ಚಿತ್ರದುರ್ಗ:ಹೊಸ ವರ್ಷಕ್ಕೆ ಏಳು ಸುತ್ತಿನ ಕೋಟೆಗೆ ಪ್ರವಾಸಿಗರ ಲಗ್ಗೆ

 

 

News19kannada. com. desk

ಚಿತ್ರದುರ್ಗ: (chitradurga) ಹೊಸತನ ಹೊಸದಿನದ ಆಚರಣೆಗೆ ಪ್ರವಾಸಿ ತಾಣಗಳಿಗೆ ತೆರಳುತ್ತಾರೆ. ಯುವ ಸಮೂಹ ಮೈಮರೆತು  ಚಿತ್ರದುರ್ಗ ಕೋಟೆಯಲ್ಲಿ  ಹೊಸ ವರ್ಷ ಆಚರಣೆ ಸಂಭ್ರಮಾಚರಣೆ ಮಾಡಿದ್ದಾರೆ.

ಹೌದ ಕೋಟೆನಾಡಿನ Consideration ಒಂದಾದ ಏಳು ಸುತ್ತಿನ ಕೋಟೆಗೆ   (Fort )ಯುವ ಸಮುದಾಯ ಸೋಮವಾರ ಲಗ್ಗೆ ಇಟ್ಟಿತು.. ಏಳು ಸುತ್ತಿನ ಕೋಟೆ, ಆಡುಮಲ್ಲೇಶ್ವರ, ಜೋಗಿಮಟ್ಟಿ, ಮುರುಘಾವನ ಸೇರಿ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಕೇಕ್ ಕತ್ತರಿಸಿ ಕೈ ಕೈ ಹಿಡಿದುಕೊಂಡು ಒಬ್ಬರಿಗೊಬ್ಬರು ಕೇಕ್ ತಿನಿಸುವ ಮೂಲಕ ಹೊಸ ವರ್ಷ ಸಂಭ್ರಮಾಚರಿಸಲಾಯಿತು.

ನಗರದ ಏಳು ಸುತ್ತಿನ ಕೋಟೆಗೆ ಬೆಳಗ್ಗೆ 10 ಗಂಟೆಯಿಂದಲೇ ಪ್ರವಾಸಿಗರು ಆಗಮಿಸಿದರು. ಸೂರ್ಯ ನೆತ್ತಿಯ ಮೇಲೆ ಬರುವಷ್ಟರಲ್ಲಿ ಪ್ರವಾಸಿಗರ ಸಂಖ್ಯೆ ಭಾರೀ ಹೆಚ್ಚಳವಾಯಿತು. ಇದರಿಂದ ಕೋಟೆಯ ಒಳಗೆ ಎಲ್ಲಿ ಕಣ್ಣಾಯಿಸಿದರು ಸಹ ಯುವ ಸಮೂಹ, ಪ್ರವಾಸಿಗರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಕಂಡು ಬಂದರು.

ಇದನ್ನೂ ಓದಿ: ಚಿತ್ರದುರ್ಗ-ಸಮಗ್ರ ಕೃಷಿ ಪದ್ದತಿ ಅಳವಡಿಕೆಗೆ ಸಲಹೆ

ಕಳೆದ ಬಾರಿಗಿಂತ ಹೆಚ್ಚಿನ ಪ್ರವಾಸಿಗರು ಆಗಮಿಸಿದ್ದರು.ಇದನ್ನೂ ಮೊದಲೇ ಅರಿತಿದ್ದ ಪುರಾತತ್ವ ಇಲಾಖೆ ಸೋಮವಾರ ಪ್ರತ್ಯೇಕ್ ಟಿಕೆಟ್ ವ್ಯವಸ್ಥೆ , ಕೋಟೆ ಮುಂಭಾಗದಲ್ಲಿ ಬ್ಯಾರಿಕೇಡ್‌ ಮತ್ತು ಪೋಲ್ಸ್ ಹಾಕುವ ಮೂಲಕ‌ ಕ್ಯೂ ನಲ್ಲಿ ಒಳ ಪ್ರವೇಶಿಸಲು ವ್ಯವಸ್ಥೆ ಮಾಡಲಾಗಿತ್ತು. ಎಲ್ಲಿಯೂ ನೂಕುನುಗ್ಗಲು ಆಗದಂತೆ ಕ್ರಮವಹಿಸಿತ್ತು. ಸಕಲ‌ ಸಿದ್ದತೆ ನಡೆಸಿದರು ಪ್ರವಾಸಿಗರು ಸಾಗದಂತೆ ಹರಿದು ಬಂದರು.

ತಂಡೋಪತಂಡವಾಗಿ ಕೋಟೆ ಪ್ರವೇಶಿಸಿದ ಸಾವಿರಾರು ಪ್ರವಾಸಿಗರು ಮದ್ದುಬೀಸುವ ಕಲ್ಲು, ಒಂಟಿಕಲ್ಲುಬಸವಣ್ಣ, ಬಂದಿಖಾನೆ, ತುಪ್ಪದ ಕೊಳ, ಏಕನಾಥೇಶ್ವರಿ, ಬನಶಂಕರಿ, ಹಿಡಂಬೇಶ್ವರ, ಸಂಪಿಗೆ ಸಿದ್ದೇಶ್ವರ, ಬೆಟ್ಟದ ಗಣಪತಿ, ಗೋಪಾಲಕೃಷ್ಣ ಸ್ವಾಮಿ ದೇವಸ್ಥಾನ, ಒನಕೆ ಓಬವ್ವ ಕಿಂಡಿ ಸೇರಿದಂತೆ ಮೇಲುದುರ್ಗದ ನಾನಾ ಪ್ರದೇಶಗಳಿಗೆ ಭೇಟಿ ನೀಡಿ ಹೊಸ ವರ್ಷವನ್ನು ಅದ್ದೂರಿಯಾಗಿ ಬರಮಾಡಿಕೊಂಡರು.

ಬಳ್ಳಾರಿ, ದಾವಣಗೆರೆ, ಶಿವಮೊಗ್ಗ, ಬೆಂಗಳೂರು, ಮೈಸೂರು, ತುಮಕೂರು, ಚಿಕ್ಕಮಗಳೂರು, ಸೇರಿ ರಾಜ್ಯದ ವಿವಿಧ ಭಾಗಗಳಿಂದ ಪ್ರವಾಸಿಗರು ಆಗಮಿಸಿದ ಕೋಟೆ ಸೌಂದರ್ಯವನ್ನು ಸವಿದರು.

ಕೋಟೆಗೆ ತಂಡೋಪ ತಂಡವಾಗಿ ಭೇಟಿ ನೀಡಿದ ಸಾರ್ವಜನಿಕರು ಕೇಕ್‌ ಕತ್ತರಿಸಿ ನೂತನ ವರ್ಷ ಬರಮಾಡಿಕೊಂಡರು. ಪ್ರವಾಸಿಗರು ಕೋಟೆಯ ನಾನಾ ಸ್ಥಳಗಳಲ್ಲಿ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.

[t4b-ticker]

You May Also Like

More From Author

+ There are no comments

Add yours