ಕೆರೆ ಕೋಡಿ , ಹಳ್ಳಕೊಳ್ಳ , ತೊರೆ ತುಂಬಿವೆ ಎಚ್ಚರ , ಡೇಂಜರ್‌ ಹಾಟ್ ಸ್ಪಾಟ್‌..!

 

ಪರಶುರಾಂಪುರ: ಹಲವು ವಷ೯ಗಳ ನಂತರ ಬಹುತೇಕ ಡ್ಯಾಂ, ಕೆರೆಗಳು ಕೋಡಿಬಿದ್ದಿವೆ. ಇನ್ನು ಕೆಲವು ಕೆರೆಗಳು ಕೋಡಿ ಬೀಳಲು ಕ್ಷಣಗಣನೆ ಶುರುವಾಗಿದೆ. ಆದರೆ ಕೆರೆ , ಹಳ್ಳ ಕೊಳ್ಳಗಳು , ತೊರೆಗಳು ಚೆಕ್ ಡ್ಯಾಂ , ಕೋಡಿಗಳ ಜಲವೈಭವವೇ ಈಗ ಹಲವರ ಸಾವಿಗೆ ಕಾರಣವಾಗಿದ್ದು, ಡೇಂಜರ್‌ ಸ್ಪಾಟ್‌ ಗಳಾಗಿ ಪರಿವರ್ತನೆಯಾಗಿವೆ.

ಜಿಲ್ಲೆಯ ಚಳ್ಳಕೆರೆ ತಾಲೂಕಿನ ಪರಶುರಾಂಪುರ ವ್ಯಾಪ್ತಿಯ ಬಹುತೇಕ ಕೆರೆಗಳು ಕೋಡಿ ಬಿದ್ದಿದ್ದು, ಹಲವು ಹಾಟ್‌ ಸ್ಪಾಟ್‌ಗಳಾಗಿವೆ. ಈ ಕೆರೆಗಳ ಸೌಂದರ್ಯ ಸವಿಯಲು ನೂರಾರು ಜನರು ಸೇರುತ್ತಿದ್ದಾರೆ. ಅದರಲ್ಲೂ ವೇದಾವತಿ ನದಿಯಲ್ಲಿರುವ ಚೆಕ್ ಡ್ಯಾಂ , ಚೌಳೂರು ಬ್ಯಾರೆಜ್ ಕಂ ಬ್ರಿಡ್ಜ್ , ಅಲ್ಲಾಪುರ ಬಳಿ ಇರುವ ಮೈಸೂರು ಒಡೆಯರ ಕಾಲದ ಬ್ರಿಡ್ಜ್ , ಪರಶುರಾಂಪುರ- ಕೋರ್ಲಕುಂಟೆ ರಸ್ತೆಯಲ್ಲಿರುವ ಖಾನೆ ಹಳ್ಳ ಹೀಗೆ ನೋಡಲು ಬರುವವರ ಸಂಖ್ಯೆ ಹೆಚ್ಚು.

ಕೆಲಸ ಮುಗಿಸಿ ಮನೆ ಸೇರುವ ಯುವಕರು ನೀರಿನ ರಭಸಕ್ಕೆ ಕೊಚ್ಚಿ ಹೋಗಿ ಶವವಾಗಿ ಪತ್ತೆ.

ಸುಮಾರು ಎಂಟೆತ್ತು ಕೆರೆ ನೀರು ಸೇರಿ ಹರಿಯುವ ಖಾನೆ ಹಳ್ಳ ಇಂದಿಗೂ ಡೇಂಜರ್ ಹಾಟ್ ಸ್ಪಾಟ್ ಆಗಿದೆ. ಸದರಿ ಹಳ್ಳದಲ್ಲಿ ತಾಲೂಕಿನ ಕೊರ್ಲಕುಂಟೆ ಗ್ರಾಮದ ಓಬಳೇಶ್ , ಕುಮಾರ್ , ಮಂಜುನಾಥ ಇವರು ಗಾರೆ ಕೆಲಸ ಮುಗಿಸಿಕೊಂಡು ಸೋಮವಾರ ರಾತ್ರಿ ಮನೆಗೆ ಬರುವ ವೇಳೆಯಲ್ಲಿ ಖಾನೆ ಹಳ್ಳ ದಲ್ಲಿನ ನೀರಿನ ರಭಸಕ್ಕೆ ಬೈಕ್ ಸಮೇತ ಕೊಚ್ಚಿ ಹೋಗಿದ್ದಾರೆ.ಅದೃಷ್ಠ ವಸಾತ್ ಮಂಜುನಾಥ ದಡ ಸೇರಿದ ಆದರೆ ಕುಮಾರ್ ಹಾಗೂ ಓಬಳೇಶ್ ಪತ್ತೆಯಾಗಲಿಲ್ಲಾ ರಾತ್ರಿ ಸ್ಥಳೀಯರ ಸಹಕಾರದಿಂದ ಪೊಲೀಸ್ ಇಲಾಖೆಯು ಶೋಧಕಾರ್ಯ ನಡೆಯಿತು . ಮಂಗಳವಾರ ಅಗ್ನಿಶಾಮಕ ದಳ ಹಾಗೂ ಪೊಲೀಸ್ ಜತೆ ಸ್ಥಳೀಯರೊಂದಿಗೆ ಶೋಧಕಾರ್ಯದಲ್ಲಿ ಓಬಳೇಶ್ (35) , ಕುಮಾರ್ (35) ಮೃತ ದೇಹ ಪತ್ತೆಯಾಗಿದೆ.

ಮಳೆ ನಿಂತರೂ ಖಾನೆಹಳ್ಳ ನೀರು ಇನ್ನೂ ನಿಂತಿಲ್ಲ .

ಈ ಹಳ್ಳದಲ್ಲಿ ಸುಮಾರು ಆರೇಳು ಜನ ಬೈಕ್ , ಎತ್ತಿನ ಗಾಡಿಯಲ್ಲಿ ಹೋಗುವವರು ನೀರಿನ ರಭಸಕ್ಕೆ ಕೊಚ್ಚಿ ಹೋದವರನ್ನು ಸ್ಥಳೀಯರ ಸಮಯ ಪ್ರಜ್ಞೆಯಲ್ಲಿ ಬದುಕಿದ್ದಾರೆ.ಆದರೆ ಬೈಕ್ ಗಳು ಗ್ಯಾರೇಜ್ ಸೇರಿದರೆ ಇಲ್ಲಿ ಮಳೆ ನಿಂತರೂ ಖಾನೆಹಳ್ಳ ನೀರು ನಿಲ್ಲದೆ ಡೇಂಜರ್ ಹಾಟ್ ಸ್ಪಾಟ್ ಆಗಿದೆ.ಈ ರಸ್ತೆಯು ಅಂತರ್ ರಾಜ್ಯ ಪ್ರಮುಖ ರಸ್ತೆಯಾಗಿ ಸೀಮಾಂಧ್ರದ ಅನಂತಪುರ,ಕಲ್ಯಾಣದುಗ೯ , ತಿಪ್ಪಾರೆಡ್ಡಿಹಳ್ಳಿ , ಓಬಳಾಪುರ , ಜಾಜೂರು, ಪಗಡಲಬಂಡೆ , ಕೊರ್ಲಕುಂಟೆ ಸೇರಿದಂತೆ ಹಲವು ಗ್ರಾಮೀಣ ಪ್ರದೇಶದ ಪ್ರಮುಖ ರಸ್ತೆಯಾಗಿದೆ.

ಇನ್ನು ರಭಸವಾಗಿ ಹರಿಯುವ ಕೋಡಿ ನೀರಿನಲ್ಲಿ ಈಜಾಡುವುದು, ಮೋಜು ಮಸ್ತಿ ಮಾಡುವುದು ಕೂಡಾ ನಡೆಯುತ್ತಿದೆ. ಇನ್ನೊಂದೆಡೆ ಸೆಲ್ಫಿ ಗೀಳು ಕೂಡಾ ಹೆಚ್ಚಾಗಿದೆ. ಕೆರೆಗಳ ಕೋಡಿ ಜೊತೆಗೆ ಪಕ್ಕದಲ್ಲೇ ಇರುವ ಸಣ್ಣ-ಸಣ್ಣ ಹಳ್ಳಗಳಲ್ಲೂ ಈಜಲು ಹೋಗುತ್ತಿದ್ದು ಅಪಾಯವನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ.
ಈಗೆ ಹಲವೆಡೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆಗಳು ನಡೆದಿತ್ತಿರುವುದರಿಂದ ಆತಂಕ ಹೆಚ್ಚಿದೆ.

ವಾಣಿ ವಿಲಾಸ ಸಾಗರದ ಜತೆ ಕೋಡಿ ಹರಿಯುತ್ತಿದ್ದು, ವೇದಾವತಿ ನದಿಲ್ಲಿರುವ ಬ್ಯಾರೇಜ್ ಗಳು ಬಳಿ ತನ್ನ ಮಿತಿ ಮೀರು ನೀರು ಸಂಗ್ರಹಣೆಯೋಂದಿಗೆ ಹರಿಯುವ ಜಾಗಗಳೂ ಕೂಡಾ ಅಪಾಯಕಾರಿ ಸ್ಥಳಗಳಿವೆ ಹಾಗಾಗಿ ಸಾವ೯ಜನಿಕರು ಎಚ್ಚರ ವಹಿಸಬೇಕು.

ಹೋಬಳಿ ವ್ಯಾಪ್ತಿಯಲ್ಲಿ ನೀರಿನಿಂದ ಮೃತ ಪಟ್ಟವರ ವಿವರ.

ನೀರಲ್ಲಿ ಮುಳುಗಿ ಮೃತಪಟ್ಟ ಪೊಲೀಸ್ ಇಲಾಖೆಯ ಮಾಹಿತಿ ಪ್ರಕಾರ 2020ರಲ್ಲಿ ಹಾಲಗೊಂಡನಹಳ್ಳಿ -2 , 2021ವಷ೯ದಲ್ಲಿ – ಟಿಎನ್ ಕೋಟೆ -1,ಚೌಳೂರು -1, ಹಾಲಗೋಂಡನಹಳ್ಳಿ -2 ಇಬ್ಬರು, 2022 ವಷ೯ದಲ್ಲಿ ತೊರೆಬೀರನಹಳ್ಳಿ -1,ಕಸವಿಗೊಂಡನಹಳ್ಳಿ , ಚೌಳೂರು -1,ಹಾಲಗೋಂಡನಹಳ್ಳಿ -1, ಕೊರ್ಲಕುಂಟೆ-2 ಇಬ್ಬರು ನೀರಿನಿಂದ ಮೃತ ಪಟ್ಟವರ ಮಾಹಿತಿ.

ರಿಯಾಕ್ಷನ್

ಚಳ್ಳಕೆರೆ ತಾಲೂಕಿನ ಎಲ್ಲಾ ಕಡೆಗಳಲ್ಲಿ ಕೆರೆ ,ಕಟ್ಟೆಗಳು ಬ್ಯಾರೇಜ್ ತುಂಬಿದ್ದು ಎಲ್ಲಾರೂ ಎಚ್ಚರಿಕೆಯಿಂದ ಇರಿ ಎಂದು ಕೈ ಮುಗಿದು ಹೇಳುತ್ತೇನೆ. ನನ್ನ ಕ್ಷೇತ್ರ ಪ್ರತಿಯೊಬ್ಬರು ನನ್ನ ಕುಟುಂಬದ ಸದಸ್ಯರು ಯಾರನ್ನು ಕಳೆದುಕೊಂಡು ತುಂಬಾ ನೋವಾಗುತ್ತದೆ.  ಮಕ್ಕಳನ್ನು ಮತ್ತು ಮಳೆ ಬರುವ ವೇಳೆ ನೀರು ಹರಿಯುವ ವೇಳೆ ಬೈಕ್ ನಲ್ಲಿ ಎಚ್ಚರಿಕೆಯಿಂದ ಚಲಿಸಿ.

ಶಾಸಕ ಟಿ.ರಘುಮೂರ್ತಿ

 

 

ಮಳೆಯಿಂದಾಗಿ ಕೆರೆ ಕಟ್ಟೆಗಳು ತುಂಬಿದೆ ಜೊತೆಗೆ ವೇದಾವತಿ ನದಿ ತುಂಬಿ ಹರಿಯುತ್ತಿರುವ ಕಾರಣ ಮಕ್ಕಳು , ವೃದ್ಧರು , ಮಹಿಳೆಯರು ನೀರಿಗೆ ಇಳಿಯದೆ ಎಚ್ಚರಿಕೆ ವಹಿಸಬೇಕು.ಇಲಾಖೆಯ ವತಿಯಿಂದ ಈಗಾಗಲೇ ವ್ಯಾಪ್ತಿಯಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.ಸಾವ೯ಜನಿಕರು ನೀರಿನ ಬಗ್ಗೆ ಎಚ್ಚರವಿರಲಿ ಎಂದರು.

ಕಾಂತರಾಜು ಪಿಎಸ್ಐ,ಪರಶುರಾಂಪುರ.

[t4b-ticker]

You May Also Like

More From Author

+ There are no comments

Add yours