ದ್ವಿತೀಯ ಪಿ.ಯು.ಸಿ. ಸಪ್ಲಿಮೆಂಟರಿ ಪರೀಕ್ಷೆಯಲ್ಲಿ ಅಕ್ರಮದ ವಿರುದ್ದ ಪ್ರತಿಭಟನೆ:ಕೆ.ಟಿ.ಶಿವಕುಮಾರ್

 

ಚಿತ್ರದುರ್ಗ: ಕಳೆದ ಹದಿನಾರು ಮತ್ತು ಇಪ್ಪತ್ತರಂದು ನಡೆದ ದ್ವಿತೀಯ ಪಿ.ಯು.ಸಿ. ಸಪ್ಲಿಮೆಂಟರಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದನ್ನು ವಿರೋಧಿಸಿ ಕರುನಾಡ ವಿಜಯಸೇನೆ ವತಿಯಿಂದ ಆ.೨೪ ರಂದು ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು ಕಟ್ಟಡದಲ್ಲಿರುವ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದೆಂದು ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ತಿಳಿಸಿದರು.
ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ೧೬ ರಂದು ನಡೆದ ದ್ವಿತೀಯ ಪಿ.ಯು.ಸಿ. ಸಪ್ಲಿಮೆಂಟರಿಯಲ್ಲಿ ಬೆಳಿಗ್ಗೆ ೧೦-೩೦ ರಿಂದ ಮಧ್ಯಾಹ್ನ ೧-೩೦ ರವರೆಗೆ ಹಿಂದಿ ಪರೀಕ್ಷೆ ಹಾಗೂ ಮಧ್ಯಾಹ್ನ ೨ ರಿಂದ ಸಂಜೆ ೫-೧೫ ರವರೆಗೆ ಉರ್ದು ಮತ್ತು ಸಂಸ್ಕೃತ ವಿಷಯದ ಮರುಪರೀಕ್ಷೆ ನಡೆಯಿತು. ಇದೇ ಸಂದರ್ಭದಲ್ಲಿ ಪ್ರೌಢಶಾಲೆ ಮತ್ತು ಪಿ.ಯು.ಸಿ.ತರಗತಿಗಳು ಎಂದಿನAತೆ ನಡೆಯುತ್ತಿದ್ದವು. ೨೦೦ ಮೀಟರ್ ನಿಷೇಧಾಜ್ಞೆ ಇವೆಲ್ಲವನ್ನು ಗಾಳಿಗೆ ತೂರಲಾಗಿತ್ತು. ಮರುಪರೀಕ್ಷೆಯಲ್ಲಿ ಅಕ್ರಮವಾಗಿ ನಕಲು ನಡೆಸುವುದಕ್ಕಾಗಿಯೇ ಉದ್ದೇಶಪೂರ್ವಕವಾಗಿ ಇಂತಹ ಕೃತ್ಯ ನಡೆಸಲಾಗಿದೆ. ಬಾಲಕರ ಹಾಗೂ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಚಾರ್ಯರುಗಳು ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ಇವರುಗಳನ್ನು ಸೇವೆಯಿಂದ ಕೂಡಲೆ ಅಮಾನತ್ತುಗೊಳಿಸಿ ವಿಚಾರಣೆ ನಡೆಸುವಂತೆ ಒತ್ತಾಯಿಸಿ ಕರುನಾಡ ವಿಜಯಸೇನೆ ರಾಜ್ಯ ಉಪಾಧ್ಯಕ್ಷ ಸಚ್ಚಿದಾನಂದ ಇವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಕೆ.ಟಿ.ಶಿವಕುಮಾರ್ ಹೇಳಿದರು.
ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವೀಣಗೌರಣ್ಣ, ಉಪಾಧ್ಯಕ್ಷೆ ರತ್ನಮ್ಮ. ಕಾರ್ಯದರ್ಶಿ ಜಗದೀಶ್, ನಗರಾಧ್ಯಕ್ಷ ಮಹಮದ್ ರಫಿ, ರವಿಕುಮಾರ್‌ನಾಯ್ಕ, ಮೆಹತಾಫರ್ಜಾನ,
ಕಮಲ, ಧನರಾಜ್, ಪಲ್ಲವಿ, ತುಳಸಿ ರಮೇಶ್ ಇನ್ನು ಮೊದಲಾದವರು ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು

[t4b-ticker]

You May Also Like

More From Author

+ There are no comments

Add yours