ಸುಜಾತ ಅವರಿಗೆ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ

 

.ಸುಜಾತ ಉತ್ತಮ ಶಿಕ್ಷಕಿ

ಭರಮಸಾಗರ

೨೦೨೨-೨೩ನೇ ಸಾಲಿನ ದಾವಣಗೆರೆ ಜಿಲ್ಲೆಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭರಮಸಾಗರದವರಾದ ಶಿಕ್ಷಕಿ ಬಿ.ಸುಜಾತ ಭಾಜನರಾಗಿದ್ದಾರೆ.
ಪ್ರಸ್ತುತ ದಾವಣಗೆರೆ ಉತ್ತರ ವಲಯ ಹೊನ್ನೂರು ಗ್ರಾಮದ ಪಂಪಾರೂಢ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಇವರು ಭರಮಸಾಗರ, ಚಿಕ್ಕಬೆನ್ನೂರು, ಇಸಾಮುದ್ರ ಗ್ರಾಮಗಳಲ್ಲೂ ಸೇವೆ ಸಲ್ಲಿಸಿ ವಿದ್ಯಾರ್ಥಿಗಳ ಮನಸ್ಸುಗೆದ್ದಿದ್ದರು. ಇವರ ಬಳಿ ವ್ಯಾಸಂಗ ಮಾಡಿದವರು ದೊಡ್ಡ ದೊಡ್ಡ ಹುದ್ದೆಯಲ್ಲಿದ್ದಾರೆ. ಉತ್ತಮ ಸಂಗೀತಗಾರ್ತಿಯೂ ಆಗಿರುವ ಇವರು ಹಿಂದಿ ಸೇರಿದಂತೆ ಎಲ್ಲಾ ವಿಷಯಗಳಲ್ಲೂ ಬೋಧನೆಯನ್ನು ಕರಗತಮಾಡಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಉತ್ತಮ ಹಿಂದಿ ಶಿಕ್ಷಕಿ ಪ್ರಶಸ್ತಿ, ಅನುಪಮ ಸೇವಾ ರತ್ನ ಪ್ರಶಸ್ತಿ, ಧರ್ಮಸ್ಥಳ ಸಂಘ ಸೇರಿದಂತೆ ವಿವಿದ ಸಂಘಟನೆಗಳಿAದಲೂ ಉತ್ತಮ ಶಿಕ್ಷಕಿ ಪ್ರಶಸ್ತಿಗಳು ದೊರೆತಿವೆ. ೩೪ ವರ್ಷದಿಂದ ಶಿಕ್ಷಕಿ ವೃತ್ತಿಯಲ್ಲಿದ್ದಾರೆ. ಸದಾ ಕ್ರಿಯಾಶೀಲರಾಗಿ ವಿದ್ಯಾರ್ಥಿಗಳ ಹಾಗೂ ಶಾಲೆಯ ಅಭಿವೃದ್ಧಿಗಾಗಿ ಗುಣಾತ್ಮಕ ಶಿಕ್ಷಣಕ್ಕಾಗಿ, ಶಾಲಾ ಕ್ರೀಡಾ ಚಟುವಟಿಕೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ, ಶ್ರಮಿಸಿರುವುದನ್ನು ಗುರುತಿಸಿ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ. ಸದ್ಯ ದಾವಣಗೆರೆಯಲ್ಲಿ ವಾಸವಾಗಿರುವ ಇವರು ಭರಮಸಾಗರದ ನಿವೃತ್ತ ಖ್ಯಾತ ಶಿಕ್ಷಕ ದಿವಂಗತ ಬಿ.ಎನ್.ಭೀಮರಾವ್ ರವರ ಪುತ್ರಿಯಾಗಿದ್ದು ಶಿಕ್ಷಕ ವೃತ್ತಿಗೆ ಗ್ರಾಮಕ್ಕೆ ಹೆಸರು ತಂದಿರುವುದಕ್ಕೆ ಸ್ಥಳೀಯರು ಅಭಿನಂದಿಸಿದ್ದಾರೆ.

ಚಿತ್ರ ಬಿ.ಸುಜಾತ

[t4b-ticker]

You May Also Like

More From Author

+ There are no comments

Add yours