾರಿ ಮುಗಿದ ನಂತರ ಎಲ್ಲಾ‌ ಸರಿ ಹೋಗುತ್ತದೆ ಎಂದರು.
ಮಳೆ ಸ್ವಲ್ಪ ಹೆಚ್ಚಾಗಿದ್ದು ಪರಿಸ್ಥಿತಿ ನೋಡಿಕೊಂಡು ವೇಗವಾಗಿ ಕಾಮಗಾರಿ ಮಾಡಿ ಮುಗುಸಬೇಕು. ರಸ್ತೆಯ ಗುಣಮಟ್ಟ ಕಾಪಾಡಿಕೊಳ್ಳಬೇಕು ಎಂದು ಸೂಚಿಸಿದರು.
ರಸ್ತೆಯಲ್ಲಿನ ಮರಗಳನ್ನು ಅಗತ್ಯ ಮತ್ತು ತುಂಬಾ ಅಡಚಣೆ ಅದರೆ ತೆಗೆಯಲು ತಿಳಿಸಿದ್ದೇನೆ. ಒಂದು ಮರ ತೆಗೆದರೆ ಅದಕ್ಕೆ ಹತ್ತು ಮರಗಳನ್ನು ನೆಟ್ಟು ಪೋಷಿಸುವ ಕೆಲಸ ಮಾಡಲಾಗುತ್ತದೆ.ನಾನುಬಸಹ ಪರಿಸರ ಸ್ನೇಹಿಯಾಗಿದ್ದು ಎಲ್ಲಾರಿಗಿಂತ ಹೆಚ್ಚಿನ ಕಾಳಜಿ ಇದೆ. ಮರ ತೆಗೆಯುವ ಕಡೆ ಬದಲಿ ಮರ ನೆಡಲು ಸ್ಥಳಾವಕಾಶ ಮಾಡಿ ಎಂದು ಸೂಚನೆ ನೀಡಿದರು.
ರಸ್ತೆಯ ಮಧ್ಯದಲ್ಲಿ ಇರುವ ವಿದ್ಯುತ್  ಕಂಬಗಳನ್ನು ಜನರಿಗೆ ತೊಂದರೆ ಆಗದಂತೆ  ತುರ್ತಾಗಿ ಸ್ಥಳಾಂತರಿಸಬೇಕು ಎಂದು ಇಂಜಿನಿಯರ್ ಅವರಿಗೆ ತಿಳಿಸಿದರು.
ನಗರಸಭೆ ಸದಸ್ಯರಾದ ಶ್ರೀದೇವಿ ಚಕ್ರವರ್ತಿ, ಹರೀಶ್, ಶ್ರೀನಿವಾಸ್, ನಗರಾಭಿವೃದ್ಧಿ  ಪ್ರಾಧಿಕಾರ ಸದಸ್ಯ ರೈತರಾಜು, ಮುಖಂಡರಾದ  ಪ್ರಶಾಂತ್, ಚಕ್ರವರ್ತಿ ಮತ್ತು ಮುಖಂಡರು ಇದ್ದರು.
ಕುರುಮರಡಿಕೆರೆ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ: ಚಾಲನೆ: ತಾಲೂಕಿನ ಕುರುಮರಡಿಕೆರೆ ಗ್ರಾಮದಲ್ಲಿ  ಕುರುಮರಡಿಕೆರೆ ಗ್ರಾಮದಿಂದ  ಕೆನ್ನೆಡಲು ಕ್ರಾಸ್ ವರೆಗೆ 5 ಕೋಟಿ ವೆಚ್ಚದಲ್ಲಿ ಡಾಂಬರೀಕರಣ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ ಹಲವಾರು ವರ್ಷಗಳಿಂದ ಕುರುಮರಡಿಕೆರೆ, ಕೆನ್ನೆಡಲು, ಯರೇಹಳ್ಳಿ,  ಚಿಕ್ಕಸಿದ್ದವ್ವನಹಳ್ಳಿ ಸೇರಿ ಅನೇಕ ಹಳ್ಳಿಯ ಜನರು ಬೇಡಿಕೆ ಇಟ್ಟಿದ್ದರು. ಅದರಂತೆ 4.5  ಕೋಟಿ ವೆಚ್ಚದಲ್ಲಿ ಹಣವನ್ನು ನೀಡಿದ್ದೇನೆ. ಸಾವಿರಾರು ರೈತರು ಹೂ, ಹಣ್ಣು, ತರಕಾರಿ ಸೇರಿ ರೈತರು ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲು ಅನುಕೂಲವಾಗುತ್ತದೆ ಎಂದರು. ಕೆನ್ನೆಡಲು ಗ್ರಾಮದಿಂದ ಯರೇಹಳ್ಳಿ ವರೆಗೆ ರಸ್ತೆ ಅಭಿವೃದ್ಧಿಗೆ ಮುಂದಿನ ದಿನದಲ್ಲಿ ಅನುದಾನ ನೀಡಲಾಗುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ  ಗ್ರಾಮ ಪಂಚಾಯತಿ  ಸದಸ್ಯ ಮಹೇಶ್, ಪ್ರಕಾಶ್,ರಾಜಪ್ಪ, ಗ್ರಾ.ಪಂ.ಪಿಡಿಓ ವಿದ್ಯಾಶ್ರೀ, ಮುಖಂಡರಾದ ಉಮೇಶ್, ರಾಜಣ್ಣ ರೆಡ್ಡಿ, ಹನುಮಂತರೆಡ್ಡಿ, ನಿಂಗಪ್ಪ, ಜಯ್ಯಪ್ಪ ಮತ್ತು ಗ್ರಾಮಸ್ಥರು ಇದ್ದರು.
[t4b-ticker]

You May Also Like

More From Author

+ There are no comments

Add yours