ಚಿತ್ರಕಲಾ ಶಿಕ್ಷಕನಿಗೆ ಒಲಿದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ*

 

ಚಿತ್ರಕಲಾ ಶಿಕ್ಷಕನಿಗೆ ಒಲಿದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ*
 *ಸರ್ಕಾರಿ ಪೌಢಶಾಲೆ (ಕೋಟೆ)ಯ ಬಿ.ಆರ್.ನಿರಂಜನಮೂರ್ತಿ *
2020 ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಸರ್ಕಾರಿ ಕೋಟೆ ಶಾಲೆಯ ಚಿತ್ರಕಲಾ ಶಿಕ್ಷಕರಾದ ಬಿ.ಆರ್.ನಿರಂಜನ್ ಮೂರ್ತಿ ಆಯ್ಕೆ ಯಾಗಿದ್ದಾರೆ. ಚಿತ್ರದುರ್ಗ ಜಿಲ್ಲಾ ಮಟ್ಟದ ಪ್ರೌಢಶಾಲಾ ವಿಭಾಗದಲ್ಲಿ ಒಟ್ಟು 11 ಪ್ರಶಸ್ತಿಗಳಿಗೆ ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ. ಇದರಲ್ಲಿ ವಿಶೇಷ ಶಿಕ್ಷಕ ಪ್ರಶಸ್ತಿ ಪಟ್ಟಿಯಲ್ಲಿ 3ನೇ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಬಿ.ಆರ್.ನಿರಂಜನ ಮೂರ್ತಿ ಅವರು ಚಿತ್ರಕಲೆ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಚಿತ್ರಕಲೆಯಲ್ಲಿ ಮಕ್ಕಳಿಗೆ ಆಸಕ್ತಿ ಬೆಳಸಲು ಪ್ರತಿವರ್ಷ 5 ಸಾವಿರ ವೆಚ್ಚದಲ್ಲಿ ಶಾಲಾ ಮಟ್ಟದ ವರ್ಷದ ಕಲಾವಿದ, ಕಲಾವಿದೆ ಪ್ರಶಸ್ತಿ ಪ್ರಧಾನ ಮಾಡುತ್ತಿದ್ದಾರೆ. ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ವಿಜ್ಞಾನ ಸಂಬAಧಿಸಿದAತೆ ಹೆಚ್ಚು ಚಿತ್ರಗಳನ್ನು ಕಲಿಕ ಹಾಳೆಗಳ ಮೂಲಕ ಅಭ್ಯಾಸ ಮಾಡಿಸಿ ಫಲಿತಾಂಶ ಉತ್ತಮ ಪಡಿಸುವುದು. ಡಿ.ಎಸ್.ಇ.ಆರ್.ಟಿ. ಯಿಂದ ಚಿತ್ರಕಲಾ ವಿಷಯ ತರಬೇತಿಯನ್ನು ಪಡೆದು ಸಂಪನ್ಮೂಲ ವ್ಯಕ್ತಿಯಾಗಿ ಜಿಲ್ಲೆಯ ಚಿತ್ರಕಲಾ ಶಿಕ್ಷಕರಿಗೆ ತರಬೇತಿ ನೀಡಿದ್ದಾರೆ.
ಚಿತ್ರದುರ್ಗದ ಸರ್ಕಾರಿ ಪ್ರೌಢಶಾಲೆ ಕೋಟೆ ಶಾಲೆ ಸಾಕಷ್ಟು ನೀರಿನ ತೊಂದರೆಯನ್ನು ಎದುರಿಸುತ್ತಿದ್ದ ಸಂದರ್ಭದಲ್ಲಿ 2020-21 ನೇ ಸಾಲಿನಲ್ಲಿ ಶಾಲೆಯ ಆವರಣದಲ್ಲಿ 25 ವರ್ಷಗಳಿಂದ ಅನುಪಯುಕ್ತವಾಗಿದ್ದ ಜಗ್ಗುವ ಬೋರವೆಲ್ಗೆ (ಕೊಳವೆ ಬಾವಿ) 50 ಸಾವಿರ ರೂ.ಗಳನ್ನು ಸ್ವಂತ ಹಣವನ್ನು ಖರ್ಚು ಮಾಡಿ ಮೋಟರ್ ಪಂಪ್ ಅಳವಡಿಸುವುದರ ಮೂಲಕ ಯೋಗ್ಯವಾದ ನೀರನ್ನು ಶಾಲೆಗೆ ಒದಗಿಸಿಕೊಟ್ಟಿರುವುದು, 20 ಸಾವಿರ ರೂ.ಗಳನ್ನು ಸ್ವಂತ ಖರ್ಚಿನಲ್ಲಿ ಗ್ರಂಥಾಲಯ ಕೊಠಡಿ ಸಿದ್ಧಪಡಿಸಿಕೊಂಡಿರುವುದು. 2019ರಲ್ಲಿ ಅಂಗವಿಕಲ ಮಕ್ಕಳ ಅನುಕೂಲಕ್ಕೆ ರಾಂಪ್ ಸಿದ್ಧಪಡಿಸಲು 5000 ರೂ.ಗಳನ್ನು ಖರ್ಚು ಮಾಡಿರುವುದು ಶ್ಲಾಘನೀಯವಾಗಿದೆ.
ಸರ್ಕಾರಿ ಕೋಟೆ ಶಾಲೆಗೆ ದಾನಿಗಳ ನೆರವು ಪಡೆದು 35.000 ವೆಚ್ಚದ 4 ಗ್ರೀನ್ ಬೋರ್ಡ್ ಗಳನ್ನು ಅಳವಡಿಸಿದ್ದಾರೆ. ಮತ್ತು 50 ಸಾವಿರ ವೆಚ್ಚದಲ್ಲಿ ಶಾಲೆಯ ಕೊಠಡಿಗಳಿಗೆ ಬಣ್ಣವನ್ನು ಬಳಿಸಲು ದಾನಿಗಳ ನೆರವು ಪಡೆಯುವುದರ ಮೂಲಕ ಶಾಲೆಯ ಅಭಿವೃದ್ಧಿಗಾಗಿ ಶ್ರಮವಹಿಸಿದ್ದಾರೆ. ಜೊತೆಗೆ ಶಾಲೆಯ ವಿದ್ಯಾರ್ಥಿಗಳಿಗೆ ಐತಿಹಾಸಿಕ ಹಿನ್ನೆಲೆ ಸಾರುವಂತ ನಾಟಕ ಪ್ರದರ್ಶನಗಳನ್ನು ಸ್ವಾತಂತ್ರ‍್ಯ ದಿನಾಚರಣೆ ಗಣರಾಜ್ಯೋತ್ಸವ, ಕನ್ನಡ ರಾಜ್ಯೋತ್ಸವ ದಿನಗಳಲ್ಲಿ ಸಾರ್ವಜನಿಕರ ಸ್ಥಳಗಳಲ್ಲಿ ಪ್ರದರ್ಶನವ ಮಾಡುವುದರ ಮೂಲಕ ನೋಡುಗರರಿಗೆ ಆನಂದವನ್ನುAಟು ಮಾಡುವ ರೀತಿಯಲ್ಲಿ ಮಕ್ಕಳಿಂದ ಪ್ರದರ್ಶನವನ್ನು ಮಾಡಿಸಿದ್ದಾರೆ. ಒಗ್ಗಟ್ಟಿನಲ್ಲಿ ಜಿಲ್ಲಾ ಮಟ್ಟದ ವಿಶೇಷ ಶಿಕ್ಷಕರ ವಿಭಾಗದಲ್ಲಿ ಜಿಲ್ಲಾ ಮಟ್ಟದ ಪ್ರಶಸ್ತಿಗೆ ಬಿ.ಆರ್ ನಿರಂಜನ್ ಮೂರ್ತಿಯವರು ಆಯ್ಕೆ ಆಗಿರುವುದು ಚಿತ್ರದುರ್ಗ ಜಿಲ್ಲೆಯ ಶಿಕ್ಷಣ ಇಲಾಖೆಗೆ ಸಂತಸ ತಂದಿದೆ.
ಬರಹ: ಆನಂದ್.ಡಿ.ಆಲಘಟ್ಟ
ಚಿತ್ರದುರ್ಗ
[t4b-ticker]

You May Also Like

More From Author

+ There are no comments

Add yours