ಬರಪೀಡಿತ ಹೊಸದುರ್ಗ ತಾಲೂಕಿನಲ್ಲಿ ಕೆರೆಗಳೇ ರೈತರ ಜೀವನಾಡಿಗಳು

 

ಹೊಸದುರ್ಗ : ಶ್ರೀ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ವೀರೇಂದ್ರ ಹೆಗ್ಗಡೆಯವರಿಗೆ ರೈತರು ಕೂಲಿ ಕಾರ್ಮಿಕರೆಂದರೆ ಪಂಚಪ್ರಾಣ ಅವರ ಆಶಯದಂತೆ ಬರಪಿಡಿತ ಹೊಸದುರ್ಗ ತಾಲೂಕಿನ ರೈತರಿಗೆ ಜನ ಜಾನುವಾರುಗಳಿಗೆ ಅನುಕೂಲವಾಗಲೆಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕೆರೆ ಹೂಳೆತ್ತುವ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕಿ ಶ್ರೀಮತಿ ಗೀತಾ ತಿಳಿಸಿದರು.

ಗರಗ, ದ್ಯಾವಜ್ಜನ ಪಾಳ್ಯದ ಗೌಡನಕಟ್ಟೆ ಕೆರೆಯನ್ನ ಗ್ರಾಮ ಪಂಚಾಯಿತಿ ಹಾಗೂ ಗ್ರಾಮಸ್ಥರಿಗೆ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಹೂಳೆತ್ತುವ ಕಾರ್ಯಕ್ರಮದ ಅಡಿಯಲ್ಲಿ ಒಟ್ಟು 1200000/- ರೂ ಗಳಷ್ಟು ಊರಿನ ಸಹಬಾಗಿತ್ವದಲ್ಲಿ ಖರ್ಚು ಮಾಡಿ ಹೂಳೆತ್ತುವ ಕಾರ್ಯಕ್ರಮವನ್ನು ಮಾಡಿ ಈ ದಿನ ಗ್ರಾಮಪಂಚಾಯಿತಿಗೆ ಹಸ್ತಾಂತರ ಮಾಡುತ್ತಿದ್ದೇವೆ ಎಂದು ತಿಳಿಸಿದರು.ಇದರ ಉಪಯೋಗವನ್ನು ಜನ ಜಾನುವಾರು ಪ್ರಾಣಿ ಪಕ್ಷಿಗಳು ಮತ್ತು ಕುಡಿಯಲು ಯೋಗ್ಯವಾದ ಶುದ್ಧನೀರನ್ನೇ ಬಳಸಬೇಕು, ಕೆರೆಯ ಸುತ್ತಮುತ್ತ ಸ್ವಚ್ಛವಾಗಿಡಬೇಕು ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಗ್ರಾಮದೇವತೆಗೆ ಪೂಜೆ ಸಲ್ಲಿಸಿ ಗಂಗೆಯನ್ನು ಮೆರವಣಿಗೆ ಮೂಲಕ ಕೆರೆಯ ಸಮೀಪಕ್ಕೆ ತರಲಾಯಿತು. ಅದ್ಧೂರಿಯಿಂದ ಮೆರವಣಿಗೆ ಮಾಡಿ ಕೆರೆ ಹಸ್ತಾಂತರ ಕಾರ್ಯಕ್ರಮವನ್ನು ನೆರವೇರಿಸಲಾಯಿತು.

ಇದನ್ನೂ ಓದಿ: ಕೋವಿಡ್ ಸಂಖ್ಯೆ ಏರಿಕೆ, ಮೂರು ಬಲಿ

ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ   (Shri Kshetra Dharmasthala)ಸಂಸ್ಥೆಯ ಜಿಲ್ಲಾ ನಿರ್ದೇಶಕ ವಿನಯ್ ಕುಮಾರ್ ಸುವರ್ಣ,ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಶ್ರೀಮತಿ ಶಂಕರಮ್ಮ ,ಕೆರೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಶಿವಣ್ಣ ಆರ್. ಅರುಣ್ ಕುಮಾರ್ ಬಿ ಜೆ. , ಶಿವಣ್ಞ ಎಸ್ ಕ್ಷೇತ್ರ ಯೋಜನಾಧಿಕಾರಿಗಳು ಸ್ವಾಗತಿಸಿ, ಭವ್ಯ ವಲಯ ಮೇಲ್ವಿಚಾರಕಿ ನಿರೂಪಿಸಿ, ಚೇತನ್ ಕುಮಾರ್ ಮೇಲ್ವಿಚಾರಕರು ವಂದಿಸಿದರು.

[t4b-ticker]

You May Also Like

More From Author

+ There are no comments

Add yours