ಚಿತ್ರದುರ್ಗ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಅಮಾನತು

 

ಚಿತ್ರದುರ್ಗ : ಚಿತ್ರದುರ್ಗ ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ವಿ.ಕೃಷ್ಣಮೂರ್ತಿ ಮೂಲತಃ ಸಹಾಯಕ ನಿರ್ದೇಶಕರು ಗ್ರೇಡ್-2 ಸ್ವಂತ ವೇತನ ಶ್ರೇಣಿ ಮೇಲೆ ಸಹಾಯಕ ನಿರ್ದೇಶಕರು ಗ್ರೇಡ್-1 ಸಮಾಜ ಕಲ್ಯಾಣ ಇಲಾಖೆ ಚಿತ್ರದುರ್ಗ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇವರನ್ನು ಅಮಾನತ್ತುಗೊಳಿಸಲು ಆಯುಕ್ತರು, ಸಮಾಜ ಕಲ್ಯಾಣ ಇಲಾಖೆ  (Department of Social Welfare)ಗಳೂರು ಇವರು ಆದೇಶ ಮಾಡಿದ್ದಾರೆ.

ಲೋಕಯುಕ್ತ ಕೇಸ್ ದಾಖಲು ಹಿನ್ನಲೆ ಸಸ್ಪೆಂಡ್

ಪೊಲೀಸ್ ಮಹಾನಿರೀಕ್ಷಕರು. ಕರ್ನಾಟಕ ಲೋಕಾಯುಕ್ತ    (Karnataka Lokyukta)ಬೆಂಗಳೂರು ರವರ ಉಲ್ಲೇಖ (1) ರ ಪತ್ರದಲ್ಲಿ ವಿ.ಕೃಷ್ಣಮೂರ್ತಿ, ಮೂಲತಃ ಸಹಾಯಕ ನಿರ್ದೇಶಕರು ಗ್ರೇಡ್-2 ಸ್ವಂತ ವೇತನ ಶ್ರೇಣಿ ಮೇಲೆ ಸಹಾಯಕ ನಿರ್ದೇಶಕರು ಗ್ರೇಡ್-1 ಸಮಾಜ ಕಲ್ಯಾಣ ಇಲಾಖೆ. ಚಿತ್ರದುರ್ಗ (Chitradurga Social Welfare Department)ತಾಲ್ಲೂಕು. ಚಿತ್ರದುರ್ಗ ಜಿಲ್ಲೆ ಇವರ ಆದಾಯಕ್ಕಿಂತ ಹೆಚ್ಚಿನ ಸಂಪತ್ತು ಹೊಂದಿರುತ್ತಾರೆ ಎಂಬ ಮಾಹಿತಿಯ ಆಧಾರದ ಮೇಲೆ ಕೃಷ್ಣಮೂರ್ತಿ ಅವರ ವಿರುದ್ದ ಚಿತ್ರದುರ್ಗ ಲೋಕಾಯುಕ್ತ ಶಾನೆ ಇಲ್ಲಿ ಉಲ್ಲೇಖ (2) ರನ್ವಯ ಕಲಂ 13(1) (b) R/W 13(2) ಪಿ.ಸಿ.ಆ್ಯಕ್ಟ್ 1988 (ತಿದ್ದುಪಡಿ ನಿಯಮ 2018) ರ ಪ್ರಕಾರ ಮೊ.ನಂ. 12/2023 ರಂತೆ ದಿನಾಂಕ :27-10-2023 ರಲ್ಲಿ FIR ದಾಖಲಾಗಿದೆ‌

ಇದನ್ನೂ ಓದಿ: ಬರಪೀಡಿತ ಹೊಸದುರ್ಗ ತಾಲೂಕಿನಲ್ಲಿ ಕೆರೆಗಳೇ ರೈತರ ಜೀವನಾಡಿಗಳು

ಈ ಪ್ರಕರಣವನ್ನು ದಾಖಲಿಸಿದ ನಂತರ ಚಿತ್ರದುರ್ಗ ಘನ ಪ್ರಧಾನ ಜಿಲ್ಲಾ ಸತ್ರ ಮತ್ತು ವಿಶೇಷ ನ್ಯಾಯಾಲಯದಿಂದ 2-ಶೋಧನಾ ವಾರೆಂಟ್ಗಳನ್ನು ಪಡೆದುಕೊಂಡು, ಆರೋಪಿತರ 1) ವಾಸದ ಮನೆಯಾದ ಹಿರಿಯೂರು ನಗರದ 21ನೇ ವಾರ್ಡ್. ಸೈಟ್ ನಂ.02 ಖಾತೆ ನಂ.-968/2545/968. ಹುಳಿಯೂರು ರಸ್ತೆ, ಕುವೆಂಪು ನಗರ 2) ಆರೋಪಿತರು ಕರ್ತವ್ಯ ನಿರ್ವಹಿಸುತ್ತಿದ್ದ ಸಹಾಯಕ ನಿರ್ದೇಶಕರ ಕಛೇರಿ. ಸಮಾಜ ಕಲ್ಯಾಣ ಇಲಾಖೆ. ಭುವನೇಶ್ವರಿ ವೃತ್ತದ ಹತ್ತಿರ ಜೆಸಿಆರ್ ಬಡವಾಣೆ ಚಿತ್ರದುರ್ಗ ಕಚೇರಿಯನ್ನು ದಿ :03-10-2023 ರಂದು ಪಂಚಸಾಕ್ಷಿಗಳ ಸಮಕ್ಷಮ ಶೋಧಿಸಲಾಗಿರುತ್ತದೆ.

ಈ ರೀತಿಯಲ್ಲಿನ ಪ್ರಕರಣದ ಪ್ರಾಥಮಿಕ ತನಿಖೆಯಿಂದ ಅಪಾದಿತರು ಪರಿಶೀಲನಾ ಅವಧಿಯಲ್ಲಿ ತಮ್ಮ ಬಲ್ಲಮೂಲಗಳ ಅಂದಾಜು ಆದಾಯ ರೂ65.65.000 ಗಳಿಗಿಂತ ಅಸಮಾತೋಲನವಾಗಿ ರೂ.
.141.43.006/-(215.531)ಆಸ್ತಿಗಳನ್ನು ಅಸಮತೋಲನವಾಗಿ ಹೊಂದಿರುವುದು ಮೇಲ್ನೋಟಕ್ಕೆ ದೃಢಪಟ್ಟಿರುತ್ತದೆ ಎಂಬುದಾಗಿ ತನಿಖಾಧಿಕಾರಿಗಳು ವರದಿಸಿರುತ್ತಾರೆ. ಆದುದರಿಂದ ಸದರಿಯವರನ್ನು ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳದಲ್ಲಿಯೇ ಮುಂದುವರೆಸಿದಲ್ಲಿ ಪ್ರಕರಣದ ತನಿಖೆಗೆ ಅಡ್ಡಿ ಉಂಟು ಮಾಡುವ ಅಥವಾ ತನಿಖೆಯಲ್ಲಿ ಹಸ್ತಕ್ಷೇಪ ಮಾಡುವ ಹಾಗೂ ಸಾಕ್ಷಿ ಪುರಾವೆಗಳನ್ನು ನಾಶಗೊಳಿಸುವ ಸಾಧ್ಯತೆಗಳಿರುವುದರಿಂದ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತ್ತಿನಲ್ಲಿಡಲು ಹಾಗೂ ಲೀನ್ ಅನ್ನು ವರ್ಗಾವಣೆ ಮಾಡಲು ಕೋರಿರುತ್ತಾರೆ. ಲೋಕಾಯುಕ್ತ ಕಛೇರಿ ವರದಿ ಮೇರೆಗೆ ಸದರಿ ವಿರುದ್ಧ ವಿಚಾರಣೆಗೆ ನಿರ್ಧರಿಸಿರುವುದರಿಂದ ಈ ಕೆಳಕಂಡಂತೆ ಆದೇಶ, ಸೇವೆಯಿಂದ ಅಮಾನತ್ತಿನಲ್ಲಿಡಲು ಆದೇಶ ಮಾಡಲಾಗಿದೆ.

ಇದನ್ನೂ ಓದಿ: ಬೈಕ್ ಸವಾರರು ಓದಲೇಬೇಕಾದ ಸುದ್ದಿ, ಹೈಕೋರ್ಟ್ ನೀಡಿದ ತೀರ್ಪು ಏನು

ಆದೇಶದಲ್ಲಿ ಏನಿದೆ

ಪ್ರಸ್ತಾವನೆಯಲ್ಲಿ ವಿವರಿಸಿರುವಂತೆ ಡಾ|| ರಾಕೇಶ್ ಕುಮಾರ್.ಕೆ. ಬಾ.ಆ ನೇ ಆಯುಕ್ತರು ಹಾಗೂ ಶಿಸ್ತು ಪ್ರಾಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆ, ಬೆಂಗಳೂರು ಆದ ನಾನು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) 1957 ರ ನಿಯಮ 10 (1) (ಎಎ ರಡ್ಡಿ ದತ್ತವಾಗಿರುವ ಅಧಿಕಾರವನ್ನು ಬಳಸಿಕೊಂಡು ಶ್ರೀ ವಿ.ಕೃಷ್ಣಮೂರ್ತಿ, ಮೂಲತಃ ಸಹಾಯಕ ನಿರ್ದೇಶಕರು ಗ್ರೇಡ್-2 ಸ್ವಂತ ವೇತನ ಶ್ರೇಣಿ ಮೇಲೆ ಸಹಾಯಕ ನಿರ್ದೇಶಕರು ಗ್ರೇಡ್-1. ಸಮಾಜ ಕಲ್ಯಾಣ ಇಲಾಖೆ, ಚಿತ್ರದುರ್ಗ ತಾಲ್ಲೂಕು. ಚಿತ್ರದುರ್ಗ ಜಿಲ್ಲೆ ಇವರ ವಿರುದ್ಧ ವಿಚಾರಣೆ ಕಾಯ್ದಿರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತ್ತುಗೊಳಿಸಿ ಆದೇಶಿಸಿದೆ.

ಮುಂದುವರೆದು ಸದರಿ ಅಧಿಕಾರಿಯವರು ಅಮಾನತ್ತಿನ ಅವಧಿಯಲ್ಲಿ ಕೆ.ಸಿ.ಎಸ್. ನಿಯಮ 98 ರನ್ವಯ ಜೀವಾನಾಧಾರ ಭತ್ಯೆ ಪಡೆಯಲು ಅರ್ಹರಿರುತ್ತಾರೆ ಹಾಗೂ ಮೇಲಾಧಿಕ ಪೂರ್ವಾನುಮತಿ ಪಡೆಯದೇ ಕೇಂದ್ರ ಸ್ಥಾನ ಬಿಡತಕ್ಕದ್ದಲ್ಲ. 2/3

ಸದರಿ ಅಧಿಕಾರಿಯವರ ಅಮಾನತ್ತಿನ ಅವಧಿಯಲ್ಲಿ ಜೀವನಾಧಾರ ಭತ್ಯೆ ಸೆಳೆಯುವ ಸಲುವಾಗಿ ಲೀನ್ ಅನ್ನು ಶ್ರೀನಿವಾಸಪುರ ಕೋಲಾರ ಜಿಲ್ಲೆ ಇಲ್ಲಿಗೆ ಸ್ಥಳಾಂತರಿಸಲಾಗಿದೆ. ಅಧಿಕಾರಿಯವರು ಪ್ರತಿ ಮಾಹೆ ಜೀವನಾಧಾರ ಭತ್ಯೆ ಸೆಳೆಯುವ ಸಲುವಾಗಿ ಸದರಿ ಕಛೇರಿಗೆ ಮನವಿ ಸಲ್ಲಿಸಬಹುದು ಎಂದು ಆದೇಶ ನೀಡಲಾಗಿದೆ.

ಇದನ್ನೂ ಓದಿ: ಕೋವಿಡ್ ಸಂಖ್ಯೆ ಏರಿಕೆ, ಮೂರು ಬಲಿ

[t4b-ticker]

You May Also Like

More From Author

+ There are no comments

Add yours